ಅಡಿಲೇಡ್(ಆಸ್ಟ್ರೇಲಿಯಾ): ಕಳಪೆ ರಕ್ಷಣೆ, ಚೆಂಡಿನ ಮೇಲೆ ಹಿಡಿತ ಸಾಧಿಸಲಾಗದೇ, ಆಕಾಶದೀಪ್ ಸಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲುಗಳು ನೀರಿನಲ್ಲಿ ಹೋಮವಾದಂತೆ ಆಸ್ಟ್ರೇಲಿಯಾ ವಿರುದ್ಧ ಇಂದಿನಿಂದ ಆರಂಭವಾದ 5 ಪಂದ್ಯಗಳ ಟೆಸ್ಟ್ ಹಾಕಿ ಸರಣಿಯ ಪ್ರಥಮ ಸೆಣಸಾಟದಲ್ಲಿ ಭಾರತ 4-5 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.
ಅಡಿಲೇಡ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಕೊನೆಯ ಕ್ಷಣದಲ್ಲಿ ಚುರುಕಿನ ಪ್ರದರ್ಶನ ನೀಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿತು. ಗೆಲ್ಲುವ ಆಟವನ್ನು ಕೈಚೆಲ್ಲಿದ ಭಾರತ ತನ್ನದೇ ತಪ್ಪಿನಿಂದಾಗಿ ನಿರಾಸೆ ಅನುಭವಿಸಿತು.
-
India loses out to Australia in the last second of this nail-biting encounter.
— Hockey India (@TheHockeyIndia) November 26, 2022 " class="align-text-top noRightClick twitterSection" data="
It ends Australia 5:4 India in the first Test match.#HockeyIndia #IndiaKaGame @CMO_Odisha @sports_odisha @IndiaSports @Media_SAI pic.twitter.com/stoCTsBK7y
">India loses out to Australia in the last second of this nail-biting encounter.
— Hockey India (@TheHockeyIndia) November 26, 2022
It ends Australia 5:4 India in the first Test match.#HockeyIndia #IndiaKaGame @CMO_Odisha @sports_odisha @IndiaSports @Media_SAI pic.twitter.com/stoCTsBK7yIndia loses out to Australia in the last second of this nail-biting encounter.
— Hockey India (@TheHockeyIndia) November 26, 2022
It ends Australia 5:4 India in the first Test match.#HockeyIndia #IndiaKaGame @CMO_Odisha @sports_odisha @IndiaSports @Media_SAI pic.twitter.com/stoCTsBK7y
ಆಕಾಶ್ದೀಪ್ ಸಿಂಗ್ ಮಿಂಚಿನ ಸಂಚಲನ: ಪಂದ್ಯದಲ್ಲಿ ಪೂರ್ಣ ಪ್ರಾಬಲ್ಯ ಮೆರೆದ ಭಾರತದ ಆಕಾಶದೀಪ್ ಸಿಂಗ್ 10ನೇ, 27ನೇ, 59ನೇ ನಿಮಿಷದಲ್ಲಿ ಮೂರು ಗೋಲು ಬಾರಿಸಿ ಕಾಂಗರೂಗಳ ನಿದ್ದೆಗೆಡಿಸಿದರು. ಸಿಂಗ್ರ ಚುರುಕಿನ ಆಟದ ಮುಂದೆ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕೆಲಹೊತ್ತು ದಂಗಾಗಿತ್ತು.
ಆಸ್ಟ್ರೇಲಿಯಾದ ಲಾಚ್ಲಾನ್ ಶಾರ್ಪ್ 5ನೇ ನಿಮಿಷದಲ್ಲಿ ಭಾರತದ ಭದ್ರಕೋಟೆಯನ್ನು ಭೇದಿಸಿ ಗೋಲು ಗಳಿಸಿದರು. 1-0 ಮುನ್ನಡೆ ಪಡೆದ ಆಸ್ಟ್ರೇಲಿಯಾಕ್ಕೆ ಆಕಾಶ್ದೀಪ್ ಸಿಂಗ್ 10 ನೇ ನಿಮಿಷದಲ್ಲಿ ಗೋಲು ಬಾರಿಸಿ 1-1 ಸಮಬಲ ಸಾಧಿಸುವಂತೆ ಮಾಡಿದರು.
