ETV Bharat / sports

IND vs WI 5th T20: ಇಂದು ಭಾರತ - ವಿಂಡೀಸ್​ ಫೈನಲ್​ ಕದನ, ಗೆದ್ದವರಿಗೆ ಸಿರೀಸ್​​ - ETV Bharath Kannada news

ಐದು ಪಂದ್ಯಗಳ ವಿಂಡೀಸ್​ ವಿರುದ್ಧದ ಟಿ20 ಸರಣಿ ಸಮಬಲ ಆಗಿದ್ದು, ಇಂದು ನಡೆಯುವ ಐದನೇ ಮ್ಯಾಚ್​ ಫೈನಲ್​ ಪಂದ್ಯವಾಗಿದ್ದು ಸರಣಿ ಗೆದ್ದವರ ಪಾಲಾಗಲಿದೆ.

IND vs WI 5th T20
IND vs WI 5th T20
author img

By

Published : Aug 13, 2023, 1:14 PM IST

ಫ್ಲೋರಿಡಾ (ಅಮೆರಿಕಾ): ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ದಾಖಲೆ ಆರಂಭಿಕ ಜೊತೆಯಾಟದಿಂದ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡಿದೆ. ಇಂದು ಫೈನಲ್​ ಹಣಾಹಣಿ ನಡೆಯಲಿದ್ದು, ಗೆದ್ದವರಿಗೆ ಸಿರೀಸ್​ ಒಲಿಯಲಿದೆ. ಟೆಸ್ಟ್​ ಹಾಗೂ ಏಕದಿನ ಸರಣಿಯನ್ನು ಗೆದ್ದಿರುವ ಟೀಮ್​ ಇಂಡಿಯಾ ಮೂರನೇ ಸರಣಿಯನ್ನು ಗೆಲ್ಲುವ ತವಕದಲ್ಲಿದೆ. ಅಲ್ಲದೇ ಐಪಿಎಲ್​ನ ಸ್ಟಾರ್​ ಬ್ಯಾಟರ್​ಗಳು ಲಯಕ್ಕೆ ಮರಳಿರುವುದು ತಂಡಕ್ಕೆ ಇನ್ನಷ್ಟೂ ಬಲ ಬಂದಂತಾಗಿದೆ.

ಮೊದಲೆರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ವೈಫಲ್ಯವನ್ನು ಕಂಡಿದ್ದ ಭಾರತ 3 ಮತ್ತು ನಾಲ್ಕನೇ ಪಂದ್ಯದಲ್ಲಿ ಉತ್ತಮ ಕಮ್​ಬ್ಯಾಕ್​ ಮಾಡಿತು. ನಿನ್ನೆ ರಾತ್ರಿ ನಡೆದ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​ನಲ್ಲಿಯೇ 5ನೇ ಪಂದ್ಯ ಕೂಡ ನಡೆಯಲಿದ್ದು, ಕುತೂಹಲ ಹೆಚ್ಚಿಸಿದೆ. ಮೊದಲು ಬ್ಯಾಟಿಂಗ್​ ಮಾಡಿದವರಿಗೆ ಉತ್ತಮ ಪಿಚ್​ ಎಂದು ಹೇಳಲಾಗುತ್ತಿದ್ದ ಮೈದಾನದಲ್ಲಿ ಚೇಸಿಂಗ್​ ಮಾಡಿ ಭಾರತ ಗೆಲುವು ದಾಖಲಿಸಿದೆ.

ಭಾರತ ತಂಡ ಮೊದಲ ಮೂರು ಪಂದ್ಯದಲ್ಲಿ ಆರಂಭಿಕ ಜೊತೆಯಾಟದ ಕೊರತೆಯನ್ನು ಎದುರಿಸಿತ್ತು. ನಾಲ್ಕನೇ ಪಂದ್ಯದಲ್ಲಿ ಗಿಲ್​ ಮತ್ತು ಯಶಸ್ವಿ ಜೈಸ್ವಾಲ್​ 165 ರನ್​ ಬೃಹತ್​ ದಾಖಲೆಯ ಜೊತೆಯಾಟ ಮಾಡಿದ್ದಾರೆ. ಹೀಗಾಗಿ ಆರಂಭಿಕರು ಫಾರ್ಮ್​ಗೆ ಮರಳಿದ್ದು, ಭಾರತ ಬ್ಯಾಟಿಂಗ್​ಗೆ ಬಲ ಬಂದಂತಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ತಿಲಕ್​ ವರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ನಿನ್ನೆ 14 ರನ್​ ಇದ್ದಾಗ ಅವರು ಕ್ರಿಸ್​ಗೆ ಬಂದು 7 ರನ್​ ದಾಖಲಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಸೂರ್ಯ ಕುಮಾರ್​ ಯಾದವ್​ ಮತ್ತು ಹಾರ್ದಿಕ್ ಪಾಂಡ್ಯ ಆಡಿದ್ದರು. ಈಗಾಗಿ ಐದು ಬ್ಯಾಟರ್​​ಗಳ ಬಲ ಟೀಮ್​ ಇಂಡಿಯಾಕ್ಕೆ ಇದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಎಲ್ಲರೂ ಅಬ್ಬರಿಸಿದಲ್ಲಿ ಫ್ಲೋರಿಡಾದ ಪಿಚ್​ನಲ್ಲಿ 200ರ ಗಡಿ ಮುಟ್ಟುವುದು ಕಷ್ಟವಲ್ಲ.

