ಪೋರ್ಟ್ ಆಫ್ ಸ್ಪೇನ್(ವೆಸ್ಟ್ ಇಂಡೀಸ್): ಇಂಗ್ಲೆಂಡ್ ವಿರುದ್ಧದ ಸರಣಿ ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಕದನಕ್ಕೆ ಸಜ್ಜಾಗಿದೆ. ಶಿಖರ್ ಧವನ್ ನಾಯಕತ್ವದ ತಂಡ ಇಂದು ಮೊದಲ ಏಕದಿನ ಪಂದ್ಯ ಆಡಲಿದ್ದು, ಕೆರಿಬಿಯನ್ ಬಳಗ ಎದುರಿಸಲು ಎಲ್ಲ ರೀತಿಯಿಂದಲೂ ಸಜ್ಜುಗೊಂಡಿದೆ.
ಅನುಭವಿ ಆಟಗಾರರು ವಿಶ್ರಾಂತಿ ಪಡೆದುಕೊಂಡಿರುವ ಕಾರಣ ಯುವ ಪ್ಲೇಯರ್ಸ್ ಜೊತೆ ಶಿಖರ್ ಧವನ್ ಕಣಕ್ಕಿಳಿಯಲಿದ್ದು, ಟ್ರೆನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಪಂದ್ಯ ನಡೆಯಲಿದೆ.
ಧವನ್ ಜೊತೆ ಇಶಾನ್ ಕಿಶನ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್ ಇದ್ದಾರೆ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ವೆಸ್ಟ್ ಇಂಡೀಸ್ ತಂಡಕ್ಕೆ ನಿಕೂಲಸ್ ಪೋರನ್ ನಾಯಕನಾಗಿದ್ದು, ಅನುಭವಿ ಆಟಗಾರನಾದ ಜೇಸನ್ ಹೋಲ್ಡರ್ ತಂಡದಲ್ಲಿ ಇದ್ದಾರೆ. ಉಭಯ ತಂಡಗಳು ಇಲ್ಲಿಯವರೆಗೆ 137 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 67 ಪಂದ್ಯ ಗೆದ್ದಿದ್ದು, ವೆಸ್ಟ್ ಇಂಡೀಸ್ 63ರಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿರಿ: ಕೋವಿಡ್ ಸೋಂಕಿಗೊಳಗಾದ ರಾಹುಲ್, ಗಾಯಗೊಂಡಿರುವ ಜಡೇಜಾ ವೆಸ್ಟ್ ಇಂಡೀಸ್ ಸರಣಿಯಿಂದ ಔಟ್!?
ಭಾರತ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.