ಚೆನ್ನೈ (ತಮಿಳುನಾಡು): ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಪಂದ್ಯ ಕ್ರೀಡಾಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಪಾಕಿಸ್ತಾನ ಸೆಮಿಸ್ಗೇರಲು ಇದು ಮಾಡು ಇಲ್ಲವೇ ಮಡಿ ಪಂದ್ಯ. ಇನ್ನೊಂದೆಡೆ, ಭಾರತ ರಾಬಿನ್ ರೌಂಡ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಸೆಮಿಫೈನಲ್ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿದೆ.
ಏಷ್ಯಾಡ್ನಲ್ಲಿ ಭಾರತ ಉತ್ತಮ ಲಯದಲ್ಲಿದ್ದು, ನಾಲ್ಕು ಪಂದ್ಯದಲ್ಲಿ 3ನ್ನು ಗೆದ್ದು ಒಂದರಲ್ಲಿ ಡ್ರಾ ಸಾಧಿಸಿ 10 ಅಂಕಗಳಿಂದ ಟಾಪ್ ತಂಡವಾಗಿ ಹೊರಹೊಮ್ಮಿದೆ. ಚೀನಾ (7-2 ಗೋಲು), ಮಲೇಷ್ಯಾ (5-0) ಮತ್ತು ದಕ್ಷಿಣ ಕೊರಿಯಾ ತಂಡದೆದುರು (3-2) ರಿಂದ ಭಾರತ ಜಯಭೇರಿ ಸಾಧಿಸಿತ್ತು. ಜಪಾನ್ (1-1) ಎದುರು ಮಾತ್ರ ಡ್ರಾ ಮೂಲಕ ಪಂದ್ಯ ಅಂತ್ಯವಾಗಿತ್ತು.
-
The big day is here! A new chapter will be added to the historic rivalry of India & Pakistan, as the teams face off in the final match of the group stages of the Hero Asian Champions Trophy today!
— International Hockey Federation (@FIH_Hockey) August 9, 2023 " class="align-text-top noRightClick twitterSection" data="
🏑 - India vs Pakistan
⏰ - 20:30 IST
📲 - Follow LIVE on https://t.co/71D0pOq2OG pic.twitter.com/K9fF5UC7ed
">The big day is here! A new chapter will be added to the historic rivalry of India & Pakistan, as the teams face off in the final match of the group stages of the Hero Asian Champions Trophy today!
— International Hockey Federation (@FIH_Hockey) August 9, 2023
🏑 - India vs Pakistan
⏰ - 20:30 IST
📲 - Follow LIVE on https://t.co/71D0pOq2OG pic.twitter.com/K9fF5UC7edThe big day is here! A new chapter will be added to the historic rivalry of India & Pakistan, as the teams face off in the final match of the group stages of the Hero Asian Champions Trophy today!
— International Hockey Federation (@FIH_Hockey) August 9, 2023
🏑 - India vs Pakistan
⏰ - 20:30 IST
📲 - Follow LIVE on https://t.co/71D0pOq2OG pic.twitter.com/K9fF5UC7ed
ಪಾಕಿಸ್ತಾನ ಆಡಿರುವ ನಾಲ್ಕು ಪಂದ್ಯಗ ಪೈಕಿ 1ರಲ್ಲಿ ಗೆದ್ದು, ಮೂರರಲ್ಲಿ ಡ್ರಾ ಸಾಧಿಸಿದೆ. ಇಂದಿನ ಪಂದ್ಯವನ್ನೂ ಡ್ರಾ ಮಾಡಿಕೊಂಡಲ್ಲಿ ಅಥವಾ ಗೆದ್ದಲ್ಲಿ ಮಾತ್ರ ಮುಂದಿನ ಹಂತವಾದ ಸೆಮಿಸ್ಗೆ ಪ್ರವೇಶ ಪಡೆಯಲು ಸಾಧ್ಯವಿದೆ. ಇಂದು ರೌಂಡ್ ರಾಬಿನ್ ಸುತ್ತಿನಲ್ಲಿ ಚೀನಾ ಮತ್ತು ಜಪಾನ್ ಮುಖಾಮುಖಿ ಆಗುತ್ತಿವೆ. ಪಂದ್ಯದಲ್ಲಿ ಜಪಾನ್ ಜಯಶಾಲಿಯಾದರೆ ಪಾಕಿಸ್ತಾನದ ಹಾದಿ ಕಠಿಣವಾಗಲಿದೆ. ಹಾಗಾಗಿ ಸೆಮಿಸ್ ಪ್ರವೇಶಕ್ಕೆ ಭಾರತದ ವಿರುದ್ಧ ಗೆಲುವು ಅನಿವಾರ್ಯ. ಸದ್ಯ ಪಾಕ್ ಅಂಕಪಟ್ಟಿಯಲ್ಲಿ 5 ಅಂಕ ಹೊಂದಿದೆ.
ಭಾರತಕ್ಕೆ ಗೆಲುವಿನ ರೇಟಿಂಗ್ ಹೆಚ್ಚಿದೆ. ಇದಕ್ಕೆ ಕಾರಣ ಅನುಭವಿಗಳ ಬಲ. ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ, 16ನೇ ರ್‍ಯಾಂಕಿಂಗ್ ಮತ್ತು ಹೆಚ್ಚು ಯುವ ಆಟಗಾರರನ್ನೇ ಒಳಗೊಂಡಿರುವ ಪಾಕಿಸ್ತಾನವನ್ನು ಸುಲಭವಾಗಿ ಮಣಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸೆಮಿಫೈನಲ್ಗೆ ಅರ್ಹತೆ ಪಡೆಯಲು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯೂ ಇದೆ.
ಭಾರತ- ಪಾಕಿಸ್ತಾನ ಎರಡೂ ತಂಡಗಳು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ತಲಾ ಮೂರು ಚಾಂಪಿಯನ್ ಆಗಿವೆ. ಕೊನೆಯ ಬಾರಿಗೆ, ಜಕಾರ್ತಾದಲ್ಲಿ ನಡೆದ 2022ರ ಏಷ್ಯಾ ಕಪ್ನಲ್ಲಿ ಮುಖಾಮುಖಿ ಆಗಿದ್ದಾಗ ಪಂದ್ಯ 1-1 ಡ್ರಾ ಆಗಿತ್ತು. 2016ರಲ್ಲಿ ಭಾರತ ಎಸ್ಎಎಫ್ ಗೇಮ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋಲುಂಡಿತ್ತು. ನಂತರ ಉಭಯ ತಂಡಗಳು 14 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಭಾರತ 12 ರಲ್ಲಿ ಗೆದ್ದು, ಎರಡರಲ್ಲಿ ಡ್ರಾ ಸಾಧಿಸಿದೆ.
ಇಂದಿನ ಪಂದ್ಯ ಎಲ್ಲಿ?: ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣ, ಚೆನ್ನೈ
ಸಮಯ: ರಾತ್ರಿ 8:30ಕ್ಕೆ.
ಇದನ್ನೂ ಓದಿ: ವಿಶ್ವ ಯೂನಿರ್ವಸಿಟಿ ಗೇಮ್ಸ್‌ನಲ್ಲಿ ಭಾರತಕ್ಕೆ ದಾಖಲೆಯ 26 ಪದಕ: ಅಥ್ಲೀಟ್‌ಗಳಿಗೆ ಶುಭಾಶಯ ಕೋರಿದ ಪ್ರಧಾನಿ