ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಅಲ್ಪಮೊತ್ತಕ್ಕೆ ಕುಸಿದಿದೆ. ಲಂಕಾ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಆಂಗ್ಲರು, ಕೇವಲ 33.2 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 156 ರನ್ ಕಲೆ ಹಾಕಿದರು. ಶ್ರೀಲಂಕಾ ಗೆಲ್ಲಲು 157 ರನ್ ಬೇಕಿದೆ.
-
We're all out in Bangalore, with Sri Lanka needing 1️⃣5️⃣7️⃣ to win. #EnglandCricket | #CWC23 pic.twitter.com/vO0wYYjjvb
— England Cricket (@englandcricket) October 26, 2023 " class="align-text-top noRightClick twitterSection" data="
">We're all out in Bangalore, with Sri Lanka needing 1️⃣5️⃣7️⃣ to win. #EnglandCricket | #CWC23 pic.twitter.com/vO0wYYjjvb
— England Cricket (@englandcricket) October 26, 2023We're all out in Bangalore, with Sri Lanka needing 1️⃣5️⃣7️⃣ to win. #EnglandCricket | #CWC23 pic.twitter.com/vO0wYYjjvb
— England Cricket (@englandcricket) October 26, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರು, ಈ ಹಿಂದಿನಂತೆ ಇಂದೂ ಸಹ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಬೆನ್ ಸ್ಟೋಕ್ಸ್ ಹೊರತುಪಡಿಸಿ ಕ್ರೀಸ್ನಲ್ಲಿ ಯಾರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. 73 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್, 6 ಬೌಂಡರಿ ಸಹಿತ 43 ರನ್ ಗಳಿಸಿ ಅರ್ಧ ಶತಕದಿಂದ ವಂಚಿತರಾದರು. ಇನ್ನಿಂಗ್ಸ್ನಲ್ಲಿ ವೈಯಕ್ತಿಕವಾಗಿ ಇದೇ ದೊಡ್ಡ ಮೊತ್ತವಾಯಿತು. ಉಳಿದಂತೆ, ಎಲ್ಲರೂ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
-
Sri Lanka's bowling prowess on full display! 💪 Check out these impressive figures. #SLvENG #LankanLions #CWC23 pic.twitter.com/IKktDHZGHi
— Sri Lanka Cricket 🇱🇰 (@OfficialSLC) October 26, 2023 " class="align-text-top noRightClick twitterSection" data="
">Sri Lanka's bowling prowess on full display! 💪 Check out these impressive figures. #SLvENG #LankanLions #CWC23 pic.twitter.com/IKktDHZGHi
— Sri Lanka Cricket 🇱🇰 (@OfficialSLC) October 26, 2023Sri Lanka's bowling prowess on full display! 💪 Check out these impressive figures. #SLvENG #LankanLions #CWC23 pic.twitter.com/IKktDHZGHi
— Sri Lanka Cricket 🇱🇰 (@OfficialSLC) October 26, 2023
ಜಾನಿ ಬೈರ್‌ಸ್ಟೋವ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ಮಲನ್ ತಂಡದ ಮೊತ್ತ 45 ರನ್ ಆಗಿದ್ದಾಗ ಮೊದಲು ವಿಕೆಟ್ ಒಪ್ಪಿಸಿದರು. 25 ಎಸೆತ ಎದುರಿಸಿದ ಮಲನ್ 6 ಬೌಂಡರಿಗಳೊಂದಿಗೆ 28 ರನ್ ಕಲೆ ಹಾಕಿದರು. ಬಳಿಕ ಬಂದ ಜೋ ರೂಟ್ ಕೇವಲ 3 ರನ್ ಗಳಿಸಿ ಭರವಸೆ ಹುಸಿಗೊಳಿಸಿದರು. ಕ್ರೀಸ್‌ನಲ್ಲಿದ್ದ ಬೈರ್ಸ್ಟೋವ್ಗೆ ಜತೆಯಾದ ಬೆನ್ ಸ್ಟೋಕ್ಸ್ ತಂಡದ ಮೊತ್ತವನ್ನು ಸ್ವಲ್ಪ ಸುಧಾರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ನಾಯಕ ಜೋಶ್ ಬಟ್ಲರ್ 8, ಲಿಯಾಮ್ ಲಿವಿಂಗ್‌ಸ್ಟೋನ್ 1, ಮೊಯಿನ್ ಅಲಿ 15, ಕ್ರಿಸ್ ವೋಕ್ಸ್ 0, ಆದಿಲ್ ರಶೀದ್ 2, ಮಾರ್ಕ್ ವುಡ್ 5 ರನ್‌ಗಳಿಸಿ ಬಂದ ದಾರಿಯಲ್ಲಿಯೇ ಮರಳಿದರು. ಔಟಾಗದೇ ಡೇವಿಡ್ ವಿಲ್ಲಿ 14 ರನ್ ಗಳಿಸಿದರು. ಘಟಾನುಘಟಿ ಬ್ಯಾಟರ್ಗಳೇ ತಂಡದಲ್ಲಿದ್ದರೂ ಆಂಗ್ಲರು ರನ್ ಗಳಿಸಲು ಪರದಾಡಿದರು. ಬ್ಯಾಟಿಂಗ್ ಪಿಚ್ನಲ್ಲಿ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಆಂಗ್ಲರ ಲೆಕ್ಕಾಚಾರ ತಲೆಕೆಳಗಾಯಿತು. 33.2 ಓವರ್ಗಳಲ್ಲಿ 156 ರನ್ ಕಲೆ ಹಾಕಿ ಸರ್ವ ಪತನ ಕಂಡಿತು.
