ETV Bharat / sports

Virat Kohli: ವಿಂಡ್ಸರ್ ಪಾರ್ಕ್‌ನಲ್ಲಿ ದ್ರಾವಿಡ್​ ಜೊತೆಗಿನ ವಿಶೇಷ ಕ್ಷಣವನ್ನು ನೆನೆದ ವಿರಾಟ್​​.. - ETV Bharath Kannada news

ಒಂದು ತಿಂಗಳ ಬಿಡುವಿನ ನಂತರ ಮತ್ತೆ ಭಾರತ ತಂಡ ವೈಟ್​ ಜರ್ಸಿಯಲ್ಲಿ ಮೈದಾನಕ್ಕಿಳಿಯುತ್ತಿದೆ. ಜುಲೈ 12 ರಿಂದ ವಿಂಡೀಸ್​ ವಿರುದ್ಧ ಮೊದಲ ಟೆಸ್ಟ್​ ಪ್ರಾರಂಭವಾಗಲಿದೆ.

Virat Kohli  emotional message with Indian coach Rahul Dravid
ವಿಂಡ್ಸರ್ ಪಾರ್ಕ್‌ನಲ್ಲಿ ದ್ರಾವಿಡ್​ ಜೊತೆಗಿನ ವಿಷೇಶ ಕ್ಷಣವನ್ನು ನೆನೆದ ವಿರಾಟ್​​
author img

By

Published : Jul 10, 2023, 4:57 PM IST

ಡೊಮಿನಿಕಾ (ವೆಸ್ಟ್ ಇಂಡೀಸ್): ಮೊದಲ ಟೆಸ್ಟ್​ಗೆ ಸಿದ್ಧತೆಯಲ್ಲಿ ಭಾರತ ಕ್ರಿಕೆಟ್​ ತಂಡ ಇದೆ. ಈ ವೇಳೆ ವಿರಾಟ್​ ಕೊಹ್ಲಿ 12 ವರ್ಷಗಳ ಹಿಂದೆ ಡೊಮಿನಿಕಾದ ರೋಸೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಆಡಿದ ಕೊನೆಯ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. 2011 ರಲ್ಲಿ ಭಾರತ ಆಡುವಾಗ ತಂಡದಲ್ಲಿದ್ದ ಇಬ್ಬರು ಒಟ್ಟಿಗೆ ನಿಂತಿರುವ ಫೋಟೋವನ್ನು ಹಂಚಿಕೊಂಡ ಕೊಹ್ಲಿ ಮೈದಾನದ ಹಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ವಿಂಡ್ಸರ್ ಪಾರ್ಕ್‌ನಲ್ಲಿ ಜುಲೈ 12 ರಿಂದ 16 ರವರೆಗೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. 2017 ರ ನಂತರ ಡೊಮಿನಿಕಾ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ವಿಂಡ್ಸರ್ ಪಾರ್ಕ್‌ ಮೈದಾನದಲ್ಲಿ ಈವರೆಗೆ ಒಟ್ಟು 5 ಟೆಸ್ಟ್, 4 ಏಕದಿನ ಮತ್ತು 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಲಾಗಿದೆ.

  • The only two guys part of the last test we played at Dominica in 2011. Never imagined the journey would bring us back here in different capacities. Highly grateful. 🙌 pic.twitter.com/zz2HD8nkES

    — Virat Kohli (@imVkohli) July 9, 2023 " class="align-text-top noRightClick twitterSection" data=" ">

2011 ರ ಟೆಸ್ಟ್​​ನಲ್ಲಿ ಆಡಿದ ಆಟಗಾರರಲ್ಲಿ ಪ್ರಸ್ತುತ, ಕೊಹ್ಲಿಯನ್ನು ಹೊರತುಪಡಿಸಿ ಕೇವಲ ಒಬ್ಬ ಆಟಗಾರ ಮಾತ್ರ ಮುಂಬರುವ ಈ ಸರಣಿಯಲ್ಲಿ ಭಾರತೀಯ ತಂಡದ ಭಾಗವಾಗಿದ್ದಾರೆ. ಅವರೆಂದರೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್. ಇನ್‌ಸ್ಟಾಗ್ರಾಮ್‌ನಲ್ಲಿ ದ್ರಾವಿಡ್ ಅವರೊಂದಿಗಿನ ಫೋಟೋವನ್ನು ಕೊಹ್ಲಿ ಹಂಚಿಕೊಂಡಿದ್ದಾರೆ, ವಿಭಿನ್ನ ಪಾತ್ರಗಳಲ್ಲಿ ಅವರನ್ನು ಡೊಮಿನಿಕಾಕ್ಕೆ ಮರಳಿ ಕರೆತಂದಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

