ಕ್ವೀನ್ಸ್ಲ್ಯಾಂಡ್ : ಭಾರತ ಮಹಿಳಾ ತಂಡದ ವೇಗದ ಬೌಲರ್ ಶಿಖಾ ಪಾಂಡೆ ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಲಿಸಾ ಹೀಲಿ ಅವರನ್ನು ತನ್ನ ಅದ್ಭುತ ಇನ್ಸ್ವಿಂಗ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಎಸೆತ ಇದೀಗ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ಇದು ಶತಮಾನದ ಎಸೆತ ಎಂದು ಶಿಖಾಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
ಶನಿವಾರ ನಡೆದ 2ನೇ ಟಿ20 ಪಂದ್ಯದ ವೇಳೆ ಶಿಖಾ ಪಾಂಡೆ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲಿ ಹೀಲಿ ಬೌಂಡರಿ ಬಾರಿಸಿದರು. ಆದರೆ, ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ಶಿಖಾ 2ನೇ ಎಸೆತದಲ್ಲಿ ನಂಬಲಾಸಾಧ್ಯವಾದ ರೀತಿ ಇನ್ಸ್ವಿಂಗ್ ಮಾಡಿದರು. ಚೆಂಡು ಹೀಲಿಯವರನ್ನ ತಪ್ಪಿಸಿ ಬೆಲ್ಸ್ ಹಾರಿಸಿತು.
-
The BEST thing to see today.
— ViSHaL 🇮🇳 (@vishal_z3) October 9, 2021 " class="align-text-top noRightClick twitterSection" data="
A peach from @shikhashauny 💪
Take a bow 👏@cricketcomau @BCCIWomen #ShikhaPandey#INDvsAUS#AUSvsIND#INDWvAUSW https://t.co/0wYdVBAnD4
">The BEST thing to see today.
— ViSHaL 🇮🇳 (@vishal_z3) October 9, 2021
A peach from @shikhashauny 💪
Take a bow 👏@cricketcomau @BCCIWomen #ShikhaPandey#INDvsAUS#AUSvsIND#INDWvAUSW https://t.co/0wYdVBAnD4The BEST thing to see today.
— ViSHaL 🇮🇳 (@vishal_z3) October 9, 2021
A peach from @shikhashauny 💪
Take a bow 👏@cricketcomau @BCCIWomen #ShikhaPandey#INDvsAUS#AUSvsIND#INDWvAUSW https://t.co/0wYdVBAnD4
ಶಿಖಾ ಪಾಂಡೆಯ ಈ ಎಸೆತವನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ವಾಸೀಮ್ ಜಾಫರ್ ಮಹಿಳಾ ಕ್ರಿಕೆಟ್ನಲ್ಲಿನ 'ಶತಮಾನದ ಎಸೆತ' ಎಂದು ಕರೆದಿದ್ದಾರೆ. ಇವರಲ್ಲದೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಪಾಂಡೆ ಅವರ ಅದ್ಭುತ ಬೌಲಿಂಗ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ದೇಶಾದ್ಯಂತ ಟ್ರೆಂಡ್ ಆಗಿದೆ.
ದುರಾದೃಷ್ಟವಶಾತ್ ಭಾರತ ಬೌಲರ್ಗಳ ಸಾಹಸದ ಹೊರೆತಾಗಿಯೂ ಈ ಪಂದ್ಯದಲ್ಲಿ ಸೋಲು ಕಂಡಿತು. ಕೌರ್ ಬಳಗ ನೀಡಿದ್ದ 119 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ಮಹಿಳಾ ತಂಡ 19.1 ಓವರ್ಗಳಲ್ಲಿ ತಲುಪಿತು. ತಹಿಲಾ ಮೆಕ್ಗ್ರಾತ್ ಅಜೇಯ 42 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಇದನ್ನು ಓದಿ:ಮಾರಕ ಬೌಲರ್ಗೆ ಟೀಂ ಇಂಡಿಯಾ ಮಣೆ.. T-20 ವಿಶ್ವಕಪ್ ನೆಟ್ ಬೌಲರ್ ಆಗಿ ಉಮ್ರಾನ್ ಮಲಿಕ್ ಆಯ್ಕೆ