ETV Bharat / sports

'ಕಂಡ ಕನಸು ನನಸಾಗಲಿಲ್ಲ..' 14 ವರ್ಷದ ಹಾಕಿ ಪಯಣಕ್ಕೆ ಕನ್ನಡಿಗ ಸುನಿಲ್ ವಿದಾಯ​

ಭಾರತ ಹಾಕಿ ತಂಡದ ಮತ್ತೋರ್ವ ಆಟಗಾರ, ಕನ್ನಡಿಗ ಎಸ್​​.ವಿ.ಸುನಿಲ್​ ತಮ್ಮ 14 ವರ್ಷಗಳ ಸುದೀರ್ಘ ಹಾಕಿ ಪಯಣಕ್ಕೆ ವಿದಾಯ ಹೇಳಿದ್ದಾರೆ.

author img

By

Published : Oct 1, 2021, 5:20 PM IST

SV Sunil
SV Sunil

ನವದೆಹಲಿ: ಭಾರತೀಯ ಪುರುಷರ ಹಾಕಿ ತಂಡದ ಅನುಭವಿ ಸ್ಟ್ರೈಕರ್​​ ಎಸ್​​.ವಿ.ಸುನಿಲ್​​​ 14 ವರ್ಷಗಳ ಹಾಕಿ ಆಟಕ್ಕೆ ಇಂದು ವಿದಾಯ ಘೋಷಣೆ ಮಾಡಿದರು. ಜಪಾನ್​ನ ಟೋಕಿಯೋದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಇವರು, ಭಾರತದ ಪರ ಅನೇಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ಟ್ವಿಟರ್ ಮೂಲಕ ವಿದಾಯ ಘೋಷಣೆ ​

'ದೇಶಕ್ಕಾಗಿ ನನ್ನ ಕೈಯಿಂದಾದ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಆದರೂ ಸಂತೋಷವಾಗಿದ್ದೇನೆಂದು ಹೇಳಿದರೆ ಅದು ನಿಮ್ಮೆಲ್ಲರಿಗೂ ಸುಳ್ಳು ಹೇಳಿದಂತಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ನನ್ನ ತಂಡದ ಪರ ನಾನು ಕೂಡ ವೇದಿಕೆ ಹತ್ತಬೇಕು ಎಂದು ಕನಸು ಕಂಡಿದ್ದೆ. ದುರದೃಷ್ಟವಶಾತ್ ಅದು ನೆರವೇರಲಿಲ್ಲ. ಆದರೆ ಒಲಿಂಪಿಕ್ಸ್​​ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿರುವುದು ವಿಶೇಷವಾದ ಭಾವನೆ' ಎಂದಿದ್ದಾರೆ.

'ನಾನು ತೆಗೆದುಕೊಂಡಿರುವ ನಿರ್ಧಾರ ಕೆಲವರಿಗೆ ವೈಯಕ್ತಿಕವಾಗಿ ನೋವುಂಟು ಮಾಡಿದ್ದರೂ, ಸರಿಯಾದ ನಿರ್ಧಾರ ಕೈಗೊಂಡಿದ್ದೇನೆ ಎಂಬ ಭಾವವಿದೆ' ಎಂದು ತಿಳಿಸಿದ್ದಾರೆ.

  • 2️⃣6️⃣4️⃣Caps
    7️⃣2️⃣Goals
    🏅 Arjuna Award Winner

    The Indian Hockey Team Forward has decided to hang his boots after an illustrious career. 👏

    Happy Retirement, SV Sunil. 🙌#IndiaKaGame pic.twitter.com/om6YnPSPhM

    — Hockey India (@TheHockeyIndia) October 1, 2021 " class="align-text-top noRightClick twitterSection" data=" ">

'ಅರ್ಜುನ ಪ್ರಶಸ್ತಿ' ಪುರಸ್ಕೃತ ಸುನಿಲ್​, 2007ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ಇದೇ ವರ್ಷ ಪಾಕ್​ ವಿರುದ್ಧ ನಡೆದ ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡ ಫೈನಲ್‌ನಲ್ಲಿ ಗೆಲುವು ಸಾಧಿಸಿತ್ತು.

SV Sunil
ಹಾಕಿ ತಂಡದ ಸಹಆಟಗಾರರೊಂದಿಗೆ ಕನ್ನಡಿಗ ಎಸ್‌.ವಿ.ಸುನಿಲ್

ಇದನ್ನೂ ಓದಿ: ರೂಪಿಂದರ್ ಬೆನ್ನಲ್ಲೇ ಮತ್ತೊಬ್ಬ ಒಲಿಂಪಿಕ್ಸ್ ಪದಕ ವಿಜೇತ​ ಬಿರೇಂದ್ರ ಲಕ್ರಾ ನಿವೃತ್ತಿ

ಒಲಿಂಪಿಕ್ಸ್‌​​ನಲ್ಲಿ ಭಾರತ ತಂಡವನ್ನು ಎರಡು ಸಲ ಪ್ರತಿನಿಧಿಸಿರುವ ಸುನಿಲ್​, ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಪ್ರಮುಖವಾಗಿ ಭಾರತ 2011ರ ಏಷ್ಯನ್​ ಚಾಂಪಿಯನ್​ ಟ್ರೋಫಿಯಲ್ಲಿ ಚಿನ್ನ ಗೆದ್ದಿರುವ ತಂಡದ ಭಾಗವಾಗಿದ್ದರು.

ಉಳಿದಂತೆ, 2012ರ ಏಷ್ಯನ್​ ಚಾಂಪಿಯನ್ ಟ್ರೋಪಿಯಲ್ಲಿ ಬೆಳ್ಳಿ, 2014ರ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ, 2018ರ ಏಷ್ಯನ್​ ಗೇಮ್ಸ್​​ನಲ್ಲಿ ಕಂಚಿನ ಪದಕ ಗೆದ್ದಾಗಲೂ ತಂಡದಲ್ಲಿದ್ದರು. 2016 ಹಾಗೂ 2018ರ FIH ಚಾಂಪಿಯನ್​​ ಟ್ರೋಪಿಯಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಎಸ್​​.ವಿ.ಸುನಿಲ್​ ಹಾಕಿಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಇಂಡಿಯನ್​ ಹಾಕಿ ಅವರಿಗೆ ಅಭಿನಂದನೆ ಸಲ್ಲಿಸಿದೆ.

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಪ್ರತಿನಿಧಿಸಿದ್ದ ಡ್ರ್ಯಾಗ್​​ಫ್ಲಿಕರ್​​ ರೂಪಿಂದರ್ ಪಾಲ್ ಸಿಂಗ್ ಹಾಗೂ ಡಿಫೆಂಡರ್​​ ಬೀರೇಂದ್ರ ಲಾಕ್ರಾ ಕೂಡ ನಿನ್ನೆ ಹಾಕಿಗೆ ನಿವೃತ್ತಿ ಘೋಷಣೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.