ETV Bharat / sports

ವಾಟರ್​ ಬಾಯ್​ ವಿರಾಟ್​ ಕೊಹ್ಲಿ! ಮೈದಾನದಲ್ಲಿ 'ಚೀಕು' ಫನ್ ರನ್‌​ ವಿಡಿಯೋ ವೈರಲ್​ - ETV Bharath Kannada news

ಬಾಂಗ್ಲಾದೇಶ ವಿರುದ್ಧ ಕೊಲಂಬೊದ ಆರ್.ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ವಾಟರ್​ ಬಾಯ್​ ಆಗಿ ಕಾಣಿಸಿಕೊಂಡರು.

virat kohli turns waterboy fans amused
ವಾಟರ್​ ಬಾಯ್​ ಆದ ವಿರಾಟ್​ ಕೊಹ್ಲಿ
author img

By ETV Bharat Karnataka Team

Published : Sep 15, 2023, 10:05 PM IST

ವಾಟರ್​ ಬಾಯ್​ ಆದ ವಿರಾಟ್​ ಕೊಹ್ಲಿ

ಕೊಲಂಬೊ (ಶ್ರೀಲಂಕಾ): ಕ್ರಿಕೆಟಿಗ ವಿರಾಟ್​ ಕೊಹ್ಲಿ ಮೈದಾನದಲ್ಲಿದ್ದಾಗ ಎಷ್ಟು ಅಗ್ರೆಸಿವ್​ ಆಗಿರ್ತಾರೋ ಅಷ್ಟೇ ಫನ್ ಮ್ಯಾನ್‌​ ಕೂಡಾ. ಮೈದಾನದಲ್ಲಿ ಸಹ ಆಟಗಾರೊಂದಿಗೆ ಡ್ಯಾನ್ಸ್​, ಇತರೆ ತುಂಟಾಟದ ಅವರ ವಿಡಿಯೋಗಳು ಈ ಹಿಂದೆ ವೈರಲ್​ ಆಗಿದ್ದವು. ಇಂದು ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಾಟರ್​ ಬಾಯ್​ ಆಗಿ ಮೈದಾನಕ್ಕೆ ತಮಾಷೆ ಮಾಡುತ್ತಾ ಓಡಿಕೊಂಡು ಬರುತ್ತಿರುವ ವಿಡಿಯೋ ವೈರಲ್ ಆಗಿದೆ.

ಬಾಂಗ್ಲಾ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ಭಾರತ ಪ್ರಮುಖ ಐದು ಆಟಗಾರರಿಗೆ ವಿಶ್ರಾಂತಿ ನೀಡಿದೆ. ಇದರಿಂದ ಏಷ್ಯಾಕಪ್​ಗೆ ಆಯ್ಕೆಯಾಗಿದ್ದ 17 ಜನರ ತಂಡದಲ್ಲಿ ಬೆಂಚ್​ ಕಾದಿದ್ದ ತಿಲಕ್ ವರ್ಮಾ, ಸೂರ್ಯಕುಮಾರ್​ ಯಾದವ್​, ಮೊಹಮ್ಮದ್​ ಶಮಿ, ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್​ ಠಾಕೂರ್​ಗೆ ಅವಕಾಶ ಸಿಕ್ಕಿದೆ. ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಮೊಹಮ್ಮದ್​ ಸಿರಾಜ್​, ಜಸ್ಪ್ರೀತ್​ ಬುಮ್ರಾ ಮತ್ತು ಕುಲ್ದೀಪ್​ ಯಾದವ್​ ಅವರು ಇಂದಿನ ತಂಡದಲ್ಲಿಲ್ಲ.

