ETV Bharat / sports

Asian Champions Trophy : ಚಾಂಪಿಯನ್​​ ಜಪಾನ್ ವಿರುದ್ಧ 6-0 ಅಂತರದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಭಾರತ - ಜಪಾನ್ ಮಣಿಸಿದ ಭಾರತ ಹಾಕಿ ತಂಡ

ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿದರೆ , ಬಾಂಗ್ಲಾದೇಶ ಪಂದ್ಯದಲ್ಲಿ 9-0 ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿತ್ತು..

Asian Champions Trophy
ಏಷ್ಯನ್ ಹಾಕಿ ಚಾಂಪಿಯನ್‌
author img

By

Published : Dec 19, 2021, 5:54 PM IST

ಢಾಕಾ : ಭಾರತ ಹಾಕಿ ತಂಡ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್‌ನ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ 6-0 ಗೋಲುಗಳ ಅಂತರದಿಂದ ಹಾಲಿ ಚಾಂಪಿಯನ್​ ಜಪಾನ್ ವಿರುದ್ಧ ಗೆಲುವು ಸಾಧಿಸಿದೆ. ಈಗಾಗಲೇ ಸೆಮಿಫೈನಲ್​ ಪ್ರವೇಶ ಖಚಿತಪಡಿಸಿಕೊಂಡಿದ್ದ ಭಾರತ ಇಂದು ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.

ಪೆನಾಲ್ಟಿ ಕಾರ್ನರ್​ ಮೂಲಕ ಮೊದಲ ಗೋಲು ಸಿಡಿಸಿದ ಭಾರತಕ್ಕೆ ದಿಲ್ಪ್ರೀತ್ ಸಿಂಗ್ 2ನೇ ಗೋಲು ಸಿಡಿಸಿ ಮೊದಲಾರ್ಧದಲ್ಲಿ 2-0ಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.

ನಂತರ ಜರ್ಮನ್​ಪ್ರೀತ್ ಸಿಂಗ್, ಸುಮಿತ್, ನಾಯಕ ಮನ್​ಪ್ರೀತ್​ ಹಾಗೂ ಶಮ್ಸೆರ್​ ಸಿಂಗ್ ದ್ವಿತೀಯಾರ್ಧದಲ್ಲಿ 2 ಗೋಲು ಸಿಡಿಸಿದ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿದರೆ , ಬಾಂಗ್ಲಾದೇಶ ಪಂದ್ಯದಲ್ಲಿ 9-0 ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ:Vijay Hazare Trophy : ರಾಜಸ್ಥಾನ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.