ETV Bharat / sports

ಭಾರತದ ಟೆಸ್ಟ್ ಕ್ರಿಕೆಟ್‌ ತಂಡ ಬದಲಾಗುತ್ತಾ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಗಮನ ಸೆಳೆದ ಪ್ರತಿಭೆಗಳಿಗೆ ಸಿಗುವುದೇ ಅವಕಾಶ?

ಮುಂದಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸುವ ಯುವ ಆಟಗಾರರ ಪಟ್ಟಿ ಹೀಗಿದೆ.

Players who could get the Indian Test cap in next cycle

author img

By

Published : Jun 14, 2023, 6:51 PM IST

2021ರ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನ ಫೈನಲ್​ ಸೋಲಿನ ನಂತರ ಎರಡು ವರ್ಷ ಬಿಟ್ಟು ಅಂದರೆ, ಈ ವರ್ಷ ಮತ್ತೆ ಅಂತಿಮ ಘಟ್ಟ ಪ್ರವೇಶಿಸಿದರೂ ಭಾರತ ಯಶಸ್ಸು ಸಾಧಿಸಲಿಲ್ಲ. ಕ್ರಿಕೆಟ್​ ಜನಕ ಇಂಗ್ಲೆಂಡ್​ನ ಮೈದಾನದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ನ್ಯೂಜಿಲೆಂಡ್​ಗೆ ಬಿಟ್ಟುಕೊಟ್ಟರೆ, ಎರಡನೇ ಬಾರಿಗೆ ಆಸ್ಟ್ರೇಲಿಯಾ ಕೈಗೆ ಕೊಟ್ಟಿತು. ಹೀಗಿರುವಾಗ ಭಾರತ ತಂಡದಲ್ಲಿನ ಬದಲಾವಣೆ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಹೊಸಬರ ಅವಕಾಶದ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಭಾರತದಲ್ಲಿ ಯುವ ಪ್ರತಿಭೆಗಳಿಗೆ ಬರವಿಲ್ಲ. ಐಪಿಎಲ್​ ಮತ್ತು ದೇಶೀಯ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಹಲವಾರು ಪ್ರತಿಭೆಗಳು ಗಮನ ಸೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡ ಸೇರುವ ಸಾಧ್ಯತೆ ಇರುವ ಸ್ಟಾರ್​ ಯುವ ಆಟಗಾರರ ಪಟ್ಟಿ ನೋಡೋಣ.