ಫ್ಲೋರಿಡಾ ಪಿಚ್ ಬ್ಯಾಟರ್​ಗೆ ಸಹಕಾರಿಯಾಗಿತ್ತು, ಬೌಲಿಂಗ್​ನಲ್ಲಿ ನಿಯಂತ್ರಣ ಸಾಧಿಸಲು ನಾಲ್ಕನೇ ಪಂದ್ಯದಲ್ಲಿ ಬೌಲರ್​ಗಳಿಗೆ ಸಾಧ್ಯವಾಗಲಿಲ್ಲ. ಅದರಲ್ಲೂ ಡೆತ್​ ಓವರ್​ ಮಾತ್ರ ಮಾಡಿದ ಮುಖೇಶ್​ ನಿಯಂತ್ರಣ ಸಾಧಿಸಿದ್ದರು. ಚಹಾಲ್​ ಮತ್ತು ಅಕ್ಷರ್​ ಒಂದೊಂದು ವಿಕೆಟ್​ ಪಡೆದರೂ 35 ಪ್ಲಸ್​ ರನ್​ ಬಿಟ್ಟುಕೊಟ್ಟು ದುಬಾರಿ ಆದರು. ಹಾಗೇ ಅರ್ಷದೀಪ್​ ಸಿಂಗ್​ ಸಹ 3 ವಿಕೆಟ್​ ಪಡೆದು 38 ರನ್​ ಕೊಟ್ಟಿದ್ದಾರೆ. ಈ ಮೂವರು ರನ್​ನಲ್ಲಿ ಕಡಿವಾಣ ಹಾಕಿದಲ್ಲಿ ಎದುರಾಳಿ ಪಡೆ 150 ಮೀರಿ ರನ್​ ಕಲೆ ಹಾಕುವುದು ಕಷ್ಟವಾಗಲಿದೆ.

ಎಂಟನೇ ವಿಕೆಟ್​ ವರೆಗೆ ವಿಂಡೀಸ್​ ಬ್ಯಾಟಿಂಗ್​ ಬಲ: ವೆಸ್ಟ್​ ಇಂಡೀಸ್​ನಲ್ಲಿ 8ನೇ ವಿಕೆಟ್​ ವರೆಗೆ ಬ್ಯಾಟರ್​​ಗಳಿದ್ದಾರೆ. ಪಿಚ್​ಗೆ ಅನುಗುಣವಾಗಿ ನಿನ್ನೆ ಮೂರು ಬದಲಾವಣೆ ಮಾಡಿಕೊಂಡು ಬ್ಯಾಟಿಂಗ್​ ಬಲ ಹೆಚ್ಚಿಸಿಕೊಂಡ ಪೊವೆಲ್​ ಬೌಲಿಂಗ್​ನಲ್ಲಿ ವಿಫಲತೆ ಕಂಡಿದ್ದಾರೆ. ಇಂದಿನ ಫೈನಲ್​ ಪಂದ್ಯಕ್ಕೆ ಬೌಲಿಂಗ್​ ಸ್ಟ್ರಾಂಗ್​ ಮಾಡಲು ಖಂಡಿತ ಚಿಂತಿಸುತ್ತಾರೆ. ಕಳೆದ ಎರಡು ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಪೂರನ್​, ಪೋವೆಲ್​ ವೈಫಲ್ಯ ವಿಂಡೀಸ್​ ಸೋಲಿಗೆ ಕಾರಣವಾಗುತ್ತಿದೆ. ಫಾರ್ಮ್​ನಲ್ಲಿರುವ ಈ ಆಟಗಾರರು ವಿಕೆಟ್​ ಕಾಯ್ದುಕೊಳ್ಳುವ ಅಗತ್ಯ ಇದೆ. ನಿನ್ನೆ ಅಲ್ಜಾರಿ ಜೋಸೆಫ್ ಅವರನ್ನು ಕೈಬಿಟ್ಟು ಪೊವೆಲ್​ ಓಡಿಯನ್ ಸ್ಮಿತ್​ಗೆ ಅವಕಾಶ ನೀಡಿದ್ದರು. ಜೋಸೆಫ್​ ಸರಣಿಯಲ್ಲಿ ಎರಡು ಬಾರಿ ಗಿಲ್​ ವಿಕೆಟ್​ ಪಡೆದಿದ್ದರು.

ಸಂಭಾವ್ಯ ತಂಡ..ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್​ ಕೀಪರ್​), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್

ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್​ ಕೀಪರ್​), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್/ಅಲ್ಜಾರಿ ಜೋಸೆಫ್, ಅಕೇಲ್ ಹೋಸೇನ್, ಒಬೆಡ್ ಮೆಕಾಯ್

ಇದನ್ನೂ ಓದಿ: Fourth T20: ಗಿಲ್​, ಯಶಸ್ವಿ ಬ್ಯಾಟಿಂಗ್​ಗೆ ಮಂಡಿಯೂರಿದ ವಿಂಡೀಸ್​.. ಭಾರತಕ್ಕೆ 9 ವಿಕೆಟ್​ ಜಯ, ಇಂದು ಸರಣಿ ಕ್ಲೈಮ್ಯಾಕ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.