-
Spectacular Mendis catch removes Buttler 🤯
— ICC (@ICC) October 26, 2023 " class="align-text-top noRightClick twitterSection" data="
This Lahiru Kumara wicket is one of the moments that could be featured in your @0xFanCraze Crictos Collectible packs!
Visit https://t.co/8TpUHbQikC to own iconic moments from the #CWC23 pic.twitter.com/2v3bxZDZTb
">Spectacular Mendis catch removes Buttler 🤯
— ICC (@ICC) October 26, 2023
This Lahiru Kumara wicket is one of the moments that could be featured in your @0xFanCraze Crictos Collectible packs!
Visit https://t.co/8TpUHbQikC to own iconic moments from the #CWC23 pic.twitter.com/2v3bxZDZTbSpectacular Mendis catch removes Buttler 🤯
— ICC (@ICC) October 26, 2023
This Lahiru Kumara wicket is one of the moments that could be featured in your @0xFanCraze Crictos Collectible packs!
Visit https://t.co/8TpUHbQikC to own iconic moments from the #CWC23 pic.twitter.com/2v3bxZDZTb
ಶ್ರೀಲಂಕಾ ಪರ ಕಸುನ್ ರಜಿತ, ಲಹಿರು ಕುಮಾರ ಮತ್ತು ಆ್ಯಂಜಲೋ ಮ್ಯಾಥ್ಯೂಸ್ ಕರಾರುವಾಕ್ ಬೌಲಿಂಗ್ ನಡೆಸಿದರು. ಲಹಿರು ಕುಮಾರ 3 ವಿಕೆಟ್ ಉರುಳಿಸಿದರೆ, ಮ್ಯಾಥ್ಯೂಸ್ ಮತ್ತು ಕಸುನ್ ರಜಿತ ತಲಾ 2 ವಿಕೆಟ್ ಪಡೆದರು. ಮಹೀಶ ತೀಕ್ಷಣ 1 ವಿಕೆಟ್ ಪಡೆದು ಸಾಥ್ ನೀಡಿದರು.
ಮ್ಯಾಥ್ಯೂಸ್ ಕಮ್ ಬ್ಯಾಕ್: ಶ್ರೀಲಂಕಾದ ಅನುಭವಿ ಆಲ್‌ರೌಂಡರ್ ಆ್ಯಂಜೆಲೋ ಮ್ಯಾಥ್ಯೂಸ್, ತಮ್ಮ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. 7ನೇ ಓವರ್‌ನ ಎಸೆತದಲ್ಲಿ ಡೇವಿಡ್ ಮಲಾನ್ ವಿಕೆಟ್ ಪಡೆದು ಮಿಂಚಿದರೆ, ನಂತರ ಬಂದ ಜೋ ರೂಟ್ ಅವರ ಕ್ಯಾಚ್ ಪಡೆದರು. ತಮ್ಮ 25ನೇ ಓವರ್‌ನಲ್ಲಿ ಮೊಯಿನ್ ಅಲಿ ಅವರನ್ನು ಪೆವಿಲಿಯನ್ಗೆ ಕಳಿಸುವ ಮೂಲಕ ಮ್ಯಾಥ್ಯೂಸ್ ತಮ್ಮ ಅಂತಿಮ ವಿಶ್ವಕಪ್ ಯಾನವನ್ನು ಸ್ಮರಣೀಯವಾಗಿರಿಸಿದರು.
ಲಂಕಾ ಪರ 222 ಏಕದಿನ ಪಂದ್ಯಗಳನ್ನಾಡಿದ್ದು, 121 ವಿಕೆಟ್ ಪಡೆದು, 5,865 ರನ್ ಗಳಿಸಿದ್ದಾರೆ. ಪ್ರಸ್ತುತ ಲಂಕಾ ತಂಡದಲ್ಲಿರುವ ಅನುಭವಿ ಮ್ಯಾಥ್ಯೂಸ್ಗೆ ಇದು ನಾಲ್ಕನೇ ವಿಶ್ವಕಪ್. ಇದೇ ವರ್ಷ ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊನೆಯದಾಗಿ ಬೌಲಿಂಗ್ ಮಾಡಿದ್ದ ಮ್ಯಾಥ್ಯೂಸ್, ನಂತರ ತಂಡದ ಪರ ಬ್ಯಾಟರ್ ಆಗಿ ಮಾತ್ರ ಮುಂದುವರೆದಿದ್ದರು.
ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮ್ಯಾಥ್ಯೂಸ್, ಬಳಿಕ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಲಂಕಾದ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಅವರನ್ನು ನಂತರದಲ್ಲಿ ಟ್ರಾವೆಲಿಂಗ್ ರಿಸರ್ವ್ ಆಟಗಾರನಾಗಿ ಹೆಸರಿಸಲಾಗಿತ್ತು. ಯುವ ವೇಗಿ ಮತೀಶ ಪತಿರಾಣಾ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದು, ಇಂದಿನ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುನ್ನವಷ್ಟೇ ಮ್ಯಾಥ್ಯೂಸ್ ಅವರನ್ನು ಬದಲಿ ಆಟಗಾರನಾಗಿ ಹೆಸರಿಸಲಾಗಿತ್ತು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದೇ ಭಾರತ?