ನವದೆಹಲಿ: ಕ್ರೀಡಾಪಟುವಾಗಿ ಅಭೂತಪೂರ್ವ ಯಶಸ್ಸುಗಳಿಸಿದ ಬಾಕ್ಸಿಂಗ್ ದಂತಕಥೆ ಮೇರಿ ಕೋಮ್ ಅವರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಭಾರತೀಯ ಮಹಿಳಾ ಫುಟ್ಬಾಲ್ ಆಟಗಾರ್ತಿ ಬಾಲಾ ದೇವಿ ಹೇಳಿದ್ದಾರೆ.
ಯುರೋಪಿನ ಉನ್ನತ-ಫ್ಲೈಟ್ ಲೀಗ್‌ನಲ್ಲಿ ವೃತ್ತಿಪರ ಫುಟ್ಬಾಲ್ ಆಡಿದ ಮೊದಲ ಭಾರತೀಯ ಮಹಿಳೆ ಬಾಲಾ, 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತ ಮೇರಿ ಕೋಮ್ ಅವರೊಂದಿಗಿನ ಸಂವಾದದ ಕುರಿತು ಮಾತನಾಡಿದ್ದಾರೆ.
"ಮೇರಿ ಕೋಮ್ ನನ್ನ ಸ್ಫೂರ್ತಿಯ ಮೂಲವಾಗಿದ್ದಾರೆ. ಅವರು ಕಠಿಣ ಪರಿಶ್ರಮದ ಮೂಲಕ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ತಾಯಿಯಾದ ನಂತರವೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ" ಎಂದು ಬಾಲಾ ಹೇಳಿದ್ದಾರೆ.
"ನಾವು 2014ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಮಾತನಾಡಿದ್ದೆವು, ಅವರು ತುಂಬಾ ಸ್ನೇಹಪರ ವ್ಯಕ್ತಿ ಮತ್ತು ಆಟದ ಸಮಯದಲ್ಲಿ ನಮಗೆ ಬೆಂಬಲ ನೀಡಿದ್ದರು" ಎಂದು ಬಾಲಾ ದೇವಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
"ಪ್ರತಿಯೊಬ್ಬರೂ ನಮಗೆ ಬೆಂಬಲ ನೀಡುವುದನ್ನು ಮುಂದುವರಿಸಬೇಕು ಎಂದು ಬಯಸುತ್ತೇನೆ. ಭವಿಷ್ಯದಲ್ಲಿ ನಾವು ದೇಶಕ್ಕಾಗಿ ದೊಡ್ಡದನ್ನು ಸಾಧಿಸುತ್ತಲೇ ಇರುತ್ತೇವೆ" ಎಂದು ಹೇಳಿದ್ದಾರೆ.