ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿದ್ದಾಗ ವಿಚಿತ್ರ ಘಟನೆಗಳು ನಡೆಯುವುದು ಮೇಲಿಂದ ಮೇಲೆ ಕಂಡು ಬರುತ್ತಿರುತ್ತದೆ. ಆದರೆ, ಸದ್ಯ ಆಟಗಾರನೋರ್ವ ಪಂದ್ಯ ಮುಗಿಯುತ್ತಿದ್ದಂತೆ ತನ್ನ ಲವರ್ಗೆ ಪ್ರಪೋಸ್ ಮಾಡಿದ್ದಾರೆ. ಅಮೆರಿಕಾದ ಫುಟ್ಬಾಲ್ ಪ್ಲೇಯರ್ ಹಾಸನಿ ಡಾಟ್ಸನ್ ಮೈದಾನದಲ್ಲಿ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿರುವ ಘಟನೆ ನಡೆದಿದೆ. ಅದರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
- +++++++++++++++++++++++
++++++++++++++++++++++++++
" class="align-text-top noRightClick twitterSection" data="
+++++++++++++++++++++++
++++++++++++++++++++++++++
">
+++++++++++++++++++++++
++++++++++++++++++++++++++
ಕ್ಲಬ್ ಮಿನಿಸೋಟ ತಂಡದಲ್ಲಿದ್ದ ಹಾಸನಿ ಸನಾ ಜೋಶ್ ಅರ್ಥಕ್ವಿಕ್ಸ್ ವಿರುದ್ಧದ ಮೇಜರ್ ಲೀಗ್ ಟೂರ್ನಿ ಪಂದ್ಯದಲ್ಲಿ 2-2 ಅಂತರದಲ್ಲಿ ಡ್ರಾ ಸಾಧಿಸಿದ ಬೆನ್ನಲ್ಲೇ ತನ್ನ ಗೆಳತಿಗೆ ಲವ್ ಪ್ರಪೋಸ್ ಮಾಡಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆ ಕೈಯಲ್ಲಿ ರಿಂಗ್ ಹಿಡಿದುಕೊಂಡು ಲವ್ ಪ್ರಪೋಸ್ ಮಾಡಿದ್ದು, ಅದಕ್ಕೆ ಪೆಟ್ರಾ ವುಕೊವಿಕ್ನ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಪಂದ್ಯ ವೀಕ್ಷಣೆ ಮಾಡಲು ಸೇರಿದ್ದ ಸಾವಿರಾರು ಪ್ರೇಕ್ಷಕರು ಕೂಡ ಈ ಘಟನೆ ನೋಡಿ ಜೈಕಾರ ಹಾಕಿದ್ದಾರೆ.
ಇದನ್ನೂ ಓದಿರಿ: ಮಹಾರಾಷ್ಟ್ರ ಬಿಜೆಪಿಗೆ ಆಘಾತ! 12 ಶಾಸಕರಿಗೆ 1 ವರ್ಷ ಅಮಾನತು ಶಿಕ್ಷೆ, ಕಾರಣವೇನು ಗೊತ್ತೇ?
ಈ ಹಿಂದೆ ಭಾರತ-ಇಂಗ್ಲೆಂಡ್ ನಡುವೆ ಕ್ರಿಕೆಟ್ ಪಂದ್ಯ ನಡೆದಿದ್ದ ವೇಳೆ ಮೈದಾನದಲ್ಲೇ ವ್ಯಕ್ತಿಯೋರ್ವ ಪ್ರೇಯಸಿಗೆ ಪ್ರಪೋಸ್ ಮಾಡಿದ್ದರು. ಇದರ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.