ETV Bharat / sports

ಅಸಾಧ್ಯ ಅನ್ನೋ ಮಾತೇ ಇಲ್ಲ..! ಪಾಕ್​ ವಿರುದ್ಧ ಪಂದ್ಯ ಗೆಲ್ಲಿಸಿದ್ದ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ - ವಿರಾಟ್ ಕೊಹ್ಲಿ ಪ್ರಮುಖ ದಾಖಲೆಗಳು

2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಕೊಹ್ಲಿ ಅಲ್ಲಿಂದ ನಂತರ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಅಸಾಧ್ಯ ಎಂದೇ ಭಾವಿಸಿದ್ದ ಅದೆಷ್ಟೋ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಇತ್ತಿಚೇಗೆ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಬ್ಬರಿಸಿ ತಂಡಕ್ಕೆ ಗೆಲುವು ಧಕ್ಕಿಸಿಕೊಟ್ಟಿದ್ದರು ಕೊಹ್ಲಿ. ವಿರಾಟ್​ಗೆ ಇಂದು ಜನ್ಮದಿನದ ಸಂಭ್ರಮ.

virat kohli turns 34  his major achievements  Former Indian cricket team captain Virat Birthday  Virat Kohli Birthday celebration  Virat Kohli Birthday 2022  ಅಸಾಧ್ಯ ಅನ್ನೋ ಮಾತೇ ಇಲ್ಲ  ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ  2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಕೊಹ್ಲಿ  ವಿರಾಟ್​ಗೆ ಇಂದು ಜನ್ಮದಿನದ ಸಂಭ್ರಮ  ಭಾರತೀಯ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ  ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇಂದು 34ನೇ ವರ್ಷ  ಹಿರಿಯ ಆಟಗಾರ ಧೋನಿ ಜೊತೆ ಕೊಹ್ಲಿ  ವಿರಾಟ್ ಕೊಹ್ಲಿ ಪ್ರಮುಖ ದಾಖಲೆಗಳು
ಪಾಕ್​ ವಿರುದ್ಧ ಪಂದ್ಯ ಗೆಲ್ಲಿಸಿದ್ದ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ
author img

By

Published : Nov 5, 2022, 8:05 AM IST

ನವದೆಹಲಿ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇಂದು 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿಶ್ವಶ್ರೇಷ್ಠ ನಾಯಕ ಎಂಎಸ್ ಧೋನಿಯಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದರು. ತಮ್ಮ ಆಕ್ರಮಣಕಾರಿ ಮನೋಭಾವದಿಂದ ತಂಡವನ್ನು ಗೆಲುವಿನ ಟ್ರ್ಯಾಕ್​​ನಲ್ಲಿ ಕೊಂಡೊಯ್ದಿದ್ದರು. ಈಗ ಭಾರತ ತಂಡಕ್ಕೆ ರೋಹಿತ್​ ಶರ್ಮಾ ನಾಯಕರಾಗಿ ಮುಂದುವರಿದಿದ್ದಾರೆ. ಇಂದು ವಿರಾಟ್​ ಜನ್ಮದಿನ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

virat kohli turns 34  his major achievements  Former Indian cricket team captain Virat Birthday  Virat Kohli Birthday celebration  Virat Kohli Birthday 2022  ಅಸಾಧ್ಯ ಅನ್ನೋ ಮಾತೇ ಇಲ್ಲ  ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ  2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಕೊಹ್ಲಿ  ವಿರಾಟ್​ಗೆ ಇಂದು ಜನ್ಮದಿನದ ಸಂಭ್ರಮ  ಭಾರತೀಯ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ  ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇಂದು 34ನೇ ವರ್ಷ  ಹಿರಿಯ ಆಟಗಾರ ಧೋನಿ ಜೊತೆ ಕೊಹ್ಲಿ  ವಿರಾಟ್ ಕೊಹ್ಲಿ ಪ್ರಮುಖ ದಾಖಲೆಗಳು
ಪಾಕ್​ ವಿರುದ್ಧ ಪಂದ್ಯ ಗೆಲ್ಲಿಸಿದ್ದ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ

