ETV Bharat / sports

Steve smith: ಆಫ್​ ಸ್ಟಂಪ್ ಲೆಂತ್​ನಲ್ಲಿ ಬೌಲ್​​​ ​ಮಾಡಿದ್ದೇ ನಮಗೆ ಲಾಭ: ಸ್ಟೀವ್​ ಸ್ಮಿತ್​ - ಈಟಿವಿ ಭಾರತ ಕನ್ನಡ

ಬೌನ್ಸ್​ ಪಿಚ್​​ನಲ್ಲಿ ನಮ್ಮ ಬೌಲರ್​ಗಳು ಆಫ್​​ ಸ್ಟಂಪ್​ ಬೌಲಿಂಗ್​ ಅಸ್ತ್ರ ಪ್ರಯೋಗಿಸಿ ಲಾಭ ಪಡೆದಿದ್ದಾರೆ ಎಂದು ಸ್ಟೀವ್​ ಸ್ಮಿತ್​ ಹೇಳಿದ್ದಾರೆ.

ಸ್ಟೀವ್​ ಸ್ಮಿತ್​
ಸ್ಟೀವ್​ ಸ್ಮಿತ್​
author img

By

Published : Jun 9, 2023, 9:15 AM IST

ಲಂಡನ್​: ಆಫ್​ ಸ್ಟಂಪ್​ ಗುರಿಯಾಗಿಸಿಕೊಂಡು ಬಿಗಿ ಬೌಲಿಂಗ್​ ಮಾಡಿರುವುದೇ ನಮ್ಮ ಬೌಲರ್​ಗಳಿಗೆ ಲಾಭವಾಗಿದೆ ಎಂದು ಆಸ್ಟ್ರೇಲಿಯಾದ ಬ್ಯಾಟರ್​ ಸ್ಟೀವ್ ಸ್ಮಿತ್ ಗುರುವಾರ​ ಹೇಳಿದ್ದಾರೆ. ಇಲ್ಲಿಯ ಓವೆಲ್​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 469 ರನ್​ಗಳ ಕಲೆ ಹಾಕಿದರೆ, ಭಾರತ 150 ರನ್​ ಕಲೆ ಹಾಕುವಷ್ಟರಲ್ಲಿ ಪ್ರಮುಖ ಐದು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಪಂದ್ಯ ಬಳಿಕ ಈ ಬಗ್ಗೆ ಮಾತನಾಡಿದ ಸ್ಮಿತ್​, "ನನ್ನ ಪ್ರಕಾರ ಈ ಪಿಚ್​ನಲ್ಲಿ ಆಫ್​ ಸ್ಟಂಪ್​ ಲೆಂತ್​ ಬೌಲಿಂಗ್​ ಮುಖ್ಯವಾಗಿದೆ. ವೇರಿಯಬಲ್​ ಬೌನ್ಸ್​ ಪಿಚ್​​ನಲ್ಲಿ ನಮ್ಮ ಬೌಲರ್​ಗಳು ಆಫ್​​ ಸ್ಟಂಪ್​ ಬೌಲಿಂಗ್​ ಅಸ್ತ್ರ ಪ್ರಯೋಗಿಸಿ ಅದರ ಲಾಭ ಪಡೆದಿದ್ದಾರೆ".​

ಆಫ್​ ಸ್ಟಂಪ್ಸ್​ನ ಮೇಲ್ಭಾಗವನ್ನು ಗುರಿಯಾಗಿಸಿಕೊಂಡು ಬೌಲ್​ ಮಾಡಿದರೆ ಬ್ಯಾಟ್​ಗೆ ಸೈಡ್ ಎಡ್ಜ್​ ಆಗುವ ಸಾಧ್ಯತೆ ಹೆಚ್ಚಿದ್ದು, ಎದುರಾಳಿಗಳನ್ನು ಸುಲಭವಾಗಿ ಪೆವಿಲಿಯನ್​ಗೆ ಕಳಿಸಬಹುದಾಗಿದೆ" ಎಂದು ಸ್ಮಿತ್​ ಇದೆ ವೇಳೆ ಹೇಳಿದರು.

