ETV Bharat / sports

ಅಭಿಜಿತ್ ತೋಮರ್ ಶತಕ ವ್ಯರ್ಥ: ವಿಜಯ್ ಹಜಾರೆ ಟ್ರೋಫಿ ಗೆದ್ದ ಹರಿಯಾಣ - ETV Bharath Kannada news

Vijay Hazare Trophy: ಹರ್ಷಲ್​ ಪಟೇಲ್​ ಅವರ ಚಾಣಾಕ್ಷ ಬೌಲಿಂಗ್​ ನೆರವಿನಿಂದ ದೇಶೀಯ ಏಕದಿನ ಟ್ರೋಫಿಯನ್ನು ಹರಿಯಾಣ ಗೆದ್ದಿದೆ.

Vijay Hazare Trophy
Vijay Hazare Trophy
author img

By ETV Bharat Karnataka Team

Published : Dec 16, 2023, 10:59 PM IST

ರಾಜ್‌ಕೋಟ್ (ಗುಜರಾತ್​): ಡೆತ್​ ಓವರ್​ನಲ್ಲಿ ಮಿಂಚಿನ ದಾಳಿಯನ್ನು ಮಾಡಿದ ಹರ್ಷಲ್ ಪಟೇಲ್ ವಿಜಯ್ ಹಜಾರೆ ಟ್ರೋಫಿ ಫೈನಲ್​ನಲ್ಲಿ ಹರಿಯಾಣ 30 ರನ್‌ಗಳ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶನಿವಾರ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಹರಿಯಾಣ ನೀಡಿದ್ದ 287 ರನ್​ ಗುರಿ ಬೆನ್ನಟ್ಟಿದ ರಾಜಸ್ಥಾನ 48 ಓವರ್​ಗೆ 257 ರನ್​ ಕಲೆಹಾಕಿ ಸರ್ವಪತನ ಕಂಡಿತು. ಇದರ ಫಲವಾಗಿ ಹರಿಯಾಣ ದೇಶೀಯ ಏಕದಿನ ಟ್ರೋಫಿಯ ಚಾಂಪಿಯನ್​ ಆಗಿ ಹೊರಹೊಮ್ಮಿತು.

ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಹರಿಯಾಣ 50 ಓವರ್​ಗೆ 8 ವಿಕೆಟ್​ ಕಳೆದುಕೊಂಡು 287 ರನ್​ ಗುರಿ ನೀಡಿತ್ತು. ರಾಜಸ್ಥಾನ ಕುನಾಲ್ ಸಿಂಗ್ ರಾಥೋರ್ (65 ಎಸೆತಗಳಲ್ಲಿ 79 ರನ್​) ನಿಧಾನಗತಿ ಆಟ ಹಾಗೂ ಆರಂಭಿಕ ಆಟಗಾರ ಅಭಿಜಿತ್ ತೋಮರ್ (129 ಎಸೆತಗಳಲ್ಲಿ 106 ರನ್) ಶತಕದ ನೆರವಿನಿಂದ 4 ವಿಕೆಟ್‌ಗೆ 201 ರನ್ ಗಳಿಸಿ ರಾಜಸ್ಥಾನ ಕಠಿಣ ಹೋರಾಟ ನೀಡಿತ್ತು. ಮೊದಲ ಐದು ಓವರ್​ನಲ್ಲಿ ದುಬಾರಿ ಆಗಿದ್ದ ಹರ್ಷಲ್​ ಪಟೇಲ್​ ಕೊನೆಯ ಓವರ್​ ವೇಳೆಗೆ ಬಾಲ್ ಹಳೆಯದಾದಾಗ ತಮ್ಮ ಕಮಾಲ್​ ತೋರಿದರು. ಕೊನೆಯ ಓವರ್​ಗಳಲ್ಲಿ ರನ್​ ಕಡಿವಾಣ ಹಾಕಿದ್ದಲ್ಲದೇ ವಿಕೆಟ್​ ಕಿತ್ತು 48 ಓವರ್​ಗೆ ರಾಜಸ್ಥಾನ ಆಲ್​ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ​

ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್​ ವೇಳೆ ಹರಿಯಾಣ ತಂಡದ ಆಲ್​ರೌಂಡರ್​ ಸುಮಿತ್ ಕುಮಾರ್ 16 ಬಾಲ್​ನಲ್ಲಿ 28 ರನ್​ ಗಳಿಸಿ ತಂಡಕ್ಕೆ ಆಸರೆ ಆಗಿದ್ದಲ್ಲದೇ, ಬೌಲಿಂಗ್​ನಲ್ಲಿ 6 ಓವರ್​ ಮಾಡಿ 34 ರನ್​ ಕೊಟ್ಟು 3 ವಿಕೆಟ್​ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಯ ಜೊತೆಗೆ, ಸರಣಿ ಶ್ರೇಷ್ಠರೂ ಆದರು.

ಮೊದಲ ಇನ್ನಿಂಗ್ಸ್​ನಲ್ಲಿ: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಹರಿಯಾಣಕ್ಕೆ ಅಂಕಿತ್ ಕುಮಾರ್ (88) ಮತ್ತು ನಾಯಕ ಅಶೋಕ್ ಮೆನಾರಿಯಾ (70) ಆಸರೆಯ ಇನ್ನಿಂಗ್ಸ್​ ಆಡಿದರು. ಇವರನ್ನು ಬಿಟ್ಟರೆ ರೋಹಿತ್ ಪರ್ಮೋದ್ ಶರ್ಮಾ (20), ನಿಶಾಂತ್ ಸಿಂಧು (29), ರಾಹುಲ್ ತೆವಾಟಿಯಾ (24) ಮತ್ತು ಸುಮಿತ್ ಕುಮಾರ್ (28) ಮುವತ್ತರ ಒಳಗೆ ರನ್​ ಕಲೆಹಾಕಿ ಸಹಕರಿಸಿದರು. ಇವರುಗಳ ಬ್ಯಾಟಿಂಗ್​ ಸಹಾಯದಿಂದ 50 ಓವರ್​ ಅಂತ್ಯಕ್ಕೆ ಹರಿಯಾಣ 287 ರನ್​ ಕಲೆಹಾಕಿ ಸಾಧಾರಣ ಗುರಿಯನ್ನು ನೀಡಿತು. ಇದನ್ನು ಬೆನ್ನತ್ತಿದ ರಾಜಸ್ಥಾನ 48 ಓವರ್​ಗೆ 257ಕ್ಕೆ ಶರಣಾಯಿತು.

ಇದನ್ನೂ ಓದಿ: ದಾಖಲೆಯ ಜಯ ದಾಖಲಿಸಿದ ವನಿತೆಯರು: ಡ್ರೆಸ್ಸಿಂಗ್​ ರೂಮ್​​ನಲ್ಲಿ ಸಂಭ್ರಮಿಸಿದ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.