ಬಾಂಗ್ಲಾದೇಶ ಬ್ಯಾಟಿಂಗ್​​ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ತಂಡದ ವಾಟರ್​ ಬಾಯ್​ ಆಗಿ ಕಾರ್ಯನಿರ್ವಹಿಸಿದರು. ಸಿರಾಜ್​ ಮತ್ತು ಕೊಹ್ಲಿ ನೀರಿನ ಬಾಟಲಿ​ಗಳನ್ನು ಹಿಡಿದುಕೊಂಡು ಮೈದಾನಕ್ಕೆ ಓಡಿಕೊಂಡು ಬರುತ್ತಿರುವ ವಿಡಿಯೋ ಇದಾಗಿದೆ. ಇದರಲ್ಲಿ ವಿರಾಟ್​ ಓಟ ತುಂಬಾ ಫನ್ನಿಯಾಗಿದೆ. ಇದಕ್ಕೆ 'ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ವಾಟರ್​ ಬಾಯ್'​ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿರಾಟ್​ ಈ ಹಿಂದೆ ವಿಶ್ರಾಂತಿ ನೀಡಿದ್ದ ಪಂದ್ಯಗಳಲ್ಲೂ ವಾಟರ್​ ಬಾಯ್​ ಆಗಿ ಕಾರ್ಯ ನಿರ್ವಹಿಸಿದ್ದರು. ತಂಡದಲ್ಲಿ ಪ್ರಮುಖ ಆಟಗಾರನಾಗಿರುವ ವಿರಾಟ್​ಗೆ ತಾನೊಬ್ಬ ಸ್ಟಾರ್​ ಎಂಬ ಅಹಂ ಇಲ್ಲ ಎಂಬುದನ್ನು ನೆಟ್ಟಿಗರು ಗುಣಗಾನ ಮಾಡಿದ್ದಾರೆ. ತಂಡದ ಆಟಕ್ಕೆ ನೀರು ಕೊಟ್ಟು ಸಹಕರಿಸುವವನ ಕೆಲಸವೂ ಅತ್ಯಂತ ಮುಖ್ಯ ಎಂಬುದನ್ನು ವಿರಾಟ್‌ ನಡೆ ತೋರಿಸಿದೆ. ಇದರಿಂದಾಗಿ ಕೆಲಸದಲ್ಲಿ ಯಾವುದನ್ನೂ ಕನಿಷ್ಠ ಮತ್ತು ಶ್ರೇಷ್ಠ ಎಂದು ವಿರಾಟ್​ ಅಳೆಯುವುದಿಲ್ಲ ಎಂಬುದಾಗಿ ಕ್ರಿಕೆಟ್‌ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭ್ಯಾಸಕ್ಕೆ ತೆರಳಿದ ವಿರಾಟ್​: ಭಾರತ ಎರಡನೇ ಇನ್ನಿಂಗ್ಸ್​ ಆರಂಭಿಸುತ್ತಿದ್ದಂತೆ ವಿರಾಟ್​ ಕೊಹ್ಲಿ ಏಷ್ಯಾಕಪ್​ ಫೈನಲ್ಸ್​ಗಾಗಿ ಅಭ್ಯಾಸಕ್ಕೆ ತೆರಳಿದ್ದಾರೆ. ಸೆಪ್ಟೆಂಬರ್​ 17 ರಂದು ಶ್ರೀಲಂಕಾ ವಿರುದ್ಧ ಭಾರತ ಏಷ್ಯಾಕಪ್​ ಫೈನಲ್​ ಆಡಲಿದೆ. ಸೂಪರ್​ ಫೋರ್​ ಹಂತದಲ್ಲಿ ಲಂಕಾ ಸ್ಪಿನ್ನರ್​ಗೆ ವಿಕೆಟ್​ ಕೊಟ್ಟಿದ್ದ ವಿರಾಟ್​ ಫೈನಲ್​​ನಲ್ಲಿ ಕಮ್​ಬ್ಯಾಕ್​ ಮಾಡುವ ಉತ್ಸಾಹದಲ್ಲಿದ್ದಾರೆ. ಭಾನುವಾರ ಮಳೆ ಬಂದಲ್ಲಿ ಸೋಮವಾರವನ್ನು ಮೀಸಲು ದಿನ ಎಂದು ಎಸಿಸಿ ಪ್ರಕಟಿಸಿದೆ.

ಭಾರತಕ್ಕೆ 266 ರನ್​ ಗುರಿ: ಬಾಂಗ್ಲಾದ ಮೊದಲ ಮೂರು ವಿಕೆಟ್​ ಪತನದ ನಂತರ ಮಧ್ಯಮ ಕ್ರಮಾಂಕದಲ್ಲಿ ಕಮ್​ಬ್ಯಾಕ್​ ಮಾಡಿತು. ನಾಯಕ ಶಕೀಬ್​ ಅಲ್​ ಹಸನ್​ ಮತ್ತು ಹೃದಯೋಯ್​ ಅವರ ಅರ್ಧಶತಕದ ಆಟದ ನೆರವಿನಿಂದ ಬಾಂಗ್ಲಾ 50 ಓವರ್​ಗೆ 8 ವಿಕೆಟ್​ ನಷ್ಟಕ್ಕೆ 265 ರನ್ ಗಳಿಸಿದೆ. ಈ ರನ್‌ ಗುರಿಯನ್ನು ಭಾರತ ಚೇಸ್‌ ಮಾಡುತ್ತಿದೆ. ಸದ್ಯ ಕ್ರೀಸ್​ನಲ್ಲಿ ಆರಂಭಿಕ ಶುಭ್‌ಮನ್​ ಗಿಲ್​ ಮತ್ತು ಅಕ್ಸರ್‌ ಪಟೇಲ್‌​ ಆಡುತ್ತಿದ್ದು ಭಾರತ 6 ವಿಕೆಟ್‌ ನಷ್ಟಕ್ಕೆ 183 ರನ್ ಗಳಿಸಿದೆ.

ಇದನ್ನೂ ಓದಿ: ಏಷ್ಯಾಕಪ್‌ನಲ್ಲಿಂದು ಭಾರತ-ಬಾಂಗ್ಲಾದೇಶ ಫೈಟ್​: ಟಾಸ್‌ ಗೆದ್ದ ಭಾರತ ಬೌಲಿಂಗ್, ತಿಲಕ್​ ವರ್ಮಾ ಪಾದಾರ್ಪಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.