ಬಳಿಕ 31ನೇ ಟೆಸ್ಟ್​ ಶತಕದ ಬಗ್ಗೆ ಪ್ರತಿಕ್ರಿಯಿಸಿ, ಈ ಮೈಲಿಗಲ್ಲು ತಲುಪಿದ್ದು ನನಗೆ ಸಂತಸ ತಂದಿದೆ. ನಾನು ಆಡಿದ ರೀತಿಯನ್ನು ಹೆಮ್ಮೆಪಡುತ್ತೇನೆ. ಫೈನಲ್​ನಲ್ಲಿ ನಾನು ಉತ್ತಮ ನಿರ್ವಹಣೆ ತೋರಿದ್ದೇನೆ ಎಂದು ಭಾವಿಸಿರುವುದಾಗಿ ಹೇಳಿದರು.

ಇನ್ನು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಶತಕ ಸಿಡಿಸಿದ್ದರು. 268 ಎಸೆತಗಳಲ್ಲಿ 19 ಬೌಂಡರಿಗಳೊಂದಿಗೆ 121 ರನ್​ಗಳಿಸುವ ಮೂಲಕ ಟೆಸ್ಟ್​ನಲ್ಲಿ 31 ಶತಕ ಪೂರೈಸಿದರು.​​​ ಈ ಮೂಲಕ ಆಸ್ಟ್ರೇಲಿಯ ಪರ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ಸ್ಮಿತ್​ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಟೆಸ್ಟ್​ನಲ್ಲಿ ಹೆಚ್ಚು ಶತಕ ಬಾರಿಸಿದ ಆಸೀಸ್​ ಆಟಗಾರರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಪಾಂಟಿಂಗ್ ಟೆಸ್ಟ್​ನಲ್ಲಿ 41 ಶತಕಗಳನ್ನು ಸಿಡಿಸಿದ್ದಾರೆ. 32 ಶತಕಗಳೊಂದಿಗೆ ಸ್ಟೀವ್ ವಾ ಎರಡನೇ ಸ್ಥಾನದಲ್ಲಿದ್ದಾರೆ. ಸ್ಮಿತ್ 31 ಶತಕಗಳ ಸಿಡಿಸಿ 3ನೇ ಸ್ಥಾನಕ್ಕೆ ಕಾಲಿಟ್ಟಿದ್ದಾರೆ. ಮ್ಯಾಥ್ಯೂ ಹೇಡನ್ 30 ಶತಕಗಳೊಂದಿಗೆ 4ನೇ ಸ್ಥಾನ, ಸರ್ ಡಾನ್ ಬ್ರಾಡ್ಮನ್ 29 ಶತಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಇನ್ನು ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್​ ಪಡೆ 38 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 151 ರನ್​ ಗಳಿಸಿ 318ರನ್​ಗಳ ಹಿನ್ನೆಡೆಯಲ್ಲಿದೆ. ಅಜಿಂಕ್ಯ ರಹಾನೆ (29) ಹಾಗೂ ಶ್ರೀಕರ್ ಭರತ್ (5) ಮೂರನೇ ದಿನಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಮೊದಲ ಟಾಸ್​ ಸೋತು ಬ್ಯಾಟಿಂಗ್ ಮಾಡಿದ್ದ ಆಸೀಸ್​ ಮೂರು ವಿಕೆಟ್​ ನಷ್ಟಕ್ಕೆ 327 ರನ್ ಪೇರಿಸಿತ್ತು. ಎರಡನೇ ದಿನದಾಟದಲ್ಲಿ ಭಾರತದ ವೇಗಿಗಳ ಬಿಗಿ ಹಿಡಿತ ಸಾಧಿಸಿದ್ದರಿಂದ ಕೇವಲ 142 ರನ್​ ಕಲೆ ಹಾಕಿ 469 ರನ್​ಗಳಿಗೆ ಸರ್ವಪತನ ಕಂಡಿತು.

ಇದನ್ನೂ ಓದಿ: WTC Final 2023: ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ; ಕುಸಿದ ಭಾರತಕ್ಕೆ ರಹಾನೆ- ಜಡೇಜಾ ಆಸರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.