ETV Bharat / sports

ನೋಡಿ: ವೆಸ್ಟ್​ ಇಂಡೀಸ್ ಮಹಿಳಾ​ ಕ್ರಿಕೆಟರ್ ಡಿಯಾಂಡ್ರಾ ಡಾಟಿನ್​ ಅದ್ಭುತ ಕ್ಯಾಚ್‌ - ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದ ವೆಸ್ಟ್​ ಇಂಡೀಸ್​ ಆಟಗಾರ್ತಿ

ಅದ್ಭುತ ಕ್ಯಾಚ್​ ಮೂಲಕ ಪುರುಷರಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ಮಹಿಳಾ ಕ್ರಿಕೆಟಿಗರು ಕೂಡಾ ಸಾಬೀತು ಮಾಡಿದ್ದಾರೆ. ಇಂದು ವೆಸ್ಟ್​ ಇಂಡೀಸ್​ನ ಡಿಯಾಂಡ್ರಾ ಡಾಟಿನ್​ ಇಂಗ್ಲೆಂಡ್​ನ ಲಾರೆನ್​ ಬಾರಿಸಿದ ಚೆಂಡನ್ನು ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿದು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಹುಬ್ಬೇರಿಸಿದರು. ಜೊತೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಭಾರಿ ಸದ್ದು ಮಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

Deandra Dottin
ಡಿಯಾಂಡ್ರಾ ಡಾಟಿನ್
author img

By

Published : Mar 9, 2022, 5:38 PM IST

ಓವಲ್​: ನ್ಯೂಜಿಲ್ಯಾಂಡ್​ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್​ ಟೂರ್ನಿಯಲ್ಲಿ ಕೆಲವು ಅವಿಸ್ಮರಣೀಯ ಘಟನೆಗಳು ದಾಖಲಾಗುತ್ತಿವೆ. ಇಂದು ನಡೆದ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ನ ಡಿಯಾಂಡ್ರಾ ಡಾಟಿನ್​ ಅವರ ಕ್ಯಾಚ್​ ಎಲ್ಲರನ್ನೂ ನಿಬ್ಬೆರಗಾಗಿಸಿದೆ.

ವೇಗಿ ಶ್ಯಾಮಿಲಿಯಾ ಕಾನೆಲ್ ಎಸೆದ ಓವರ್‌ನಲ್ಲಿ ಇಂಗ್ಲೆಂಡ್​ನ ಲಾರೆನ್ ವಿನ್‌ಫೀಲ್ಡ್ ಹಿಲ್, ಮಿಡ್​ಫೀಲ್ಡ್​ ಕವರ್​ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿದಾಗ, ಅಲ್ಲಿಯೇ ಇದ್ದ ವೆಸ್ಟ್​ ಇಂಡೀಸ್​ನ​ ಡಿಯಾಂಡ್ರಾ ಡಾಟಿನ್​ ಹಾರಿ ಒಂದೇ ಕೈಯಲ್ಲಿ ಕ್ಯಾಚ್ ಪಡೆದರು. ಡಾಟಿನ್​ ಅದ್ಭುತ ಕ್ಯಾಚ್​ ಲಾರೆನ್​ ಅಲ್ಲದೇ, ಕ್ರೀಡಾಂಗಣದಲ್ಲಿದ್ದ ಎಲ್ಲರೂ ಅರೆಕ್ಷಣ ಅಚ್ಚರಿಯ ಲೋಕದಲ್ಲಿ ತೇಲಿಸಿತು.

ಗಾಳಿಯಲ್ಲಿ ಹಾರಿ ಬಂದ ಚೆಂಡನ್ನು ಡಿಯಾಂಡ್ರಾ ಡಾಟಿನ್​ ಕ್ಯಾಚ್​ ಆಗಿ ಪರಿವರ್ತಿಸಿ ಇಂಗ್ಲೆಂಡ್​ನ ಲಾರೆನ್​ ವಿನ್​ಫೀಲ್ಡ್​ ಹಿಲ್​ಗೆ ಪೆವಿಲಿಯನ್​ ದಾರಿ ತೋರಿಸಿದರು. ಇನ್ನು ಡಾಟಿನ್​ರ ಈ ಅದ್ಭುತ ಕ್ಯಾಚ್​ ವಿಡಿಯೋವನ್ನು ಐಸಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಡಿಯಾಂಡ್ರಾ ಡಾಟಿಯಾ ಅವರ ಕ್ಯಾಚ್​ ವಿಶ್ವಕಪ್​ನ ಇಂದಿನ ಅದ್ಭುತ' ಎಂದು ಬರೆದುಕೊಂಡಿದೆ.

ಉಭಯ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ ಇಂಗ್ಲೆಂಡ್​ ವನಿತೆಯರನ್ನು 7 ರನ್​ಗಳಿಂದ ಸೋಲಿಸಿದೆ.

ಇದನ್ನೂ ಓದಿ: ರೋಚಕ ಪಂದ್ಯ ಕೈಚೆಲ್ಲಿದ ಇಂಗ್ಲೆಂಡ್​​: ಮಹಿಳಾ ವಿಶ್ವಕಪ್​ನಲ್ಲಿ ವೆಸ್ಟ್​​​ ಇಂಡೀಸ್​ಗೆ 2ನೇ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.