ETV Bharat / sports

ಭಾರತ ಹಾಕಿ ತಂಡದ ನಾಯಕ ಮನ್​ಪ್ರೀತ್​ ಸಿಂಗ್​ ಸೇರಿ ನಾಲ್ವರು ಆಟಗಾರರಿಗೆ ಸೋಂಕು

author img

By

Published : Aug 8, 2020, 12:17 PM IST

ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಪಾಸಿಟಿವ್​ ವರದಿ ಪಡೆದಿರುವ ಮನ್‌ಪ್ರೀತ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳಿಂದ ವೈರಸ್ ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಕ್ವಾರಂಟೈನ್​ನಲ್ಲಿರಿಸಲಾಗಿದೆ..

ಭಾರತ ಹಾಕಿ ತಂಡ
ಮನ್​ಪ್ರೀತ್​ ಸಿಂಗ್​

ಬೆಂಗಳೂರು : ದೀರ್ಘ ವಿರಾಮದ ಬಳಿಕ ಬೆಂಗಳೂರಿನ ಎಸ್​ಎಐ ದಕ್ಷಿಣ ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಮರಳಿರುವ ಎಲ್ಲಾ ಆಟಗಾರರಿಗೆ ಕೊರೊನಾ ಟೆಸ್ಟ್ ​ಮಾಡಿಸಲಾಗಿದೆ. ಈ ವೇಳೆ ಭಾರತ ತಂಡದ ನಾಯಕ ಮನ್​ಪ್ರೀತ್​ ಸಿಂಗ್​ಗೆ ಸೇರಿ 4 ಆಟಗಾರರಿಗೆ ಪಾಸಿಟಿವ್​ ವರದಿ ಬಂದಿದೆ.

ಶಿಬಿರಕ್ಕೆ ಮರಳುವ ಎಲ್ಲಾ ಆಟಗಾರರಿಗೆ ಕೋವಿಡ್​ 19 ಟೆಸ್ಟ್​ ಮಾಡಿಸುವುದನ್ನು ಎಸ್​ಎಐ ಕಡ್ಡಾಯಗೊಳಿಸಿತ್ತು. ಇದೀಗ ನಾಲ್ಕು ಆಟಗಾರರಿಗೆ ಪಾಸಿಟಿವ್​ ಬಂದಿರುವುದರಿಂದ ಜೊತೆಯಲ್ಲಿ ಪ್ರಯಾಣಿಸಿದ ಇತರರಿಗೂ ವೈರಸ್​ ಸೋಂಕು ತಗಲುವ ಸಾಧ್ಯತೆಯಿದೆ.

ಮನ್​ಪ್ರೀತ್​ ಸಿಂಗ್​
ಮನ್​ಪ್ರೀತ್​ ಸಿಂಗ್​

ಮೊದಲ ಪರೀಕ್ಷೆಯಲ್ಲಿ ಈ ನಾಲ್ಬರಿಗೂ ನಕಾರಾತ್ಮಕ ಫಲಿತಾಂಶ ಬಂದಿತ್ತು. ಆದರೆ, ಮನ್​ಪ್ರೀತ್​ ಮತ್ತು ಸುರೇಂದ್ರಗೆ ಕೆಲವು ಕೋವಿಡ್​ ಲಕ್ಷಣಗಳು ಕಂಡು ಬಂದಿದ್ದರಿಂದ ಅವರಿಬ್ಬರನ್ನು ಸೇರಿದಂತೆ ಅವರ ಜೊತೆ ಪ್ರಯಾಣಿಸಿದ್ದ ಎಲ್ಲಾ 10 ಪ್ರಯಾಣಿಕರಿಗೆ ಗುರುವಾರ ಆರ್​ಟಿ-ಪಿಸಿಆರ್​ ಪರೀಕ್ಷೆ ನಡೆಸಲಾಯಿತು. ಈ ವೇಳೆ ನಾಲ್ವರು ಆಟಗಾರರಿಗೆ ಕೋವಿಡ್​ ಪಾಸಿಟಿವ್​ ಇರುವುದು ದೃಡಪಟ್ಟಿದೆ.

ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಪಾಸಿಟಿವ್​ ವರದಿ ಪಡೆದಿರುವ ಮನ್‌ಪ್ರೀತ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳಿಂದ ವೈರಸ್ ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಕ್ವಾರಂಟೈನ್​ನಲ್ಲಿರಿಸಲಾಗಿದೆ.

ನಾನು ಎಸ್‌ಎಐ ಕ್ಯಾಂಪಸ್‌ನಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದೇನೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ನನಗೆ ತುಂಬಾ ತೃಪ್ತಿ ನೀಡಿದೆ. ನಾನು ಲವಲವಿಕೆಯಿಂದಲೇ ಇದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇದೆ ಎಂದು ಮನ್​ಪ್ರೀತ್ ಸಿಂಗ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.