ETV Bharat / sports

ಭಾರತ ತಂಡಕ್ಕೆ ಕಾಡಿದ ಗಾಯದ ಸಮಸ್ಯೆ.. ವಿಶ್ವಕಪ್​ ತಂಡದ ಆಟಗಾರ ಏಷ್ಯಾಕಪ್​ನಿಂದ ಹೊರಕ್ಕೆ?

ಏಷ್ಯಕಪ್​ ಫೈನಲ್​ಗೂ ಮುನ್ನ ಭಾರತ ತಂಡ ಆಲ್​ರೌಂಡರ್ ಅಕ್ಷರ್​ ಪಟೇಲ್​ ಗಾಯಕ್ಕೆ ತುತ್ತಾಗಿದ್ದು, ಅವರ ಬದಲಾಗಿ ವಾಷಿಂಗ್ಟನ್ ಸುಂದರ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

Washington Sundar - Axar Patel
Washington Sundar - Axar Patel
author img

By ETV Bharat Karnataka Team

Published : Sep 16, 2023, 4:17 PM IST

ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್​ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಫೈನಲ್​ನಲ್ಲಿ ಸ್ಥಾನ ಪಡೆದಿದೆ. ಈ ವೇಳೆ ತಂಡದ ಪ್ರಮುಖ ಆಲ್​​ರೌಂಡರ್​ ಗಾಯಕ್ಕೆ ತುತ್ತಾಗಿದ್ದು, ಅಂತಿಮ ಹಾಣಹಣಿಯಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ವೈದ್ಯಕೀಯ ವರದಿಗೂ ಮುನ್ನವೇ ಪರ್ಯಾಯ ವ್ಯವಸ್ಥೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತಿಸಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯನ್ನು ಬಿಸಿಸಿಐ ಹಂಚಿಕೊಂಡಿಲ್ಲ.

ನಾಳೆ (ಭಾನುವಾರ) ಶ್ರೀಲಂಕಾ ವಿರುದ್ಧ ಭಾರತ ಏಷ್ಯಾಕಪ್ ಫೈನಲ್​ ಆಡಲಿದೆ. ನಿನ್ನೆ ಬಾಂಗ್ಲಾದೇಶದೆ ವಿರುದ್ಧದ ಪಂದ್ಯದಲ್ಲಿ ಅಕ್ಷರ್​ ಪಟೇಲ್​ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಫೈನಲ್​ ಪಂದ್ಯಕ್ಕೆ ಬ್ಯಾಕ್​ಅಪ್​ ಆಟಗಾರನಾಗಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಕರೆಯಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದ ವಿರುದ್ಧ ಭಾರತದ ಅಂತಿಮ ಸೂಪರ್ ಫೋರ್ ಏಷ್ಯಾಕಪ್ ಹಣಾಹಣಿಯಲ್ಲಿ, ಬ್ಯಾಟಿಂಗ್ ಮಾಡುವಾಗ ಅಕ್ಷರ್ ಅವರ ಕೈಗೆ ಪೆಟ್ಟು ಬಿದ್ದಿತು. ಆದಾಗ್ಯೂ, ಫೈನಲ್‌ಗೆ ಅಕ್ಷರ್ ಸ್ಥಾನಮಾನದ ಬಗ್ಗೆ ತಂಡದ ಆಡಳಿತವು ಇನ್ನೂ ಅಂತಿಮ ಕರೆಯನ್ನು ತೆಗೆದುಕೊಂಡಿಲ್ಲ. ಅಕ್ಷರ್ ಇದುವರೆಗೆ ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿದ್ದಾರೆ, 34.00 ಸರಾಸರಿಯಲ್ಲಿ 68 ರನ್ ಗಳಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ 42 ರನ್ ಗಳಿಸಿದರಾದರೂ, ಇದು 266 ರನ್‌ಗಳ ರನ್ ಗುರಿ ಮುಟ್ಟುವಲ್ಲಿ ಸಹಕಾರಿ ಆಗಲಿಲ್ಲ. ಬೌಲಿಂಗ್​ನಲ್ಲಿ ನಿನ್ನೆ ಒಂದು ವಿಕೆಟ್ ಕೂಡ ಪಡೆದಿದ್ದಾರೆ.

