ಮುಂಬೈ: ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಕೃತಿ ಸನೋನ್, ಕಿಯಾರಾ ಅಡ್ವಾಣಿ ಮತ್ತು ಸ್ಟಾರ್ ಸಿಂಗರ್ ಎ.ಪಿ.ಧಿಲ್ಲೋನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಹಿಳಾ ಆಟಗಾರರ ಜೊತೆ ಕ್ರಿಕೆಟ್ ವೀಕ್ಷಿಸಲು ಆಗಮಿಸಿದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದರು.
-
The #TATAWPL kicks off in style! 🙌
— Women's Premier League (WPL) (@wplt20) March 4, 2023 " class="align-text-top noRightClick twitterSection" data="
Kiara Advani's entertaining performance gets the crowd going! 👌👌 pic.twitter.com/cKfuGOCpEC
">The #TATAWPL kicks off in style! 🙌
— Women's Premier League (WPL) (@wplt20) March 4, 2023
Kiara Advani's entertaining performance gets the crowd going! 👌👌 pic.twitter.com/cKfuGOCpECThe #TATAWPL kicks off in style! 🙌
— Women's Premier League (WPL) (@wplt20) March 4, 2023
Kiara Advani's entertaining performance gets the crowd going! 👌👌 pic.twitter.com/cKfuGOCpEC
ತಮ್ಮ ಸಿನಿಮಾಗಳ ಹಿಟ್ ಹಾಡುಗಳೊಂದಿಗೆ ಕಿಯಾರಾ ಕಾರ್ಯಕ್ರಮ ಪ್ರಾರಂಭಿಸಿದರು. ಬಳಿಕ ಕೃತಿ 'ಚಕ್ ದೇ ಇಂಡಿಯಾ'ದ ಹಾಡಿಗೆ ಹೃದಯಸ್ಪರ್ಶಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದರು. ಇಬ್ಬರೂ ನಟಿಯರು ಪ್ರಮುಖ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಇನ್ನು ಎ.ಪಿ.ಧಿಲ್ಲೋನ್ ಈಗಾಗಲೇ ಕ್ರಿಕೆಟ್ ಆಟಗಾರ್ತಿಯರಾದ ಹರ್ಲೀನ್ ಡಿಯೋಲ್ ಮತ್ತು ಜೆಮಿಮಾ ರೋಡ್ರಿಗಸ್ ಅವರೊಂದಿಗೆ ಸಂವಾದ ನಡೆಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ಅವರೂ ಸಹ ನಿನ್ನೆ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಗೆ ಸಖತ್ ಎಂಟರ್ಟೈನ್ಮೆಂಟ್ ಕೊಟ್ಟರು.
ಇಷ್ಟು ದಿನಗಳ ಕಾಲ ವನಿತೆಯರ ಕ್ರಿಕೆಟ್ ಲೀಗ್ ಅಂದ್ರೆ ಕೇವಲ ಆಸ್ಟ್ರೇಲಿಯದ ಬಿಗ್ ಬಾಶ್ ಲೀಗ್ ಮಾತ್ರ ನೆನಪಾಗುತ್ತಿತ್ತು. ಆದ್ರೆ, ಇದೀಗ ಭಾರತದಲ್ಲಿ ಕೆಲವು ಅತ್ಯುತ್ತಮ ಆಟಗಾರರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗುವ ಮೂಲಕ ಹೊಸ ಶಖೆ ಶುರುವಾಗಿದೆ. ಮೊದಲ ಅವೃತ್ತಿಯ ಪ್ರಾರಂಭಿಕ ಆಟದಲ್ಲಿ ನಿನ್ನೆ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕಾದಾಟ ನಡೆಯಿತು. ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 143 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
-
An energetic performance ahead of an energetic #TATAWPL!
— Women's Premier League (WPL) (@wplt20) March 4, 2023 " class="align-text-top noRightClick twitterSection" data="
Kriti Sanon lights up the DY Patil Stadium in Navi Mumbai 🔥🔥 pic.twitter.com/tcvQD8s0PV
">An energetic performance ahead of an energetic #TATAWPL!