ಇದಾದ ಬಳಿಕ 21 ನೇ ನಿಮಿಷದಲ್ಲಿ ಭಾರತೀಯರ ಕಳಪೆ ರಕ್ಷಣೆಯನ್ನು ಬಳಸಿಕೊಂಡ ಆಸೀಸ್ನ ನಾಥನ್ ಎಫ್ರಾಮ್ಸ್ ಮತ್ತೊಂದು ಗೋಲು ಬಾರಿಸಿದರು. 2-1 ರಲ್ಲಿ ಸಾಗುತ್ತಿದ್ದ ಆಸ್ಟ್ರೇಲಿಯಾಗೆ 5 ನಿಮಿಷದ ಅಂತರದಲ್ಲಿ ಆಕಾಶದೀಪ್ ಸಿಂಗ್ ರಿವರ್ಸ್ ಹಿಟ್ ಬಾರಿಸಿದ ಚೆಂಡು ಗೋಲು ಪೆಟ್ಟಿಗೆಯಲ್ಲಿ ಭದ್ರವಾಯಿತು. 2-2 ರಲ್ಲಿ ಗೋಲುಗಳಿಂದ ಪಂದ್ಯ ರೋಚಕ ಕದನವಾಗಿ ಪರಿಣಮಿಸಿತು.
ಕೆಲಹೊತ್ತು ಮೈದಾನದಿಂದ ಹೊರನಡೆದಿದ್ದ ನಾಯಕ ಹರ್ಮನ್ಪ್ರೀತ್ ಸಿಂಗ್ ಮರಳಿದ ತಕ್ಷಣವೇ ದಾಳಿಗಿಳಿದು 31 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ಭರ್ಜರಿ ಗೋಲು ಬಾರಿಸಿದರು. ಇದರಿಂದ ಭಾರತ 3-2 ರಲ್ಲಿ ಮುನ್ನಡೆ ಸಾಧಿಸಿತು. ನಂತರ ಸಿಕ್ಕ 2 ಪೆನಾಲ್ಟಿ ಕಾರ್ನರ್ಗಳನ್ನು ಭಾರತದ ಆಟಗಾರರು ಹಾಳು ಮಾಡಿದರು.
ತಿರುಗಿಬಿದ್ದ ಆಸೀಸ್: ಮೊದಲಾರ್ಧದಲ್ಲಿ 3-2 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಆಸ್ಟ್ರೇಲಿಯಾ ಎರಡನೇ ಅವಧಿಯಲ್ಲಿ ಚುರುಕಿನ ಆಟಕ್ಕಿಳಿಯಿತು. ಪಂದ್ಯ ಮರು ಆರಂಭವಾದ ಬಳಿಕ 41 ನಿಮಿಷದಲ್ಲಿ ಟಾಮ್ ಕ್ರೇಗ್ ಗೋಲು ಬಾರಿಸಿದರು. ಇದರಿಂದ ವಿಚಲಿತರಾದ ಭಾರತದ ಆಟಗಾರರು ಪದೇ ಪದೇ ತಪ್ಪು ಮಾಡಿದರು. ಚೆಂಡನ್ನು ಹಿಡಿತಕ್ಕೆ ಪಡೆಯಲು ಹೆಣಗಾಡಿದರು.
ಸಿಕ್ಕ ಅವಕಾಶಗಳನ್ನು ಗೋಲಾಗಿ ಮಾಡದೇ ಅವಕಾಶ ಕೈಚೆಲ್ಲಿದರು. ಈ ವೇಳೆ, ಮೈದಾನದಲ್ಲಿ ವೇಗವಾಗಿ ಸಂಚರಿಸಿದ ಆಸೀಸ್ ಆಟಗಾರರು ದಾಳಿ ಮುಂದುವರಿಸಿದರು. ಪಂದ್ಯ ಮುಗಿಯಲು ಕೆಲವೇ ನಿಮಿಷ ಇದ್ದಾಗ ಬ್ಲೇಕ್ ಗೋವರ್ಸ್ (57 ನೇ ನಿ) ಫ್ಲಿಕ್ ಮಾಡುವ ಮೂಲಕ ಗೋಲು ಮಾಡಿದರು. ಇದಾದ ಮರುಕ್ಷಣವೇ ಆಕಾಶದೀಪ್ ಸಿಂಗ್ 59 ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು.
4- 4 ಗೋಲುಗಳಿಂದ ಪಂದ್ಯ ಇನ್ನೇನು ಡ್ರಾ ಆಗಲಿದೆ ಎಂದು ಭಾವಿಸಿದ್ದ ಆಟಗಾರರಿಗೆ ಕಾಂಗರೂ ಪಡೆಯ ಬ್ಲೇಕ್ ಗೋವರ್ಸ್ ಶಾಕ್ ನೀಡಿ ಪಂದ್ಯ ಮುಗಿಯುವ ಕೊನೆಯ ಕ್ಷಣದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಮಾಡಿ 5-4 ರಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿದರು. ಇದರಿಂದ 5 ಪಂದ್ಯಗಳ ಸರಣಿಯಲ್ಲಿ ಆಸೀಸ್ 1-0 ಮುನ್ನಡೆ ಪಡೆಯಿತು. ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.