ಮುಂಬೈ: ಇಲ್ಲಿ ಶನಿವಾರ ನಡೆದ ನಾಲ್ಕನೇ ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಏಳು ರನ್ಗಳಿಂದ ಜಯ ಸಾಧಿಸಿತು. ಗೆಲುವಿಗಾಗಿ 189 ರನ್ ಗುರಿ ಬೆನ್ನತ್ತಿದ್ದ ಭಾರತ 20 ಓವರ್ಗಳಲ್ಲಿ 181 ರನ್ಗಳಿಗೆ ಆಲೌಟ್ ಆಗಿ ನಿರಾಶೆ ಅನುಭವಿಸಿತು. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 46 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿದ್ದು 3 ವಿಕೆಟ್ಗೆ 188 ರನ್ ಗಳಿಸಿತು. ಎಲ್ಲಿಸ್ ಪೆರ್ರಿ ಔಟಾಗದೆ 72 ರನ್ ಗಳಿಸಿ ಗೆಲುವಿನ ರುವಾರಿಯಾದರು. ಅಶ್ಲೀಗ್ ಗಾರ್ಡ್ನರ್ 42 ರನ್ ಕಲೆ ಹಾಕುವ ಮೂಲಕ ಪೆರ್ರಿಗೆ ಉತ್ತಮ ಸಾಥ್ ಕೊಟ್ಟರು.
ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ನಾಯಕಿ ಹರ್ಮನ್ ಪ್ರೀತ್ ಒಂದು ವಿಕೆಟ್ ಕಿತ್ತರು. ಐದು ಪಂದ್ಯಗಳ ಚುಟುಕು ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ, ಮೂರನೇ ಮತ್ತು ನಾಲ್ಕನೇ ಪಂದ್ಯದಲ್ಲಿ ಗೆದ್ದರೆ, ಭಾರತ ಎರಡನೇ ಪಂದ್ಯದಲ್ಲಿ ಜಯಶಾಲಿಯಾಗಿತ್ತು. ಈ ಮೂಲಕ ಭಾರತ ಮಹಿಳೆಯರು 3-1 ರಿಂದ ಸರಣಿ ಸೋಲು ಅನುಭವಿಸಿದರು.
ಸಂಕ್ಷಿಪ್ತ ಸ್ಕೋರ್ ಪಟ್ಟಿ: ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 3 ವಿಕೆಟ್ಗೆ 188 ರನ್ (ಎಲ್ಲಿಸ್ ಪೆರ್ರಿ 72*, ಅಶ್ಲೀಗ್ ಗಾರ್ಡ್ನರ್ 42: ದೀಪ್ತಿ ಶರ್ಮಾ 2/35)
ಭಾರತ: 20 ಓವರ್ಗಳಲ್ಲಿ 181 ರನ್ (ಹರ್ಮನ್ ಪ್ರೀತ್ ಕೌರ್ 46, ರಿಚಾ ಗೋಶ್ 40*: ಅಶ್ಲೀಗ್ ಗಾರ್ಡ್ನರ್ 2/20, ಅಲಾನಾ ಕಿಂಗ್ 2/23)
ಇದನ್ನೂ ಓದಿ: ಸ್ಪೇನ್ ಮಣಿಸಿ ಹಾಕಿ ನೇಷನ್ಸ್ ಕಪ್ ಗೆದ್ದ ಭಾರತದ ವನಿತೆಯರು, ಪ್ರೊ ಲೀಗ್ಗೆ ಅರ್ಹತೆ