U-19 ತಂಡದ ನಾಯಕನಾಗಿ ತಂಡವನ್ನು ಗೆಲ್ಲಿಸಿದ್ದ ಕೊಹ್ಲಿ ಅದೇ ಆಧಾರದಲ್ಲಿ ರಾಷ್ಟ್ರೀಯ ತಂಡದ ಕದತಟ್ಟಿದ್ದರು. 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಕೊಹ್ಲಿ ಅಲ್ಲಿಂದ ನಂತರ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಅಸಾಧ್ಯ ಎಂದೇ ಭಾವಿಸಿದ್ದ ಅದೆಷ್ಟೋ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಇತ್ತಿಚೇಗೆ ಪಾಕ್​ ವಿರುದ್ಧ ಅಬ್ಬರಿಸಿದ್ದ ವಿರಾಟ್​ ಪಂದ್ಯಕ್ಕೆ ಗೆಲುವು ಒದಗಿಸಲು ಶ್ರಮವಹಿಸಿದ್ದರು.

ಹಿರಿಯ ಆಟಗಾರ ಧೋನಿ ಜೊತೆ ಕೊಹ್ಲಿ: 2008 ಆಗಸ್ಟ್​​ನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ತಂಡ ಸೇರಿದ್ದ ಕೊಹ್ಲಿ ದೊಡ್ಡ ಜವಾಬ್ದಾರಿಯೇ ಬಂದೊದಗಿತ್ತು. ಪ್ರವಾಸದ ಆರಂಭದಲ್ಲೇ ಆರಂಭಿಕ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಗಾಯಗೊಂಡಿದ್ದರು. ಹೀಗಾಗಿ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ಹೊಣೆ ಹೆಗಲೇರಿತ್ತು. ಪ್ರಥಮ ಪಂದ್ಯದಲ್ಲಿ ಕೊಹ್ಲಿ 12 ರನ್ನಿಗೆ ನಿರ್ಗಮಿದ್ದರು. ಇದೇ ಸರಣಿಯಲ್ಲಿ ಕೊಹ್ಲಿ 54 ರನ್ ಗಳಿಸಿ ಮೊದಲ ಅರ್ಧಶತಕ ಬಾರಿಸಿ ಮಿಂಚಿದ್ದರು.

ಹಿರಿಯ ಆಟಗಾರ ಧೋನಿ ಜೊತೆ ಕೊಹ್ಲಿ

ವಿರಾಟ್​ ಕೊಹ್ಲಿ ಬ್ಯಾಟಿಂಗ್ ಶೈಲಿ: 2009ರ ಡಿಸೆಂಬರ್​ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಚೊಚ್ಚಲ ಶತಕ (107) ಬಾರಿಸಿದ್ದರು. ಆ ಪಂದ್ಯದಲ್ಲಿ ಕೊಹ್ಲಿ ಹೊರತಾಗಿ ಗೌತಮ್ ಗಂಭೀರ್ 150 ರನ್ ಗಳಿಸಿದ್ದರು. ಗೌತಿಯ ಈ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತ್ತು. ಆದರೆ ಆ ಪ್ರಶಸ್ತಿಯನ್ನು ಗಂಭೀರ್​, ಚೊಚ್ಚಲ ಶತಕ ಬಾರಿಸಿದ ಕೊಹ್ಲಿ ಅವರಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕೊಹ್ಲಿ ಈವರೆಗೆ 477 ಪಂದ್ಯಗಳನ್ನಾಡಿದ್ದು, 24350 ರನ್ ಕಲೆಹಾಕಿದ್ದಾರೆ. 102 ಟೆಸ್ಟ್ ಪಂದ್ಯಗಳಲ್ಲಿ 8074 ರನ್ ಹಾಗೂ 262 ಏಕದಿನ ಪಂದ್ಯದಲ್ಲಿ 12344 ಹಾಗೂ 113 ಟಿ-20 ಪಂದ್ಯದಲ್ಲಿ ಕೊಹ್ಲಿ 3932 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಶತಕ ಸಂಭ್ರಮ: ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ 27 ಶತಕ ಬಾರಿಸಿದ್ದರೆ, ಏಕದಿನದಲ್ಲಿ ಈ ಸಂಖ್ಯೆ 43ರಿಂದ ಏರಿಕೆ ಕಂಡಿಲ್ಲ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ 7 ಸ್ಥಾನದಲ್ಲಿದ್ರೆ, ಟೆಸ್ಟ್ 12ನೇ ಸ್ಥಾನ ಹಾಗೂ ಟಿ-20ಯಲ್ಲಿ 10ನೇ ಸ್ಥಾನ ಅಲಂಕರಿಸಿದ್ದಾರೆ. ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಕೊಹ್ಲಿ ಬ್ಯಾಟಿಂಗ್​ನಲ್ಲಿ ಅದ್ಭುತವಾಗಿದ್ದರೂ ನಾಯಕತ್ವದಲ್ಲಿ ಪರಿಣಾಮ ಬೀರಿಲ್ಲ. ಹೀಗಾಗಿ ಅವರು ನಾಯಕ ಸ್ಥಾನವನ್ನು ತೊರೆದಿದ್ದರು.

