ಹ್ಯಾಮಿಲ್ಟನ್: ದಕ್ಷಿಣ ಆಫ್ರಿಕಾ ಮಹಿಳಾ ತಂಡ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಗುರುವಾರ ಅತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಉತ್ತಮ ಆರಂಭದ ಹೊರತಾಗಿಯೂ, ದಿಢೀರ್ ಕುಸಿತ ಅನುಭವಿಸಿ ಕೇವಲ 228ಕ್ಕೆ ಆಲೌಟ್ ಆಯಿತು.
ಆರಂಭದಲ್ಲೇ ಸೂಜಿ ಬೇಟ್ಸ್ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ಗೆ ನಾಯಕಿ ಸೋಫಿ ಡಿವೈನ್ 93(101 ಎಸೆತ) ಮತ್ತು ಅಮೇಲಿಯಾ ಕೆರ್ 42(58 ಎಸೆತ) ರನ್ಗಳಿಸಿ ತಂಡವನ್ನು ಸುಸ್ಥಿತಿಗೆ ತಂದಿದ್ದರು. ಇವರ ನಂತರ ಬಂದ ಬ್ಯಾಟರ್ಗಳು ದಕ್ಷಿಣ ಆಫ್ರಿಕಾ ದಾಳಿಗೆ ಉತ್ತರಿಸಲಾಗದೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮ್ಯಾಡಿ ಗ್ರೀನ್ 30 ಮತ್ತು ಹ್ಯಾಲಿಡೇ 24 ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಇನ್ನು 229ರನ್ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 49.3 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿ ಸೆಮಿಫೈನಲ್ಗೆ ಮತ್ತಷ್ಟು ಹತ್ತಿರವಾಗಿದೆ.
ವಿಶ್ವಕಪ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಲೌರಾ ವಾಲ್ವಾರ್ಡ್ಟ್ 67 ರನ್ಗಳಿಸಿದರೆ, ನಾಯಕಿ ಸುನೆ ಲೂಸ್ 73 ಎಸೆತಗಳಲ್ಲಿ 51 ಮತ್ತು ಆಲ್ರೌಂಡರ್ ಮರಿಝಾನ್ ಕಾಪ್ ಅಜೇಯ 35 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಕಾಪ್ ಬೌಲಿಂಗ್ನಲ್ಲೂ ಮಿಂಚಿದ್ದು, 44ಕ್ಕೆ 2 ವಿಕೆಟ್ ಪಡೆದಿದ್ದರು. ವೇಗಿಗಳಾದ ಇಸ್ಮಾಯಿಲ್ 27ಕ್ಕೆ 3, ಅಯಬೊಂಗಾ ಖಾಕ 31ಕ್ಕೆ 3 ವಿಕೆಟ್ ಪಡೆದಿದ್ದರು.
ನ್ಯೂಜಿಲ್ಯಾಂಡ್ ಪರ ಅಮೆಲಿಯಾ ಕೆರ್ 50ಕ್ಕೆ 3, ಫ್ರಾನ್ಸಸ್ ಮೆಕೆ 49ಕ್ಕೆ2, ಡಿವೈನ್ ಮತ್ತು ರೋವ್ ತಲಾ ಒಂದು ವಿಕೆಟ್ ಪಡೆದರಾದರೂ ಸೋಲನ್ನು ತಪ್ಪಿಸಲಾಗಲಿಲ್ಲ.
ದಕ್ಷಿಣ ಆಫ್ರಿಕಾ ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲೂ ಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡು ಸೆಮಿಫೈನಲ್ಗೆ ಹತ್ತಿರವಾಗಿದೆ.
ಇದನ್ನೂ ಓದಿ:5 ಕ್ಯಾಚ್ ಕೈಚಲ್ಲಿದ್ದೇ ಪಾಕ್ ವಿರುದ್ಧದ 2ನೇ ಟೆಸ್ಟ್ ಗೆಲುವು ತಪ್ಪಲು ಕಾರಣ - ಆಸೀಸ್ ನಾಯಕ ಕಮ್ಮಿನ್ಸ್