ETV Bharat / sports

ಕೋವಿಡ್​ ವರದಿ ನೆಗೆಟಿವ್, ಫಿಫಾ ವಿಶ್ವಕಪ್ಪ್​ ಅರ್ಹತಾ ಪಂದ್ಯಕ್ಕಾಗಿ ತರಬೇತಿ ಆರಂಭಿಸಿದ 'ಬ್ಲೂ ಟೈಗರ್ಸ್​' - ತರಬೇತಿ ಶಿಬಿರ

ಭಾರತ ತಂಡ ಬುಧವಾರ ಸಂಜೆ ದೋಹಾಗೆ ಬಂದಿಳಿದಿದೆ. ನಂತರ ಅಲ್ಲಿ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಿತ್ತು. ಕ್ಯಾಂಪ್​ ಆರಂಭಿಸುವ ಮುನ್ನ ಆರ್​ಟಿ-ಪಿಸಿಆರ್​​ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿತ್ತು. ಇದೀಗ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ತರಬೇತಿ ಆರಂಭಿಸಿದೆ.

ಫಿಫಾ ವಿಶ್ವಕಪ್
ಭಾರತೀಯ ಫುಟ್​ಬಾಲ್ ತಂಡ
author img

By

Published : May 22, 2021, 6:56 PM IST

ನವದೆಹಲಿ: 2022ರ ಫಿಫಾ ವಿಶ್ವಕಪ್ ಮತ್ತು 2023ರ ಏಷ್ಯಾಕಪ್ ಅರ್ಹತಾ ಟೂರ್ನಮೆಂಟ್​ಗಾಗಿ ಖತಾರ್‌ಗೆ ಆಗಮಿಸಿರುವ ಭಾರತೀಯ ಫುಟ್‌ಬಾಲ್ ತಂಡದ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೋವಿಡ್ ​19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದಿದ್ದು ಅರ್ಹತಾ ಪಂದ್ಯಕ್ಕೂ ಮುನ್ನ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ಭಾರತ ತಂಡ ಬುಧವಾರ ಸಂಜೆ ದೋಹಾಗೆ ಬಂದಿಳಿದಿದೆ. ನಂತರ ಅಲ್ಲಿ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಿತ್ತು. ಕ್ಯಾಂಪ್​ ಆರಂಭಿಸುವ ಮುನ್ನ ಆರ್​ಟಿ-ಪಿಸಿಆರ್​​ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿತ್ತು. ಇದೀಗ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ತರಬೇತಿ ಆರಂಭಿಸಿದೆ.

"ಹೌದು, ಇಲ್ಲಿಗೆ ಧಾವಿಸಿದ್ದ ಎಲ್ಲ 28 ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೋವಿಡ್​ 19 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದಿದ್ದಾರೆ." ಎಂದು ಆಲ್​ ಇಂಡಿಯಾ ಫುಟ್ಬಾಲ್​ ಫೆಡೆರೇಷನ್​ ಪ್ರಧಾನ ಕಾರ್ಯದರ್ಶಿ ಕುಶಾಲ್ ​ ದಾಸ್​ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಕೋವಿಡ್​ನಿಂದ ಚೇತರಿಸಿಕೊಂಡ ನಂತರ ನಾಯಕ ಸುನೀಲ್ ಚೆಟ್ರಿ ಖತಾರ್​ಗೆ ಆಗಮಿಸಿರುವುದರಿಂದ ಭಾರತೀಯ ಆಟಗಾರರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ಜೂನ್ 3 ರಂದು ಆತಿಥೇಯ ಖತಾರ್ ವಿರುದ್ಧದ ಬಯೋಬಬಲ್​ನಲ್ಲಿ ತನ್ನ ಮೊದಲ ಪಂದ್ಯವನ್ನಾಡುವ ಮೊದಲು ಪೂರ್ವ ಸಿದ್ಧತಾ ಶಿಬಿರವನ್ನು ಹೊಂದಿರುತ್ತದೆ. ನಂತರ ಬಾಂಗ್ಲಾದೇಶ ವಿರುದ್ಧ ಜೂನ್ 7 ರಂದು ಮತ್ತು ಅಫ್ಘಾನಿಸ್ತಾನ ವಿರುದ್ಧ ಜೂನ್ 15 ರಂದು ಸೆಣಸಾಡಲಿದೆ.

ಮೂರು ಪಾಯಿಂಟ್‌ಗಳೊಂದಿಗೆ ಗ್ರೂಪ್ ಇ ಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ತಂಡ ಈಗಾಗಲೇ ವಿಶ್ವಕಪ್ ರೇಸ್​ನಿಂದ ಹೊರಬಿದ್ದಿದೆ. ಆದರೆ, ಚೀನಾದಲ್ಲಿ ನಡೆಯಲಿರುವ 2023ರ ಏಷ್ಯಾಕಪ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದೆ.

ಇದನ್ನು ಓದಿ:WTC ಫೈನಲ್​ನಲ್ಲಿ ಕಿವೀಸ್ ವಿರುದ್ಧ ನಮ್ಮ ಬೌಲರ್​ಗಳು ಮೇಲುಗೈ ಸಾಧಿಸಿಲಿದ್ದಾರೆ : ನೆಹ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.