ETV Bharat / sports

ಏಷ್ಯಾ ಕಪ್ ಹಾಕಿ: ಎದುರಾಳಿ ಪಾಕ್​ ವಿರುದ್ಧ 1-1 ಅಂತರದಲ್ಲಿ ಡ್ರಾ ಸಾಧಿಸಿದ ಭಾರತ - ಭಾರತ ಪಾಕಿಸ್ತಾನ ಪಂದ್ಯ ಡ್ರಾ

ಹೀರೋ ಏಷ್ಯಾಕಪ್​​ ಹಾಕಿ ಟೂರ್ನಮೆಂಟ್​ನ ಮೊದಲ ಪಂದ್ಯದಲ್ಲಿ ಎದುರಾಳಿ ಪಾಕ್​ ವಿರುದ್ಧ ಮೆಲುಗೈ ಸಾಧಿಸಿದ್ದ ಭಾರತ, ಕೊನೆ ಕ್ಷಣದಲ್ಲಿ ಮಾಡಿರುವ ತಪ್ಪಿನಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

Asia cup hockey
Asia cup hockey
author img

By

Published : May 23, 2022, 7:22 PM IST

ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ಆರಂಭಗೊಂಡಿರುವ ಏಷ್ಯಾ ಕಪ್ ಹಾಕಿಯ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಭಾರತ ಡ್ರಾ ಸಾಧಿಸಿದ್ದು, ಈ ಮೂಲಕ ತನ್ನ ಅಭಿಯಾನ ಆರಂಭ ಮಾಡಿದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದ ಭಾರತ, ಇಂದಿನ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತು.

ಆರಂಭದಲ್ಲೇ ಗೋಲು ಗಳಿಸುವಲ್ಲಿ ಯಶಸ್ವಿಯಾಗಿದ್ದ ಭಾರತ ಮುನ್ನಡೆ ಸಾಧಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಾಕ್​​ ಪೆನಾಲ್ಟಿ ಕಾರ್ನರ್​​ನಲ್ಲಿ ಪಾಯಿಂಟ್​​​ ಗಳಿಕೆ ಮಾಡಿದ್ದರಿಂದ ಉಭಯ ತಂಡಗಳ ನಡುವಿನ ಪಂದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ. ಮೊದಲ ಕ್ವಾರ್ಟರ್​​ನಲ್ಲೇ ಗೋಲು ಗಳಿಕೆ ಮಾಡಿದ್ದ ಭಾರತ, ಎದುರಾಳಿ ಪಾಕ್​ ವಿರುದ್ಧ ಪ್ರಾಬಲ್ಯ ಮೆರೆದಿತ್ತು.

ಆದರೆ, ಆಟ ಮುಕ್ತಾಯಗೊಳ್ಳಲು ಕೇವಲ ಕೆಲ ನಿಮಿಷ ಬಾಕಿ ಇರುವಾಗ ಪೆನಾಲ್ಟಿ ಕಾರ್ನರ್​ ಅವಕಾಶ ಪಡೆದುಕೊಂಡ ಪಾಕ್​, ಅದನ್ನ ಗೋಲಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಯಿತು. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್​ ಹಾಕಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ದು, ಭಾರತ, ಪಾಕಿಸ್ತಾನ,ಜಪಾನ್, ಇಂಡೋನೇಷ್ಯಾ, ಮಲೇಷ್ಯಾ, ಕೊರಿಯಾ, ಒಮನ್​ ಮತ್ತು ಬಾಂಗ್ಲಾದೇಶ ಇವೆ.

ಇದನ್ನೂ ಓದಿ: ಬರೋಬ್ಬರಿ 72 ಮರಿಗಳಿಗೆ ಜನ್ಮ ನೀಡಿದ ಎರಡು ಮೊಸಳೆ.. ಅರಣ್ಯ ಸಿಬ್ಬಂದಿಯಿಂದ ತೀವ್ರ ನಿಗಾ

ಮುಂದಿನ ಪಂದ್ಯದಲ್ಲಿ ಭಾರತ ಜಪಾನ್ ಹಾಗೂ ಆತಿಥೇಯ ಇಂಡೋನೆಷ್ಯಾ ವಿರುದ್ಧ ಸೆಣಸಾಟ ನಡೆಸಲಿದ್ದು, ಜೂನ್ 1ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಲಾ 3 ಸಲ ಚಾಂಪಿಯನ್​ ಆಗಿ ಹೊರಹೊಮ್ಮಿವೆ. ಕಳೆದ ವರ್ಷ ಒಲಿಂಪಿಕ್ಸ್​​ನಲ್ಲಿ ಭಾರತ ಕಂಚಿನ ಪದಕ ಗೆದ್ದು ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಸಲದ ಏಷ್ಯಾಕಪ್​​ನಲ್ಲಿ ಚಾಂಪಿಯನ್​ ಆಗುವ ಫೆವರೀಟ್ ತಂಡಗಳಲ್ಲಿ ಒಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.