ETV Bharat / sports

ಕೊಹ್ಲಿ ಟಿ20 ಕ್ರಿಕೆಟ್​ಗೆ ತಕ್ಕಂತೆ ಪವರ್​ಫುಲ್ ಶಾಟ್​ ಆಡುವ ಪವರ್​ ಕಳ್ಕೊಂಡಿದ್ದಾರೆ : ಸಂಜಯ್ ಮಂಜ್ರೇಕರ್​

2019ರಿಂದ ವಿರಾಟ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕ ಸಿಡಿಸಿಲ್ಲ. ಆದರೆ, 15ನೇ ಆವೃತ್ತಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ತಂಡದ ಜಯಕ್ಕೆ ನೆರವಾಗುವಂತಹ ಸ್ಕೋರ್​ ಗಳಿಸಿದ್ದಾರೆ. ಮಾಜಿ ಕ್ರಿಕೆಟಿಗನ ಪ್ರಕಾರ, ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದವರು. ಆದರೆ, ಅದನ್ನ ಅವರು ಇತ್ತೀಚಿನ ದಿನಗಳಲ್ಲಿ ತೋರುತ್ತಿಲ್ಲ ಎಂದು ಭಾವಿಸಿದ್ದಾರೆ..

Virat Kohli
ವಿರಾಟ್ ಕೊಹ್ಲಿ
author img

By

Published : Apr 12, 2022, 5:22 PM IST

ಮುಂಬೈ : ನಾಯಕತ್ವ ಮುಕ್ತ ವಿರಾಟ್​ ಕೊಹ್ಲಿ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಬ್ಯಾಟಿಂಗ್ ತೋರ್ಪಡಿಸಿಲ್ಲ. ಅವರು ಆರ್​​ಸಿಬಿಗಾಗಿ ಮೌಲ್ಯಯುತ ರನ್​ಗಳಿಸುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​ ಪವರ್​ಫುಲ್ ಶಾಟ್​ ಹೊಡೆಯುವ ಸಾಮರ್ಥ್ಯವನ್ನು ಇತ್ತೀಚಿನ ದಿನಗಳಲ್ಲಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್​ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್​ ಕೊಹ್ಲಿ ಕ್ರಿಕೆಟ್​ನ ಮೂರು ಮಾದರಿಯಲ್ಲಿ ಸಹಸ್ರಾರು ರನ್​ಗಳಿಸಿ ರನ್​ಮಷಿನ್​ ಎಂದು ಖ್ಯಾತಿ ಪಡೆದಿದ್ದ ಬ್ಯಾಟರ್​. ಪ್ರಸ್ತುತ ನಾಯಕತ್ವ ಮುಕ್ತರಾಗಿದ್ದು, ಸಂಪೂರ್ಣ ಬ್ಯಾಟರ್​ ಆಗಿ ಕಣಕ್ಕಿಳಿದಿದ್ದಾರೆ. ನಾಯಕತ್ವವನ್ನು ತ್ಯಜಿಸಿರುವ ಅವರಿಂದ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರು ಮತ್ತೆ ಕೊಹ್ಲಿಯ ವೈಭವಯುತ ಬ್ಯಾಟಿಂಗ್ ಮೂಡಿ ಬರಲು ಇದು ಸರಿಯಾದ ಸಮಯ ಎಂದು ಉತ್ಸಾಹದಿಂದ ಕಾಯುತ್ತಿದ್ದಾರೆ. ಆದರೆ, ಸಂಜಯ್ ಮಂಜ್ರೇಕರ್ ಅವರು, ಕೊಹ್ಲಿಯ ಬಳಿ ಪವರ್​ ಗೇಮ್ ಆಡುವ ಸಾಮರ್ಥ್ಯ ಹಿಂದಿನಂತಿಲ್ಲ ಎಂದಿದ್ದಾರೆ.

2019ರಿಂದ ವಿರಾಟ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕ ಸಿಡಿಸಿಲ್ಲ. ಆದರೆ, 15ನೇ ಆವೃತ್ತಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ತಂಡದ ಜಯಕ್ಕೆ ನೆರವಾಗುವಂತಹ ಸ್ಕೋರ್​ ಗಳಿಸಿದ್ದಾರೆ. ಮಾಜಿ ಕ್ರಿಕೆಟಿಗನ ಪ್ರಕಾರ, ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದವರು. ಆದರೆ, ಅದನ್ನ ಅವರು ಇತ್ತೀಚಿನ ದಿನಗಳಲ್ಲಿ ತೋರುತ್ತಿಲ್ಲ ಎಂದು ಭಾವಿಸಿದ್ದಾರೆ.