— Women's Premier League (WPL) (@wplt20) March 4, 2023
Kriti Sanon lights up the DY Patil Stadium in Navi Mumbai 🔥🔥 pic.twitter.com/tcvQD8s0PVAn energetic performance ahead of an energetic #TATAWPL!
— Women's Premier League (WPL) (@wplt20) March 4, 2023
Kriti Sanon lights up the DY Patil Stadium in Navi Mumbai 🔥🔥 pic.twitter.com/tcvQD8s0PV
ಇದನ್ನೂ ಓದಿ: ಮಹಿಳಾ ಐಪಿಎಲ್: ಗುಜರಾತ್ ವಿರುದ್ಧ ಮುಂಬೈಗೆ 143 ರನ್‌ಗಳ ಭರ್ಜರಿ ಜಯ; ಹರ್ಮನ್ ಮಿಂಚು
ಮಹಿಳಾ ಐಪಿಎಲ್‌ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು ಎರಡು ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. 23 ದಿನಗಳ ಕಾಲ ಪಂದ್ಯಾವಳಿಗಳು ನಿಗದಿಯಾಗಿವೆ. 87 ಆಟಗಾರ್ತಿಯರು ಐದು ತಂಡಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರ್ಷ ಪಂದ್ಯಾವಳಿಗೆ ಮುಂಬೈ ಆತಿಥ್ಯ ನೀಡುತ್ತಿದೆ. ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂ ಮತ್ತು ಡಾ.ಡಿ.ವೈ.ಪಾಟೀಲ್ ಸ್ಟೇಡಿಯಂಗಳಲ್ಲಿ ತಲಾ 11 ಪಂದ್ಯಗಳು ನಡೆಯಲಿವೆ. ಮಹಿಳೆಯರ ಪ್ರೀಮಿಯರ್ ಲೀಗ್ 2023 ರ ಫೈನಲ್ ಮ್ಯಾಚ್ ಮಾರ್ಚ್ 26 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
-
𝘼𝙋 𝘿𝙝𝙞𝙡𝙡𝙤𝙣 𝙞𝙣 𝙩𝙝𝙚 𝙝𝙤𝙪𝙨𝙚!
— Women's Premier League (WPL) (@wplt20) March 4, 2023 " class="align-text-top noRightClick twitterSection" data="
How about THAT for an electrifying performance 🤩#TATAWPL | @apdhillxn pic.twitter.com/CuYbqWEo0a
">𝘼𝙋 𝘿𝙝𝙞𝙡𝙡𝙤𝙣 𝙞𝙣 𝙩𝙝𝙚 𝙝𝙤𝙪𝙨𝙚!
— Women's Premier League (WPL) (@wplt20) March 4, 2023
How about THAT for an electrifying performance 🤩#TATAWPL | @apdhillxn pic.twitter.com/CuYbqWEo0a𝘼𝙋 𝘿𝙝𝙞𝙡𝙡𝙤𝙣 𝙞𝙣 𝙩𝙝𝙚 𝙝𝙤𝙪𝙨𝙚!
— Women's Premier League (WPL) (@wplt20) March 4, 2023
How about THAT for an electrifying performance 🤩#TATAWPL | @apdhillxn pic.twitter.com/CuYbqWEo0a
ಇದನ್ನೂ ಓದಿ: ಮಹಿಳಾ ಐಪಿಎಲ್‌ನಲ್ಲಿಂದು 2 ಪಂದ್ಯ: ಆರ್ಸಿಬಿ vs ಡೆಲ್ಲಿ ಕುತೂಹಲ; ನಿಮ್ಮ ಬೆಂಬಲ ಯಾರಿಗೆ?
5 ತಂಡಗಳು ಕಣಕ್ಕೆ: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು ಐದು ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ ಬೆಂಗಳೂರು, ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್. ಹಾಗೆಯೇ, ಕ್ರಮವಾಗಿ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ಬೆತ್ ಮೂನಿ, ಮೆಗ್ ಲ್ಯಾನಿಂಗ್, ಅಲಿಸ್ಸಾ ಹೀಲಿ ತಂಡಗಳ ನಾಯಕಿಯರಾಗಿದ್ದಾರೆ.