ETV Bharat / sports

ಇನ್ಸ್ಟಾಗ್ರಾಮ್​ನಲ್ಲಿ ಅತಿ ಹೆಚ್ಚು ಲೈಕ್..​ ದಾಖಲೆ ಬರೆದ ಲಿಯೋನಲ್ ಮೆಸ್ಸಿ ಪೋಸ್ಟ್​ - ಲಿಯೋನಲ್ ಮೆಸ್ಸಿ ಇನ್ಸ್ಟಾಗ್ರಾಮ್ ಪೋಸ್ಟ್​

ಲಿಯೋನಲ್ ಮೆಸ್ಸಿ ಕೋಪಾ ಅಮೆರಿಕ ಟ್ರೋಫಿಯೊಂದಿಗೆ ಕುಳಿತು ಪೋಸ್​​ ಕೊಟ್ಟಿರುವ ಫೋಟೋ ಬರೋಬ್ಬರಿ 2 ಕೋಟಿಗೂ ಹೆಚ್ಚು ಲೈಕ್​ ಗಿಟ್ಟಿಸಿಕೊಂಡಿದೆ. ಇದು ಕ್ರೀಡಾಪಟುವೊಬ್ಬನ ಪೋಸ್ಟ್​ ಸಾಮಾಜಿಕ ಜಾಲಾತಾಣದಲ್ಲಿ ಪಡೆದ ಗರಿಷ್ಠ ಲೈಕ್ ಆಗಿದೆ.

ಲಿಯೋನಲ್ ಮೆಸ್ಸಿ ಇನ್​ಸ್ಟಾಗ್ರಾಮ್ ಪೋಸ್ಟ್​
ಲಿಯೋನಲ್ ಮೆಸ್ಸಿ ಇನ್​ಸ್ಟಾಗ್ರಾಮ್ ಪೋಸ್ಟ್​
author img

By

Published : Jul 20, 2021, 6:17 PM IST

ನವದೆಹಲಿ: ಇತ್ತೀಚೆಗೆ ಕೋಪಾ ಅಮೆರಿಕ ಕಪ್ ಗೆಲ್ಲುವ ಮೂಲಕ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲ ಪ್ರಮುಖ ಟ್ರೋಫಿ ಗೆದ್ದ ಶ್ರೇಯಕ್ಕೆ ಪಾತ್ರರಾಗಿದ್ದ ಅರ್ಜೆಂಟೀನಾ ತಂಡದ ನಾಯಕ ಲಿಯೋನಲ್ ಮೆಸ್ಸಿ ಇನ್ಸ್ಟಾಗ್ರಾಮ್​ನಲ್ಲಿ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ಲಿಯೋನಲ್ ಮೆಸ್ಸಿ ಕೋಪಾ ಅಮೆರಿಕ ಟ್ರೋಫಿಯೊಂದಿಗೆ ಕುಳಿತು ಪೋಸ್​​ ಕೊಟ್ಟಿರುವ ಫೋಟೋ ಬರೋಬ್ಬರಿ 2 ಕೋಟಿ ಲೈಕ್​ ಗಿಟ್ಟಿಸಿಕೊಂಡಿದೆ. ಇದು ಕ್ರೀಡಾಪಟುವೊಬ್ಬನ ಪೋಸ್ಟ್​ ಸಾಮಾಜಿಕ ಜಾಲಾತಾಣದಲ್ಲಿ ಪಡೆದ ಗರಿಷ್ಠ ಲೈಕ್ ಎಂಬ ಹೆಗ್ಗಳಿಕೆ ಪಡೆದಿದೆ.

ಈ ಹಿಂದೆ ಪೋರ್ಚುಗಲ್​ ತಂಡದ ನಾಯಕ ಕ್ರಿಶ್ಚಿಯನ್ ರೊನಾಲ್ಡೊ ಫುಟ್​ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರಿಗೆ ಸಂತಾಪ ಸೂಚಿಸಿ ಮಾಡಿದ್ದ ಪೋಸ್ಟ್​ 19.8 ಮಿಲಿಯನ್(1.98 ಕೋಟಿ) ಲೈಕ್ ಪಡೆದಿದ್ದ ಪೋಸ್ಟ್​ ಇಲ್ಲಿಯವರೆಗಿನ ಗರಿಷ್ಠ ಲೈಕ್ ಪಡೆದ ಪೋಸ್ಟ್ ಆಗಿತ್ತು.

ಇದನ್ನು ಓದಿ:ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಮೆಸ್ಸಿ ಪಡೆ

ಮೆಸ್ಸಿ ಕೋಪಾ ಅಮೆರಿಕ ಟ್ರೋಫಿ ಗೆದ್ದ ನಂತರ, "ಇದೆಂಥಾ ಸುಂದರವಾದ ಹುಚ್ಚು, ನನಗೆ ನಂಬಲಾಗುತ್ತಿಲ್ಲ, ಧನ್ಯವಾದಗಳು ದೇವರೆ, ನಾವೀಗ ಚಾಂಪಿಯನ್ಸ್" ಎಂದು ಬರೆದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು.

ಲಿಯೋನಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್​ನೊಂದಿಗಿನ ವಿರಸ ಮರೆತು ಮತ್ತೆ 5 ವರ್ಷಗಳ ಕಾಲ ಕ್ಲಬ್​ ಪರ ಆಡಲು ಒಪ್ಪಿಗೆ ಸೂಚಿಸಿದ್ದಾರೆ. ವಿಶೇಷವೆಂದರೆ ನಷ್ಟದಲ್ಲಿರುವ ಕ್ಲಬ್​ನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹಿಂದಿನ ಒಪ್ಪಂದದ ಅರ್ಧದಷ್ಟ ಮೊತ್ತಕ್ಕೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ನಷ್ಟದಲ್ಲಿರುವ ಬಾರ್ಸಿಲೋನಾ ಕೈಬಿಡದ ಮೆಸ್ಸಿ.. 5 ವರ್ಷಗಳ ಹೊಸ ಒಪ್ಪಂದಕ್ಕೆ ಅರ್ಜೆಂಟೀನಾ ಸ್ಟಾರ್‌ ಸಹಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.