  • ಅಭಿಮನ್ಯು ಈಶ್ವರನ್: 27 ವರ್ಷದ ಅಭಿಮನ್ಯು ಕೆಲವು ಸರಣಿಯ ಟೆಸ್ಟ್​ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. 2023- 25 ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪ್ರಯಾಣದಲ್ಲಿ ಇವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. 87 ಪ್ರಥಮ ದರ್ಜೆ ಪಂದ್ಯಗಳಲ್ಲಿ, 150 ಇನ್ನಿಂಗ್ಸ್‌ಗಳಲ್ಲಿ 22 ಶತಕ ಮತ್ತು 26 ಅರ್ಧಶತಕಗಳೊಂದಿಗೆ 47.85 ಸರಾಸರಿಯಲ್ಲಿ 6,556 ರನ್ ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ 233 ಆಗಿದೆ. ಹೀಗಾಗಿ ಟೆಸ್ಟ್​ನಲ್ಲಿ ಭರವಸೆಯ ಬ್ಯಾಟರ್​ ಆಗಿದ್ದಾರೆ.
  • ಯಶಸ್ವಿ ಜೈಸ್ವಾಲ್: 15 ಪಂದ್ಯಗಳಲ್ಲಿ 80.21 ಸರಾಸರಿಯಲ್ಲಿ ಒಂಬತ್ತು ಶತಕಗಳು ಮತ್ತು ಎರಡು ಅರ್ಧಶತಕಗಳೊಂದಿಗೆ 1,845 ರನ್ ಗಳಿಸಿರುವ ಯುವ ಬ್ಯಾಟರ್ ಜೈಸ್ವಾಲ್​ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ 2023ರ ಫೈನಲ್​ ಟೀಂ​ನ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದರು. ಈ ವರ್ಷದ ಐಪಿಎಲ್​ನಲ್ಲಿ ಮಿಂಚಿನ ಬ್ಯಾಟಿಂಗ್​ ಪ್ರದರ್ಶನವನ್ನು ಯಶಸ್ವಿ ತೋರಿದ್ದಾರೆ. 16ನೇ ಆವೃತ್ತಿಯಲ್ಲಿ ಅವರು 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 625 ರನ್​ಗಳನ್ನು ಗಳಿಸುವ ಮೂಲಕ ಭಾರತ ತಂಡದ ಕದ ತಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆಡುವ 11 ರಲ್ಲಿ ಸ್ಥಾನ ಪಡೆಯುವ ಭರವಸೆಯೂ ಇದೆ.
  • ರಜತ್ ಪಾಟಿದಾರ್: ಮಧ್ಯಪ್ರದೇಶ ಬ್ಯಾಟರ್ ಪ್ರಥಮ ದರ್ಜೆ ಪಂದ್ಯಗಳಲ್ಲಿ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇವರ ಮೇಲೆ ಹೆಚ್ಚಿನ ಭರವಸೆಯೂ ಇದ್ದು ಬೃಹತ್​ ಮೊತ್ತ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. 52 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.72 ಸರಾಸರಿಯಲ್ಲಿ 3,795 ರನ್ ಗಳಿಸಿದ್ದಾರೆ. 88 ಇನ್ನಿಂಗ್ಸ್‌ಗಳಲ್ಲಿ 11 ಶತಕ ಮತ್ತು 22 ಅರ್ಧ ಶತಕಗಳನ್ನು ಗಳಿಸಿದ್ದಾರೆ. 2022ರಲ್ಲಿ ಆರ್​ಸಿಬಿ ಪರ ಉತ್ತಮ ಬ್ಯಾಟಿಂಗ್​ ಮಾಡಿದ ಪಾಟಿದಾರ್​ ಗಮನ ಸೆಳೆದಿದ್ದರು. ಈ ವರ್ಷ ಗಾಯಕ್ಕೆ ತುತ್ತಾದ ಪಾಟಿದಾರ್​ ಸಂಪೂರ್ಣ ಐಪಿಎಲ್​ ಆವೃತ್ತಿಯಿಂದಲೇ ಹೊರಗುಳಿದರು. ವಿದೇಶದಲ್ಲಿ ಚಿಕಿತ್ಸೆ ಪಡೆದಿರುವ ಇವರು ಭಾರತ ತಂಡ ಪ್ರವೇಶಿಸುವ ಆಟಗಾರ.
  • ರುತುರಾಜ್ ಗಾಯಕ್ವಾಡ್​: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಬ್ಯಾಟರ್ ರುತುರಾಜ್​ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷದವೂ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಇದರಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೀಸಲು ಆಟಗಾರರ ಪಟ್ಟಿಯಲ್ಲಿ ಅವರ ಹೆಸರು ಕೇಳಿಬಂದಿತ್ತು. ಆದರೆ ವಿವಾಹದ ಕಾರಣ ಅವರು ಇಂಗ್ಲೆಂಡ್​ ಪ್ರವಾಸವನ್ನು ತಪ್ಪಿಸಿಕೊಂಡರು. ಅವರ ಬದಲಾಗಿ ಜೈಸ್ವಾಲ್​ ಅವರನ್ನು ಆಯ್ಕೆ ಮಾಡಲಾಯಿತು. ಗಾಯಕ್ವಾಡ್​ ಪ್ರಥಮ ದರ್ಜೆಯಲ್ಲಿ 28 ಪಂದ್ಯಗಳನ್ನು ಆಡಿದ್ದು, 1,941 ರನ್​ನ್ನು 42.19 ಸರಾಸರಿಯಲ್ಲಿ ಕಲೆಹಾಕಿದ್ದಾರೆ. ಅವರು 6 ಶತಕ ಮತ್ತು ಒಂಬತ್ತು ಅರ್ಧಶತಕ ಗಳಿಸಿದ್ದು, ಅತ್ಯುತ್ತಮ ಸ್ಕೋರ್ 195 ಆಗಿದೆ.
    Players who could get the Indian Test cap in next cycle
    ಪ್ರಸಿದ್ಧ ಕೃಷ್ಣ ಮತ್ತು ಮುಖೇಶ್​ ಕುಮಾರ್​
  • ಪ್ರಸಿದ್ಧ್ ಕೃಷ್ಣ: ವೇಗಿ ಕೃಷ್ಣ ಭಾರತಕ್ಕಾಗಿ ಈಗಾಗಲೇ 14 ಏಕದಿನಗಳನ್ನು ಆಡಿದ್ದು, 23.92ರ ಸರಾಸರಿಯಲ್ಲಿ 5.32ರ ಎಕಾನಮಿ ದರದಲ್ಲಿ 25 ವಿಕೆಟ್​​ಗಳನ್ನು ಕಬಳಿಸಿದ್ದಾರೆ. ಗಾಯದಿಂದಾಗಿ ಬುಮ್ರಾ ಅವರ ಅನಿಶ್ಚಿತತೆ ಮತ್ತು ಮೊಹಮ್ಮದ್ ಶಮಿ ವಯಸ್ಸಾದ ಕಾರಣ, ಕೃಷ್ಣ ಅವರು ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆ ಆಗುವ ಬೌಲರ್​ ಆಗಿದ್ದಾರೆ.
  • ಮುಖೇಶ್ ಕುಮಾರ್: 29 ವರ್ಷದ ಬಂಗಾಳದ ವೇಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಪಡೆದುಕೊಂಡರು. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗಾಗಿ ಆಡುವ ಈ ಪ್ರತಿಭೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಉತ್ತಮ ಅಂಕಿಅಂಶ ಹೊಂದಿದ್ದಾರೆ. 39 ಪಂದ್ಯಗಳಲ್ಲಿ 21.55 ರ ಸರಾಸರಿ ಮತ್ತು 2.70 ಎಕಾನಮಿ ದರದಲ್ಲಿ 149 ವಿಕೆಟ್‌ಗಳನ್ನು ಉರುಳಿಸಿದ್ದು, 40 ರನ್​ ಕೊಟ್ಟು 6 ವಿಕೆಟ್​​ ಪಡೆದಿರುವುದು ಉತ್ತಮ ಬೌಲಿಂಗ್​ ಸಾಧನೆ.

ಇದನ್ನೂ ಓದಿ: ICC Ranking: ರಹಾನೆ, ಶಾರ್ದೂಲ್ ಐಸಿಸಿ ರ್‍ಯಾಂಕಿಂಗ್​ ಏರಿಕೆ; ಆಡದೇ ಇದ್ದರೂ ಅಶ್ವಿನ್‌ಗೆ ಅಗ್ರಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.