ETV Bharat / sports

ನಿರ್ದಿಷ್ಟ ಕಾರಣವಿಲ್ಲದೆ ಬರೋಡ ತಂಡದ ನಾಯಕತ್ವ ತ್ಯಜಿಸಿದ ಕೃನಾಲ್ ಪಾಂಡ್ಯ

ಕೃನಾಲ್ ಪಾಂಡ್ಯ ಕೊನೆಯ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್​ನಲ್ಲಿ ಕಾಣಿಸಿದ್ದರು. 2021-22ರ ವಿಜಯ ಹಜಾರೆ ಟ್ರೋಫಿ ಮೂಲಕ ಮತ್ತೆ ಕ್ರಿಕೆಟ್​ಗೆ ಮರಳಲಿದ್ದಾರೆ. ಡಿಸೆಂಬರ್ 8ರಿಂದ ಹಜಾರೆ ಏಕದಿನ ಟೂರ್ನಿ ಆರಂಭವಾಗಲಿದೆ..

Krunal Pandya steps down as Baroda skipper
ಕೃನಾಲ್ ಪಾಂಡ್ಯ ರಾಜೀನಾಮೆ
author img

By

Published : Nov 27, 2021, 3:08 PM IST

ಬರೋಡ : ವಿಜಯ ಹಜಾರೆ ಟ್ರೋಫಿಗೆ ವಾರವಿರುವಾಗ ಭಾರತ ತಂಡದ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಬರೋಡ ಕ್ರಿಕೆಟ್​ ತಂಡದ ನಾಯಕತ್ವವನ್ನು ತ್ಯಜಿಸಿ ಅಚ್ಚರಿ ಮೂಡಿಸಿದ್ದಾರೆ.

ಬರೋಡ ಕ್ರಿಕೆಟ್​ ಮಂಡಳಿಯ ಕಾರ್ಯದರ್ಶಿ ಅಜಿತ್ ಲೇಲೆ ಕೃನಾಲ್ ಪಾಂಡ್ಯ ನಾಯಕತ್ವವನ್ನು ತ್ಯಜಿಸಿರುವ ಸುದ್ದಿಯನ್ನು ಎಎನ್​ಐಗೆ ಖಚಿತಪಡಿಸಿದ್ದಾರೆ. ಆದರೆ, ಅವರು ಒಬ್ಬ ಆಟಗಾರನಾಗಿ ತಂಡಕ್ಕೆ ಲಭ್ಯರಿರುತ್ತಾರೆ ಎಂದು ಅವರು ಹೇಳಿದ್ದಾರೆ.

"ಹೌದು ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು ಬಿಸಿಎ ಪ್ರೆಸಿಡೆಂಟ್​ಗೆ ಮಾತ್ರ ಇಮೇಲ್ ಕಳುಹಿಸಿದ್ದಾರೆ. ನನಗೆ ಅದು ಬಂದಿಲ್ಲ. ಅಧ್ಯಕ್ಷರು ಅವರ ರಾಜೀನಾಮೆ ವಿಷಯವನ್ನು ಘೋಷಿಸಿದ್ದಾರೆ ಎಂದು ಅಜಿತ್ ತಿಳಿಸಿದ್ದಾರೆ.

ಆದರೆ, ಇಮೇಲ್​ನಲ್ಲಿ ಅವರು ತಮ್ಮ ರಾಜೀನಾಮೆಗೆ ಯಾವುದೇ ಕಾರಣವನ್ನು ತಿಳಿಸಿಲ್ಲ. ನಾನು ನಾಯಕನಾಗಿ ಲಭ್ಯನಾಗುವುದಿಲ್ಲ, ನಾನೊಬ್ಬ ಪ್ಲೇಯರ್ ಆಗಿ ಇರುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ದಾರೆ.

ಕೃನಾಲ್ ಪಾಂಡ್ಯ ಕೊನೆಯ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್​ನಲ್ಲಿ ಕಾಣಿಸಿದ್ದರು. 2021-22ರ ವಿಜಯ ಹಜಾರೆ ಟ್ರೋಫಿ ಮೂಲಕ ಮತ್ತೆ ಕ್ರಿಕೆಟ್​ಗೆ ಮರಳಲಿದ್ದಾರೆ. ಡಿಸೆಂಬರ್ 8ರಿಂದ ಹಜಾರೆ ಏಕದಿನ ಟೂರ್ನಿ ಆರಂಭವಾಗಲಿದೆ.

ಇದನ್ನೂ ಓದಿ:ಕ್ರಿಕೆಟ್​ ಲೋಕದ ಕರಾಳ ದಿನಕ್ಕೆ 7 ವರ್ಷ: ಪಿಲಿಫ್​ ಹ್ಯೂಸ್​ ನೆನೆದ ಕ್ರಿಕೆಟ್ ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.