2011ರಲ್ಲಿ ವಿರಾಟ್​ ಟೆಸ್ಟ್​ಗೆ ಪಾದಾರ್ಪಣೆ ಮಾಡಿದ್ದರು. ಈ ಸರಣಿಯಲ್ಲಿ ಭಾರಯ ವೆಸ್ಟ್​​ ಇಂಡೀಸ್​ನಲ್ಲಿ 3 ಟೆಸ್ಟ್​ ಪಂದ್ಯಗಳನ್ನು ಆಡಿತ್ತು. ವಿರಾಟ್​ಗೆ ಇದು ಟೆಸ್ಟ್​ನ ಮೊದಲ ಪ್ರವಾಸವಾಗಿತ್ತು. 2011ರ ಸರಣಿಯ ಮೂರನೇ ಟೆಸ್ಟ್​ ಪಂದ್ಯ ಡೊಮಿನಿಕಾದಲ್ಲಿ ನಡೆದಿತ್ತು. ರಾಹುಲ್​ ದ್ರಾವಿಡ್​ಗೆ ಇದು ಕೊನೆ ವೆಸ್ಟ್​ ಇಂಡೀಸ್ ಪ್ರವಾಸವಾಗಿದೆ. ಆ ಸರಣಿಯನ್ನು ಭಾರತ 1-0 ಯಿಂದ ಗೆದ್ದುಕೊಂಡಿತ್ತು.

ವಿರಾಟ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡೊಮಿನಿಕಾ ಕ್ರೀಡಾಂಗಣದಲ್ಲಿ ದ್ರಾವಿಡ್​​ ಅವರ ಜೊತೆಗಿನ ಫೋಟೋವನ್ನು ಹಂಚಿಕೊಂಡು, "2011 ರಲ್ಲಿ ಡೊಮಿನಿಕಾದಲ್ಲಿ ನಾವು ಆಡಿದ ಕೊನೆಯ ಟೆಸ್ಟ್‌ನ ಏಕೈಕ ಇಬ್ಬರು ವ್ಯಕ್ತಿಗಳು. ಪ್ರಯಾಣವು ನಮ್ಮನ್ನು ವಿಭಿನ್ನ ಸಾಮರ್ಥ್ಯಗಳಲ್ಲಿ ಮರಳಿ ಇಲ್ಲಿಗೆ ತರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ತುಂಬಾ ಕೃತಜ್ಞರಾಗಿರಬೇಕು" ಎಂದು ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನ ಕಳೆದು ಒಂದು ತಿಂಗಳ ನಂತರ ಭಾರತ ತಂಡ ಮತ್ತೆ ವೈಟ್​ ಜರ್ಸಿಯಲ್ಲಿ ಮೈದಾನಕ್ಕಿಳಿಯುತ್ತಿದೆ. 2023-25 ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪ್ರವಾಸದ ಮೊದಲನೇ ಟೆಸ್ಟ್​ನ್ನು ಉಭಯ ತಂಡಗಳೂ ಆಡುತ್ತಿವೆ. ಹೀಗಾಗಿ ಎರಡೂ ತಂಡಕ್ಕೆ ಇದು ಅತ್ಯಂತ ಪ್ರಮುಖ ಕದನವಾಗಿದೆ. ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ ಎರಡು ಟೆಸ್ಟ್​​ ನಡೆಯಲಿದ್ದು, ಕೆರಿಬಿಯನ್​ ಕ್ರಿಕೆಟ್​ ಮಂಡಳಿ ಮೊದಲ ಟೆಸ್ಟ್​ಗೆ ಮಾತ್ರ ತಂಡವನ್ನು ಪ್ರಕಟಿಸಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಸ್. ಭರತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

ಇದನ್ನೂ ಓದಿ: ವಿಂಡ್ಸರ್ ಪಾರ್ಕ್‌ನಲ್ಲಿ ಭಾರತಕ್ಕೆ ಮೊದಲ 'ಟೆಸ್ಟ್'; ನೆಟ್ಸ್​ನಲ್ಲಿ ಕಸರತ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.