ETV Bharat / sports

ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿ: ಅಮಿತ್​ ಪಂಗಲ್ ಐತಿಹಾಸಿಕ ಸಾಧನೆ​ - ಬಾಕ್ಸಿಂಗ್​ ಪಟು ಅಮಿತ್​ ಪಂಗಲ್

ಭಾರತದ ಬಾಕ್ಸಿಂಗ್​ ಪಟು ಅಮಿತ್​ ಪಂಗಲ್​ ರಷ್ಯಾದ ಎಕಟೆರಿನ್ಬರ್ಗ್​ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನ 52 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಅಮಿತ್​ ಪಂಗಲ್​​
author img

By

Published : Sep 21, 2019, 8:49 PM IST

ಎಕಟೆರಿನ್ಬರ್ಗ್ (ರಷ್ಯಾ): ಭಾರತದ ಬಾಕ್ಸಿಂಗ್​ ಪಟು ಅಮಿತ್​ ಪಂಗಲ್​ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನ 52 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಫೈನಲ್​ನಲ್ಲಿ ಉಜ್ಬೇಕಿಸ್ತಾನದ ಶಖೋಬಿಡಿನ್ ಜೊಯಿರೊವ್ ವಿರುದ್ಧ ಸೋಲುಂಡು ಚಿನ್ನದ ಪದಕದಿಂದ ವಂಚಿತರಾದರು.

ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನ ಫೈನಲ್​​ ಪ್ರವೇಶಿಸಿದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದ ಅಮಿತ್​ ಪಂಗಲ್ 5-0 ಅಂಕಗಳಿಂದ ಸೋಲುಂಡರು. ಚಿನ್ನ ಜಯಿಸದಿದ್ದರೂ ಕೂಡ ಬೆಳ್ಳಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಅವರು ಪಾತ್ರರಾದರು. ಸೆಮಿಫೈನಲ್​ನಲ್ಲಿ ​ಸಾಕೆನ್ ಬಿಬೊಸಿನೋವ್ ಅವರನ್ನು 3-2 ಅಂಕಗಳಿಂದ ಸೋಲಿಸಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ ತಲುಪಿದ್ದರು.

ಇದಕ್ಕೂ ಮುನ್ನ ಶುಕ್ರವಾರ, ಭಾರತದ ಮತ್ತೋರ್ವ ಬಾಕ್ಸಿಂಗ್​ ಪಟು ಮನೀಶ್ ಕೌಶಿಕ್ ಅವರು ಸೆಮಿಫೈನಲ್​ನಲ್ಲಿ ಕಂಚಿನ ಪದಕ ಜಯಸಿದ್ದರು. ಈ ಹಿಂದೆ ವಿಜೇಂದರ್ ಸಿಂಗ್ (2009), ವಿಕಾಸ್ ಕ್ರಿಶನ್ (2011), ಶಿವ ಥಾಪಾ (2015) ಮತ್ತು ಗೌರವ್ ಬಿಧುರಿ (2017) ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ಗೆದ್ದಿದ್ದರು.

Intro:Body:

Amit Panghal loses World Boxing Championships finals, settles for silver

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.