ETV Bharat / sports

ಬಿಡುವಿನ ಸಮಯದಲ್ಲಿ ಹಾಕಿ ಟೀಂ ಏನು ಮಾಡುತ್ತಿದೆ ಗೊತ್ತಾ?

author img

By

Published : Mar 24, 2020, 5:25 PM IST

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಕೀರ್ಣದಲ್ಲಿ ಬೀಡು ಬಿಟ್ಟಿರುವ ಭಾರತೀಯ ಹಾಕಿ ತಂಡದ ಸದಸ್ಯರು ತಮ್ಮ ಇಂಗ್ಲಿಷ್ ಭಾಷೆಯನ್ನು ಸುಧಾರಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಿದ್ದಾರೆ. ಜೊತೆಗೆ ಮೆಚ್ಚಿನ ಪುಸ್ತಕ ಓದುವುದು, ಸಿನಿಮಾ ನೋಡುವುದರಲ್ಲಿ ಕೆಲವರು ಬ್ಯುಸಿ ಆಗಿದ್ದಾರಂತೆ.

ಹಾಕಿ ಇಂಡಿಯಾ
Hockey India

ಹೊಸದಿಲ್ಲಿ: ಈಗ ಕೊರೊನಾ ವೈರಸ್​ ಒಂದು ಕಡೆ ಆತಂಕ ಮೂಡಿಸಿದ್ದರೆ ಇನ್ನೊಂದು ಕಡೆ ಎಲ್ಲರಿಗೂ ಬಿಡುವಿನ ಸಮಯವೂ ಹೌದು. ಬಯಸಲಿ ಅಥವಾ ಬಯಸದಿರಲಿ ಕೆಲಸ ಮಾಡದೆ ಬಿಡುವಾಗಿರುವುದು ಅನಿವಾರ್ಯ.

ಆದರೆ ಈ ಬಿಡುವಿನ ಸಮಯವನ್ನು ವ್ಯಕ್ತಿತ್ವ ವಿಕಸನಕ್ಕೆ, ಉತ್ತಮ ಅಭಿರುಚಿಗಳನ್ನು ಬೆಳೆಸಿಕೊಳ್ಳಲಿಕ್ಕೆ ಉಪಯೋಗಿಸಿದರೆ ಎಷ್ಟೊಂದು ಚೆನ್ನ ಅಲ್ಲವೆ? ಹೌದು.. ಈಗ ಭಾರತೀಯ ಹಾಕಿ ಟೀಂ ಇಂಥದ್ದೇ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಿಡುವಿನ ಸಮಯವನ್ನು ಸದುಪಯೋಪಡಿಸಿಕೊಳ್ಳುತ್ತಿದೆ.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಕೀರ್ಣದಲ್ಲಿ ಬೀಡು ಬಿಟ್ಟಿರುವ ಭಾರತೀಯ ಹಾಕಿ ತಂಡದ ಸದಸ್ಯರು ತಮ್ಮ ಇಂಗ್ಲಿಷ್ ಭಾಷೆಯನ್ನು ಸುಧಾರಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಿದ್ದಾರೆ. ಜೊತೆಗೆ ಮೆಚ್ಚಿನ ಪುಸ್ತಕ ಓದುವುದು, ಸಿನಿಮಾ ನೋಡುವುದರಲ್ಲಿ ಕೆಲವರು ಬ್ಯುಸಿ ಆಗಿದ್ದಾರಂತೆ.

ಸದ್ಯ ಭಾರತೀಯ ಮಹಿಳಾ ಮತ್ತು ಪುರುಷ ಹಾಕಿ ತಂಡದ ಸದಸ್ಯರು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾಕ್ಟೀಸ್​ ಮಾಡುತ್ತಿದ್ದು, ಒಳಗಡೆ ಹೊರಗಿನವರಾರಿಗೂ ಪ್ರವೇಶವಿಲ್ಲ.

'ನಮ್ಮ ನಿತ್ಯದ ಕಾರ್ಯಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಆದರೆ, ಭಾನುವಾರ ಮತ್ತು ಬುಧವಾರ ಸಂಜೆ ನಮಗೆ ಬಿಡುವಿನ ಸಮಯ ಸಿಗುತ್ತದೆ. ಈ ಸಮಯದಲ್ಲಿ ನಾನು 'ಡಾ ವಿನ್ಸಿ ಕೋಡ್' ಓದಿಕೊಂಡಿದ್ದೇನೆ. ಹೆಲೆನ್ ಕೆಲರ್ ಆಟೋಬಯಾಗ್ರಫಿ ಓದಿದ್ದೇನೆ. ಇನ್ನೂ ಕೆಲ ಪುಸ್ತಕಗಳನ್ನು ಓದಬೇಕಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಗೋಲ್​ಕೀಪರ್ ಸ್ರೀಜಿಶ್.

ಇನ್ನು ಮನೆಯಿಂದ ದೂರವಿರುವ ಕಾರಣದಿಂದ ಆಗಾಗ ವಿಡಿಯೋ ಕಾಲ್ ಮಾಡುತ್ತ ಕುಟುಂಬಸ್ಥರೊಂದಿಗೆ ಮಾತನಾಡುತ್ತ ಕಾಲ ಕಳೆಯುತ್ತಿದ್ದಾರೆ ಇನ್ನು ಕೆಲವರು. 'ನಮ್ಮ ತಂದೆಗೆ 60 ವರ್ಷ ವಯಸ್ಸು. ಮಕ್ಕಳು 7 ವರ್ಷಕ್ಕೂ ಚಿಕ್ಕವರು. ಅವರ್ಯಾರೂ ಮನೆಯಿಂದ ಹೊರ ಬರದಂತೆ ತಿಳಿಸಿದ್ದೇನೆ' ಎಂದು ಮತ್ತೊಬ್ಬ ಆಟಗಾರ ನುಡಿದರು.

ಇನ್ನು ಸ್ಟಾರ್ ಪ್ಲೇಯರ್ ಮಂದೀಪ್ ಸಿಂಗ್ ತಮ್ಮ ಇಂಗ್ಲಿಷ್ ಪ್ರಭುತ್ವ ಸುಧಾರಿಸಿಕೊಳ್ಳಲು ಎಲ್ಲಿಲ್ಲದ ಆಸಕ್ತಿ. ಇತರರೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ವ್ಯವಹರಿಸುತ್ತ ಭಾಷೆ ಕಲಿಯುತ್ತಿದ್ದಾರೆ ಮಂದೀಪ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.