ETV Bharat / sports

ಆಸ್ಟ್ರೇಲಿಯಾ ವಿಶ್ವಕಪ್​ ಹೀರೋ ಡೇವಿಡ್​ ವಾರ್ನರ್​ಗೆ 'ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ' - ಡೇವಿಡ್ ವಾರ್ನರ್​ಗೆ ವರ್ಷದ ಆಟಗಾರ ಪ್ರಶಸ್ತಿ

ಡೇವಿಡ್​ ವಾರ್ನರ್​ ಚೊಚ್ಚಲ ಬಾರಿಗೆ ಆಸ್ಟ್ರೇಲಿಯಾದ ಗೆದ್ದ ಟಿ-20 ವಿಶ್ವಕಪ್​​ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅವರು ಸೆಮಿಫೈನಲ್​​ನಲ್ಲಿ ಪಾಕಿಸ್ತಾನದ ವಿರುದ್ಧ 49 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್​ನಲ್ಲಿ 53 ರನ್​ಗಳಿಸಿದ್ದರು. ನವೆಂಬರ್​​ನ ತಿಂಗಳಲ್ಲಿ ಆಡಿದ 4 ಟಿ -20 ಪಂದ್ಯಗಳಿಂದ 209 ರನ್​ಗಳಿಸಿದ್ದರು. ಅವರು ಸೂಪರ್ 12ನಲ್ಲೂ ವೆಸ್ಟ್​ ಇಂಡೀಸ್​ ವಿರುದ್ಧ ಅಜೇಯ 89 ರನ್​ಗಳಿಸಿದ್ದರು.

Warner named ICC men's player of month for November
ಡೇವಿಡ್ ವಾರ್ನರ್​ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ
author img

By

Published : Dec 13, 2021, 5:41 PM IST

ದುಬೈ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್​ ಡೇವಿಡ್ ವಾರ್ನರ್ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡದ ಆಲ್​ರೌಂಡರ್​ ಹೇಲಿ ಮ್ಯಾಥ್ಯೂಸ್​ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ನವೆಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡೇವಿಡ್​ ವಾರ್ನರ್​ ಚೊಚ್ಚಲ ಬಾರಿಗೆ ಆಸ್ಟ್ರೇಲಿಯಾದ ಗೆದ್ದ ಟಿ - 20 ವಿಶ್ವಕಪ್​​ನಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅವರು ಸೆಮಿಫೈನಲ್​​ನಲ್ಲಿ ಪಾಕಿಸ್ತಾನದ ವಿರುದ್ಧ 49 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್​ನಲ್ಲಿ 53 ರನ್​ಗಳಿಸಿದ್ದರು. ನವೆಂಬರ್​​ನ ತಿಂಗಳಲ್ಲಿ ಆಡಿದ 4 ಟಿ -20 ಪಂದ್ಯಗಳಿಂದ 209 ರನ್​ಗಳಿಸಿದ್ದರು. ಅವರು ಸೂಪರ್ 12ನಲ್ಲೂ ವೆಸ್ಟ್​ ಇಂಡೀಸ್​ ವಿರುದ್ಧ ಅಜೇಯ 89 ರನ್​ಗಳಿಸಿದ್ದರು.

ವಾರ್ನರ್ ಪ್ರತಿಸ್ಪರ್ಧಿಗಳಾಗಿದ್ದ ನ್ಯೂಜಿಲ್ಯಾಂಡ್​ನ ಟಿಮ್ ಸೌಥಿ ಮತ್ತು ಪಾಕಿಸ್ತಾನದ ಅಬಿದ್ ಅಲಿಯನ್ನು ಹಿಂದಿಕ್ಕಿ ಈ ಪ್ರಶಸ್ತಿಗೆ ಭಾಜನರಾದರು. ಮಹಿಳೆಯರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ಬಾಂಗ್ಲಾದೇಶದ ನಹಿದಾ (4 ಏಕದಿನ ಪಂದ್ಯಗಳಿಂದ 13 ವಿಕೆಟ್) ಪಾಕಿಸ್ತಾನದ ಅನಮ್​ (13 ವಿಕೆಟ್) ​ಅವರನ್ನು ಹಿಂದಿಕ್ಕಿ ವಿಂಡೀಸ್​ನ ಮ್ಯಾಥ್ಯೂಸ್ ನವೆಂಬರ್ ತಿಂಗಳ ಪ್ರಶಸ್ತಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಅವರು ಈ ಸಮಯದಲ್ಲಿ​ 141 ರನ್​​ ಮತ್ತು 9 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ:ಅಮೋಘ ಫಾರ್ಮ್​ನಲ್ಲಿರುವ ಈತನನ್ನ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಿ: ವೆಂಗಸರ್ಕಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.