ಕ್ರಿಕೆಟ್​ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಜೊತೆಗೆ ಕೊಹ್ಲಿಯನ್ನು ಹೋಲಿಕೆ ಮಾಡುತ್ತಿದ್ದರೂ ಕೆಲ ವಿಚಾರಗಳಲ್ಲಿ ಈ ಇಬ್ಬರೂ ಆಟಗಾರರಿಗೆ ಭಿನ್ನತೆ ಇದೆ. ಸಚಿನ್​​ಗಿಂತ ವೇಗವಾಗಿ ರನ್ ಕಲೆಹಾಕುತ್ತಿದ್ದರೂ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವನೆಯನ್ನು ಪ್ರದರ್ಶಿಸುತ್ತಾರೆ. ಇದೇ ವಿಚಾರ ಸಾಕಷ್ಟು ಬಾರಿ ಚರ್ಚೆಗೂ ಕಾರಣವಾಗಿದೆ.

ವಿರುಷ್ಕಾ ಮದುವೆ

ವಿರುಷ್ಕಾ ಮದುವೆ: 2017ರಲ್ಲಿ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನು ವಿರಾಟ್​ ಕೊಹ್ಲಿ ಇಟಲಿಯಲ್ಲಿ ವಿವಾಹವಾಗಿದ್ದಾರೆ. ದಂಪತಿಗೆ ಹೆಣ್ಣು ಮಗುವಾಗಿದ್ದು, ಸದ್ಯ ಸುಖ ದಾಂಪತ್ಯ ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಪ್ರಮುಖ ದಾಖಲೆಗಳು:

