ಬ್ಯೂನಸ್ ಐರಿಸ್: ಭಾರತೀಯ ಮಹಿಳಾ ಹಾಕಿ ತಂಡ ಅರ್ಜೆಂಟಿನಾ ವಿರುದ್ಧದ ಪಂದ್ಯದಲ್ಲಿ 1-1 ರಿಂದ ಸಮಬಲ ಸಾಧಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಭಾರತ ಪರ ನಾಯಕಿ ರಾಣಿ 35 ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಅರ್ಜೆಂಟಿನಾದ ಎಮಿಲಿಯಾ ಫೋರ್ಚೆರಿಯೊ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿ ಪಂದ್ಯವನ್ನು ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುನ್ನ ಭಾರತ ತಂಡ ಅರ್ಜೆಂಟಿನಾ ಜೂನಿಯರ್ ತಂಡದ ವಿರುದ್ಧ 2-2, 1-1 ಗೋಲುಗಳಿಂದ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಮತ್ತು ಅರ್ಜೆಂಟಿನಾ 'ಬಿ' ತಂಡದ ವಿರುದ್ಧ 1-2, 2-3ರಿಂದ ಸೋಲು ಕಂಡಿತ್ತು.
ಇದನ್ನೂ ಓದಿ : ಪಿಎಂ ಶ್ಲಾಘನೆ ನಮಗೆ ಒತ್ತಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆತ್ಮವಿಶ್ವಾಸ ಹೆಚ್ಚಿಸಿದೆ: ಶಾಸ್ತ್ರಿ