ETV Bharat / sports

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಿಂದ ಹೊರಬಿದ್ದ ವಿಲಿಯಮ್ಸನ್​ - ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ಗೆ ವಿಲಿಯಮ್ಸನ್​ಗೆ ವಿಶ್ರಾಂತಿ

ಲ್ಯಾಥಮ್​ ಕಿವೀಸ್​ ತಂಡವನ್ನು ವೃತ್ತಿ ಜೀವನದಲ್ಲಿ 3ನೇ ಬಾರಿಗೆ ಮುನ್ನಡೆಸುತ್ತಿದ್ದಾರೆ. ವಿಲಿಯಮ್ಸನ್​ ಬದಲಿಗೆ ವಿಲ್​ ಯಂಗ್ ತಂಡ ಸೇರಿಕೊಂಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಮೊದಲು ಕೇನ್​ ವಿಲಿಯಮ್ಸನ್​ಗೆ ವಿಶ್ರಾಂತಿ ಅನಿವಾರ್ಯವಾಗಿದೆ. ಅವರಿಲ್ಲದೆ ಟೆಸ್ಟ್​ ಪಂದ್ಯವನ್ನಾಡುವುದು ಊಹಿಸಿಕೊಳ್ಳಲು ಅಸಾಧ್ಯ..

ಕೇನ್ ವಿಲಿಯಮ್ಸನ್​
ಕೇನ್ ವಿಲಿಯಮ್ಸನ್​
author img

By

Published : Jun 9, 2021, 9:07 PM IST

ಬರ್ಮಿಂಗ್​ಹ್ಯಾಮ್ : ಭುಜದ ನೋವಿನ ಕಾರಣ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ನಾಯಕ ಕೇನ್​ ವಿಲಿಯಮ್ಸನ್​ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಭಾರತದ ವಿರುದ್ಧ ಜೂನ್​ 18ರಿಂದ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಮತ್ತೆ ತಂಡಕ್ಕೆ ಹಿಂತಿರುಗಲಿದ್ದಾರೆ ಎಂದು ತಿಳಿದು ಬಂದಿದೆ.

ಕೇನ್ ವಿಲಿಯಮ್ಸನ್​ ಅನುಪಸ್ಥಿತಿಯಲ್ಲಿ ಎಡಗೈ ಬ್ಯಾಟ್ಸ್​ಮನ್ ಟಾಮ್ ಲ್ಯಾಥಮ್​ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ನಾಯಕತ್ವಹಿಸಿಕೊಳ್ಳಲಿದ್ದಾರೆ. ಕೇನ್ ವಿಲಿಯಮ್ಸನ್​ ಕಳೆದ ಮಾರ್ಚ್​ನಿಂದಲೂ ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್​ ಪ್ರಕಟಣೆಯಲ್ಲಿ ತಿಳಿಸಿದೆ.

ಕೇನ್ ವಿಲಿಯಮ್ಸನ್​
ಕೇನ್ ವಿಲಿಯಮ್ಸನ್​

ಲ್ಯಾಥಮ್​ ಕಿವೀಸ್​ ತಂಡವನ್ನು ವೃತ್ತಿ ಜೀವನದಲ್ಲಿ 3ನೇ ಬಾರಿಗೆ ಮುನ್ನಡೆಸುತ್ತಿದ್ದಾರೆ. ವಿಲಿಯಮ್ಸನ್​ ಬದಲಿಗೆ ವಿಲ್​ ಯಂಗ್ ತಂಡ ಸೇರಿಕೊಂಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಮೊದಲು ಕೇನ್​ ವಿಲಿಯಮ್ಸನ್​ಗೆ ವಿಶ್ರಾಂತಿ ಅನಿವಾರ್ಯವಾಗಿದೆ. ಅವರಿಲ್ಲದೆ ಟೆಸ್ಟ್​ ಪಂದ್ಯವನ್ನಾಡುವುದು ಊಹಿಸಿಕೊಳ್ಳಲು ಅಸಾಧ್ಯ. ಆದರೆ, ನಮಗೆ WTC ಫೈನಲ್​ ಮುಖ್ಯವಾಗಿದ್ದು, ಅವರಿಗೆ ಗಾಯದ ಸಮಸ್ಯೆ ಉಲ್ಬಣವಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಹಾಗಾಗಿ, ಈ ಬಿಡುವು ಅವರಿಗೆ ಸಂಪೂರ್ಣ ಫಿಟ್​ ಆಗಲು ಉತ್ತಮ ಅವಕಾಶವಾಗಲಿದೆ ಎಂದು ಟಾಮ್ ಲ್ಯಾಥಮ್​ ಹೇಳಿದ್ದಾರೆ.

ಇದನ್ನು ಓದಿ:'ಪಂತ್​​ ತಮ್ಮಿಷ್ಟಂತೆ ಬ್ಯಾಟಿಂಗ್ ಮಾಡಲು ಅವರಲ್ಲಿರುವ ಆತ್ಮವಿಶ್ವಾಸವೇ ಕಾರಣ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.