ETV Bharat / sports

ಎಲ್ಲ 6 ಕೊರೊನಾ ಸೋಂಕಿತ ಹಾಕಿ ಆಟಗಾರರು ಆಸ್ಪತ್ರೆಗೆ ದಾಖಲು: SAI ಸ್ಪಷ್ಟನೆ - ಆಮ್ಲಜನಕದ ಕೊರತೆಯಿಂದ ಆಸ್ಪತ್ರೆ ಸೇರಿದ ಹಾಕಿ ಆಟಗಾರರು

ಮಂದೀಪ್​ ಸಿಂಗ್​ರಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಉಂಟಾಗಿದ್ದರಿಂದ ಉಳಿದ ಆಟಗಾರರನ್ನು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಸಾಯ್ ತಿಳಿಸಿದೆ.

ಕೋವಿಡ್​ ಸೋಂಕಿತ ಹಾಕಿ ಆಟಗಾರರ
ಕೋವಿಡ್​ ಸೋಂಕಿತ ಹಾಕಿ ಆಟಗಾರರ
author img

By

Published : Aug 12, 2020, 1:21 PM IST

Updated : Aug 12, 2020, 1:52 PM IST

ಬೆಂಗಳೂರು: ಕೊರೊನಾ ವೈರಸ್​ ಕಾಣಿಸಿಕೊಂಡಿದ್ದ ಎಲ್ಲಾ ಆರು ಭಾರತ ತಂಡದ ಹಾಕಿ ಆಟಗಾರರನ್ನು ಬುಧವಾರ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸ್ಪೋರ್ಟ್ಸ್​ ಆಥಾರಿಟಿ ಆಫ್​ ಇಂಡಿಯಾ(SAI) ತಿಳಿಸಿದೆ.

ಸೋಮವಾರ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾಗಿದ್ದರಿಂದ ಸ್ಟ್ರೈಕರ್​ ಮಂದೀಪ್​ ಸಿಂಗ್​ ಅವರನ್ನು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ನಾಯಕ ಮನ್​ಪ್ರೀತ್​ ಸಿಂಗ್​, ಜಸ್ಕರಣ್​ ಸಿಂಗ್​ , ಸುರೇಂದ್ರ ಕುಮಾರ್,​ ಡ್ರ್ಯಾಗ್ ಫ್ಲಿಕ್ಕರ್ ವರುಣ್ ಕುಮಾರ್ ಮತ್ತು ಗೋಲ್‌ಕೀಪರ್ ಕೃಷ್ಣ ಬಹದ್ದೂರ್ ಪಾಠಕ್ ಅವರನ್ನು ಕೂಡ ಎಸ್​ಎಸ್​ ಸ್ಪರ್ಷ್​ ಮಲ್ಟಿಸ್ಪೆಸಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನ್​ಪ್ರೀತ್​ ಸಿಂಗ್​
ಮನ್​ಪ್ರೀತ್​ ಸಿಂಗ್​

ಇದೇ ತಿಂಗಳ 20ರಿಂದ ಬೆಂಗಳೂರಿನ ಎಸ್​ಎಐನ ನ್ಯಾಷನಲ್​ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ಆರಂಭವಾಗಬೇಕಿದ್ದ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಭಾರತ ತಂಡದ ಆಟಗಾರರೆಲ್ಲರೂ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬಂದಿದ್ದರು.

ಮಂದೀಪ್​ ಸಿಂಗ್​ರಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಉಂಟಾಗಿದ್ದರಿಂದ ಉಳಿದ ಆಟಗಾರರನ್ನು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಸಾಯ್ ತಿಳಿಸಿದೆ.

ಮಂದೀಪ್​ ಸಿಂಗ್​
ಮಂದೀಪ್​ ಸಿಂಗ್​

"ಆಟಗಾರರು ಸದಾ ವೈದ್ಯರ ವೀಕ್ಷಣೆಯಲ್ಲಿರಬೇಕು ಮತ್ತು ಅವರಿಗೆ ಅತ್ಯುತ್ತಮ ಚಿಕಿತ್ಸೆ ದೊರಕಬೇಕು ಎಂದು ಆಸ್ಪತ್ರೆಗೆ ದಾಖಲಿಸುವ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ" ಎಂದು ಸಾಯ್ ತಿಳಿಸಿದೆ.

Last Updated : Aug 12, 2020, 1:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.