ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ತಾವೂ ಐಪಿಎಲ್ನಲ್ಲಿ ಕೆರಿಯರ್ ಆರಂಭಿಸಿದ್ದ ಡೆಲ್ಲಿ ಫ್ರಾಂಚೈಸಿಗೆ 9 ವರ್ಷಗಳ ನಂತರ ಮರಳಿದ್ದಾರೆ. 2009ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದ್ದ ಆಸೀಸ್ ಬ್ಯಾಟರ್ ಅಂದು 14.5 ಲಕ್ಷ ರೂ ಪಡೆದಿದ್ದರು.
2011ರ ಮೆಗಾ ಹರಾಜಿನಲ್ಲಿ 3.4 ಕೋಟಿ ರೂಗೆ ಡೆಲ್ಲಿ ತಂಡ ಅವರನ್ನು ಮತ್ತೆ ಖರೀದಿಸಿತ್ತು. 2014ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ರನ್ನು 5.5 ಕೋಟಿ ರೂ ನೀಡಿ ಖರೀಸಿದ್ದಲ್ಲದೇ, ಮಧ್ಯಂತರದಲ್ಲಿ ಅವರನ್ನೇ ನಾಯಕನ್ನಾಗಿ ನೇಮಿಸಿತ್ತು. ನಂತರ 2018ರ ಆವೃತ್ತಿಯನ್ನು ಹೊರತುಪಡಿಸಿ 2021ರವರೆಗೂ ಅವರು ತಂಡದಲ್ಲಿ ಮುಂದುವರೆದಿದ್ದರು.
2021ರ ಆವೃತ್ತಿಯ ದ್ವಿತೀಯಾರ್ಧದದಲ್ಲಿ ಅವರನ್ನು ಸನ್ರೈಸರ್ಸ್ ಹೈದರಾಬಾದ್ ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸ್ ಅವರನ್ನು ನಾಯಕನನ್ನಾಗಿ ನೇಮಿಸಿತ್ತು. ಅಲ್ಲದೇ ಅವರನ್ನು ಕೊನೆಯ ಲೀಗ್ ಪಂದ್ಯಗಳಲ್ಲಿ ಅವಕಾಶವನ್ನು ನೀಡದೆ ಕಡೆಗಣಿಸಿ ಟೀಕೆಗೂ ಗುರಿಯಾಗಿತ್ತು.
ಕಳೆದ 3 ಆವೃತ್ತಿಗಳಲ್ಲಿ 12.5 ಕೋಟಿರೂ ಪಡೆದಿದ್ದ ಅವರು ಈ ಬಾರಿ ಕೇವಲ 6.25 ಕೋಟಿ ರೂ ಪಡೆದುಕೊಂಡಡಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಅವರು ಯುವ ಆರಂಭಿಕ ಪೃಥ್ವಿ ಶಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ:ಐಪಿಎಲ್ 2022 ಹರಾಜು ಪ್ರಕ್ರಿಯೆ: ಬೆಂಗಳೂರಿನಲ್ಲಿ 600 ಆಟಗಾರರ ಅದೃಷ್ಟ ಪರೀಕ್ಷೆ