  • ಹತ್ತು ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20,000 ರನ್ ಗಳಿಕೆ
  • ವೇಗವಾಗಿ ಏಕದಿನದಲ್ಲಿ 10,000 ರನ್ ಗಳಿಕೆ(205 ಇನ್ನಿಂಗ್ಸ್)
  • ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ 1000 ರನ್ ಗಳಿಕೆ(11 ಇನ್ನಿಂಗ್ಸ್)
  • ಒಂದೇ ವರ್ಷದಲ್ಲಿ ಐಸಿಸಿಯ ಎರಡು ಪ್ರಶಸ್ತಿಗೆ ಭಾಜನ (ಸರ್​​ ಗಾರ್ಫೀಲ್ಡ್​ ಸೋಬರ್ಸ್​ ಟ್ರೋಫಿ, ವರ್ಷದ ಏಕದಿನ ಮತ್ತು ಟೆಸ್ಟ್ ಆಟಗಾರ)
  • ಎರಡು ಎದುರಾಳಿ ತಂಡದ ವಿರುದ್ಧ ಮೂರು ಸತತ ಶತಕ ಬಾರಿಸಿದ ಭಾರತದ ನಾಯಕ (ಶ್ರೀಲಂಕಾ ವಿರುದ್ಧ 133*,108,106) (ವೆಸ್ಟ್ ಇಂಡೀಸ್ 140,157*,107)
  • ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ರನ್ ಗಳಿಸಿದ ನಾಯಕ. (2017ರಲ್ಲಿ 1460 ರನ್)
  • ವಿಶ್ವಕಪ್​​ನಲ್ಲಿ ಸತತ ಐದು ಅರ್ಧಶತಕ ಸಿಡಿಸಿದ ಮೊದಲ ನಾಯಕ (2019ರಲ್ಲಿ 82,77,67,72)
  • ಸತತ ಮೂರು ಕ್ಯಾಲೆಂಡರ್ ವರ್ಷದಲ್ಲಿ ಸಹಸ್ರ ರನ್ ಗಳಿಸಿದ ಮೊದಲ ಟೆಸ್ಟ್ ನಾಯಕ ಹಾಗೂ ಮೊದಲ ಭಾರತೀಯ ಆಟಗಾರ (2016ರಲ್ಲಿ 1215, 2017ರಲ್ಲಿ 1059 ಹಾಗೂ 2018ರಲ್ಲಿ 1322 ರನ್)
  • ಟೆಸ್ಟ್ ನಾಯಕನಾಗಿ ಅತೀ ಹೆಚ್ಚು ದ್ವಿಶತಕದ ಗಳಿಕೆ
  • ಐಪಿಎಲ್​ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಗಳಿಕೆ (2016ರಲ್ಲಿ 973)
  • ನಾಯಕನಾಗಿ 3000 ಏಕದಿನ ರನ್ ಗಳಿಸಿದ ಮೊದಲ ನಾಯಕ (49 ಇನ್ನಿಂಗ್ಸ್)
  • ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಶತಕ ದಾಖಲು (2017ರಲ್ಲಿ 11ಶತಕ)
  • ವೇಗವಾಗಿ 4000 ಟೆಸ್ಟ್ ರನ್ ಗಳಿಸಿದ ಮೊದಲ ಆಟಗಾರ (65 ಇನ್ನಿಂಗ್ಸ್)
  • ವೇಗವಾಗಿ 30 (186 ಇನ್ನಿಂಗ್ಸ್) ಹಾಗೂ 35 (267 ಇನ್ನಿಂಗ್ಸ್) ಏಕದಿನ ಶತಕ ದಾಖಲು
  • ಮೂರು ಏಕದಿನ ಪಂದ್ಯದಲ್ಲಿ ಸರಣಿಯಲ್ಲಿ ಮೂರು ಶತಕ ದಾಖಲಿಸಿದ ಮೊದಲ ನಾಯಕ ಹಾಗೂ ಮೊದಲ ಭಾರತೀಯ ಆಟಗಾರ
  • 350ಕ್ಕೂ ಅಧಿಕ ರನ್ ಚೇಸಿಂಗ್ ವೇಳೆ ಮೂರು ಬಾರಿಯೂ ಶತಕ ದಾಖಲು
  • ಚೊಚ್ಚಲ ವಿಶ್ವಕಪ್​​ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ (2011ರಲ್ಲಿ ಬಾಂಗ್ಲಾದೇಶ ವಿರುದ್ಧ)
  • ಪಾಕ್​ ವಿರುದ್ಧ ವಿಶ್ವಕಪ್​ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ (2015ರಲ್ಲಿ 107 ರನ್)
  • ಐಪಿಎಲ್​ ಆವೃತ್ತಿಯೊಂದರಲ್ಲಿ ಅತೀಹೆಚ್ಚು ಶತಕ ಸಿಡಿಸಿದ್ದ ಮೊದಲ ಆಟಗಾರ (2016ರಲ್ಲಿ 4 ಶತಕ)

ಓದಿ: ಬೆಂಗಳೂರಿನ ಎರಡು ರಸ್ತೆಗಳಿಗೆ ಪುನೀತ್ ರಾಜ್​ಕುಮಾರ್, ವಿರಾಟ್ ಕೊಹ್ಲಿ ಹೆಸರಿಡುವಂತೆ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.