ಇಎಸ್​ಪಿಎಸ್​ ಕ್ರಿಕ್​ಇನ್ಫೋದಲ್ಲಿ ಮಾತನಾಡಿದ ಅವರು, "ಇತ್ತೀಚಿನ ದಿನಗಳಲ್ಲಿ ವಿರಾಟ್​ ಕೊಹ್ಲಿ ಕೇವಲ ಬೌಂಡರಿ ಗೆರೆ ದಾಟಿಸುತ್ತಿದ್ದಾರೆ ಮತ್ತು ಒಂದಷ್ಟು ರನ್​ಗಳಿಸುತ್ತಿದ್ದಾರೆ. ಆದರೆ, ನಾನು ನೋಡಿದ ಹಾಗೆ, ಅವರು ಸಿಡಿಸುವ ಸಿಕ್ಸರ್​ಗಳು ಬೌಂಡರಿ ಗೆರೆ ದಾಟಿ ಎಷ್ಟು ದೂರ ಹೋಗುತ್ತಿವೆ? ವೀಕ್ಷಕರ ಸ್ಟ್ಯಾಂಡ್​ ಬಳಿ ಅಥವಾ ಎರಡನೇ ಹಂತವನ್ನು ದಾಟಬಹುದೇ? ಎನ್ನವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಿರುತ್ತೇನೆ. ಅವರು ಕೇವಲ ಬೌಂಡರಿ ಗೆರೆಯನ್ನು ಮಾತ್ರ ದಾಟಿಸುತ್ತಿದ್ದಾರೆ. ಹಾಗಾಗಿ, ವಿರಾಟ್​ ಕೊಹ್ಲಿಯಲ್ಲಿ ಪವರ್​ ಫುಲ್ ಶಾಟ್​ ಹೊಡೆಯುವ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗಿದೆ. ನಾನು ಇದನ್ನೇ ಕಳೆದ ವರ್ಷದಿಂದ ಆಗಾಗ್ಗೆ ಹೇಳುತ್ತಿದ್ದೇನೆ" ಎಂದು ಮಂಜ್ರೇಕರ್ ತಿಳಿಸಿದ್ದಾರೆ.

5 ವರ್ಷಗಳ ಹಿಂದೆ ವಿರಾಟ್​ ಕೊಹ್ಲಿ ದೊಡ್ಡ ಸಿಕ್ಸರ್​ಗಳನ್ನು ಬಾರಿಸುತ್ತಿದ್ದರು. ನಾನು ಅದರ ಕಡೆಗೆ ಎದುರು ನೋಡುತ್ತಿದ್ದೇನೆ ಹೊರತು, 50 ಅಥವಾ 60 ರನ್​ಗಳಿಸುವುದರ ಕಡೆಗಲ್ಲ. ಯಾವಾಗ ಅವರು ಹಿಂದಿನಂತೆ ಸಿಕ್ಸರ್​ಗಳನ್ನು ಸಿಡಿಸಲು ಆರಂಭಿಸುತ್ತಾರೋ ಅಂದು ಅವರು ಟಿ20 ಕ್ರಿಕೆಟ್​ಗೆ ಮರಳಿದಂತೆ ಎಂದು ಮಂಜ್ರೇಕರ್​ ಹೇಳಿದ್ದಾರೆ. ವಿರಾಟ್​ 2022ರಲ್ಲಿ 4 ಪಂದ್ಯಗಳಿಂದ 106 ರನ್​ಗಳಿಸಿದ್ದಾರೆ. ಆರ್​ಸಿಬಿ ಬ್ಯಾಟಿಂಗ್ ಬಳಗವನ್ನು ಮುನ್ನಡೆಸುವ ಅವರು ಇಂದು ಸಿಎಸ್​ಕೆ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಪೃಥ್ವಿ ಶಾ ನೋಡಿದ್ರೇ ನನ್ನ ವೃತ್ತಿ ಜೀವನವೇ ನನ್ಗೆ ನೆನ್ಪಾಗುತ್ತೆ.. ಆತ ಭಾರತಕ್ಕಾಗಿ 100 ಟೆಸ್ಟ್​ ಪಂದ್ಯ ಆಡಬಲ್ಲ: ಪಾಂಟಿಂಗ್ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.