ಜನ್ಮದಿನದ ಸಂಭ್ರಮದಲ್ಲಿದ್ದ ರೊನಾಲ್ಡೋಗೆ ಸಂಗಾತಿ ಕೊಟ್ಟ ಉಡುಗೊರೆ ಇದು.. - ಕ್ರಿಸ್ಟಿಯಾನೊ ರೊನಾಲ್ಡೋ ಜನ್ಮದಿನ
35ನೇ ಜನ್ಮದಿನದ ಸಂಭ್ರಮದಲ್ಲಿರುವ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೋಗೆ ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್, ಮರ್ಸಿಡಿಸ್ ಸಿ63 ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಹೈದರಾಬಾದ್: ನಿನ್ನೆಯಷ್ಟೆ 35ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೋಗೆ ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಬಿಗ್ ಸರ್ಪ್ರೈಸ್ ನಿಡಿದ್ದಾರೆ.
- " class="align-text-top noRightClick twitterSection" data="
">
ಫೆಬ್ರವರಿ 5 ಕ್ಕೆ 35ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದ ರೊನಾಲ್ಡೊಗೆ ಒಂದು ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಸಿ63 ಕಾರು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಜಾರ್ಜಿನಾ ರೊಡ್ರಿಗಸ್, 'ನನ್ನ ಜೀವನದ ಗೆಳೆಯನಿಗೆ ಅಭಿನಂದನೆಗಳು! ನಮ್ಮ ಪ್ರೀತಿಯನ್ನು ಸಾಗಿಸಲು ನೀವು ಏನು ಬಯಸುತ್ತೀರಿ? ನಿಮ್ಮ ಉಡುಗೊರೆ' ಎಂದು ಕಾರು ಉಡುಗೊರೆ ನೀಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
- View this post on Instagram
It’s time to celebrate my birthday 🥳🥳Thanks my love for this amazing surprise👩❤️👨
">
ಇತ್ತ ಕ್ರಿಸ್ಟಿಯಾನೊ ರೊನಾಲ್ಡೋ ಕೂಡ ಇನ್ಸ್ಟಾಗ್ರಾಮ್ನಲ್ಲಿ ಫೋಟೊ ಪೋಸ್ಟ್ ಮಾಡಿದ್ದು, 'ನನ್ನ ಜನ್ಮದಿನ ಆಚರಿಸಿದ ಸಮಯ. ಈ ಅದ್ಭುತವಾದ ಅನಿರೀಕ್ಷಿತ ಉಡುಗೊರೆ ನೀಡಿದ ನನ್ನ ಪ್ರೀತಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.