ಮಾಹಿತಿಯ ಪ್ರಕಾರ, ಪಂದ್ಯದಲ್ಲಿ ಬ್ಯಾಟಿಂಗ್​ ಮಾಡುವಾಗ ಅವರ ಮೊಣಕೈಗೆ ಬಾಲ್​ ಜೋರಾಗಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಇಂದು (ಶನಿವಾರ) ಅವರಿಗೆ ಸ್ಕ್ಯಾನ್ ಮಾಡಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಭಾನುವಾರದ ಫೈನಲ್‌ಗೆ ಅವರು ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಪ್ರಕಟಿತ ವಿಶ್ವಕಪ್​ ತಂಡದಲ್ಲಿ ಅಕ್ಷರ್​ ಸ್ಥಾನ ಪಡೆದುಕೊಂಡಿದ್ದು, ಈ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ವಿಶ್ವಕಪ್​ಗೂ ಮುನ್ನ ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅಕ್ಷರ್​ ಸ್ಥಾನ ಪಡೆಯಲಿದ್ದಾರೆ.

ಪ್ರಸ್ತುತ ಮಾಹಿತಿಯ ಪ್ರಕಾರ ವಾಷಿಂಗ್ಟನ್ ಸುಂದರ್ ಭಾರತದ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದು, ಪ್ರಸ್ತುತ ಬೆಂಗಳೂರಿನಿಂದ ಲಂಕಾಕ್ಕೆ ಪ್ರಯಾಣ ಬೆಳಸಿದ್ದಾರೆ. ಫೈನಲ್‌ ಮುಗಿದ ನಂತರ ಏಷ್ಯನ್‌ ಗೇಮ್ಸ್‌ ಶಿಬಿರಕ್ಕೆ ಮರು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಏಷ್ಯನ್​ ಗೇಮ್ಸ್​ ಪಂದ್ಯಗಳು ನಡೆಯಲಿದೆ.

ಸುಂದರ್ ಎಡಗೈ ಬ್ಯಾಟಿಂಗ್ ಮತ್ತು ಬಲಗೈ ಆಫ್-ಬ್ರೇಕ್‌ ಬೌಲರ್​ ಆಗಿ ತಂಡಕ್ಕೆ ಕೊಡುಗೆ ನೀಡಲಿದ್ದಾರೆ. ಅವರು ಭಾರತಕ್ಕಾಗಿ 16 ಏಕದಿನ ಪಂದ್ಯಗಳನನ್ನು ಆಡಿದ್ದು, 16 ವಿಕೆಟ್​​ಗಳನ್ನು ಪಡೆದಿದ್ದಾರೆ ಮತ್ತು ಒಂಬತ್ತು ಇನ್ನಿಂಗ್ಸ್​​ ಒಂದು ಅರ್ಧಶತಕದೊಂದಿಗೆ 233 ರನ್​ಗಳಿಸಿದ್ದಾರೆ.

ಲಂಕಾಕ್ಕೆ ತೀಕ್ಷ್ಣ ಅಲಭ್ಯ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷ್ಣ ಬಲ ಮಂಡಿರಜ್ಜು ಸೆಳೆತಕ್ಕೆ ಒಳಗಾಗಿದ್ದಾರೆ. ಸ್ಕ್ಯಾನ್​ ವರದಿಯ ನಂತರ ಅವರ ಅಲಭ್ಯತೆ ಬಗ್ಗೆ ಲಂಕಾ ಕ್ರಿಕೆಟ್​ ಮಂಡಳಿ ತಿಳಿಸಿತ್ತು. ತೀಕ್ಷ್ಣ ಬದಲಾಗಿ ಸಹನ್ ಅರಾಚ್ಚಿಗೆ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ಇದನ್ನೂ ಓದಿ: Diamond League 2023 Final: ಡೈಮಂಡ್​ ಮೇಲೆ ಮತ್ತೆ ಕಣ್ಣಿಟ್ಟ ನೀರಜ್ ಚೋಪ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.