ETV Bharat / sports

Asia Cup 2023: ಭಾರತ-ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ಮಾತ್ರ ಮೀಸಲು ದಿನ.. ವೆಂಕಟೇಶ್ ಪ್ರಸಾದ್ ಅಸಮಾಧಾನ

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ಘೋಷಿಸಿದ್ದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಕಿಡಿಕಾರಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್
ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್
author img

By ANI

Published : Sep 9, 2023, 12:25 PM IST

Updated : Sep 9, 2023, 12:33 PM IST

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್-4 ಪಂದ್ಯಕ್ಕೆ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಂಸಿಸಿ) ಮೀಸಲು ದಿನವನ್ನು ನಿಗದಿಪಡಿಸಿದ್ದು ಈ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಕಿಡಿ ಕಾರಿದ್ದಾರೆ. ಸೆಪ್ಟೆಂಬರ್ 10 ಶ್ರೀಲಂಕಾದ ಕೊಲಂಬೊದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದ್ದು ಅಲ್ಲಿನ ಹವಾಮಾನವನ್ನು ಪರಿಗಣಿಸಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಸಲು ದಿನವನ್ನು ನಿಗದಿಪಡಿಸಿದೆ. ಆದರೆ, ಈ ನಿರ್ಧಾರಕ್ಕೆ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ವೆಂಕಟೇಶ್ ಪ್ರಸಾದ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 10(ಭಾನುವಾರ) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಾತ್ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಮೀಸಲು ದಿನವನ್ನು ಘೋಷಿಸಿದೆ. ನಿಗದಿಯಂತೆ ನಡೆಯಬೇಕಿರುವ ಪಂದ್ಯಕ್ಕೆ ಒಂದು ವೇಳೆ ಮಳೆ ಅಡ್ಡಿಯಾದರೆ, ಪಂದ್ಯ ಎಲ್ಲಿ ಸ್ಥಗಿತವಾಗಿದೆಯೋ ಅಲ್ಲಿಂದಲೇ ಮರುದಿನ (ಸೆಪ್ಟೆಂಬರ್ 11) ಮತ್ತೆ ಪುನಾರಂಭವಾಗಲಿದೆ. ಈ ನಿರ್ಧಾರಕ್ಕೆ ಪ್ರಸಾದ್ ಕಿಡಿಕಾರಿದ್ದಾರೆ. "ಇದೊಂದು ಇಬ್ಬಗೆಯ ನಿರ್ಧಾರ. ಕೇವಲ ಎರಡು ತಂಡಗಳಿಗೆ ವಿಭಿನ್ನ ನಿಯಮಗಳನ್ನು ಹೊಂದಿರುವುದು ಅನೈತಿಕವಾಗಿದೆ" ಎಂದು ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • If true this is absolute shamelessness this. The organisers have made a mockery and it is unethical to have a tournament with rules being different for the other two teams.
    In the name of justice, will only be fair if it is abandoned the first day, may it rain harder on the… https://t.co/GPQGmdo1Zx

    — Venkatesh Prasad (@venkateshprasad) September 8, 2023 " class="align-text-top noRightClick twitterSection" data=" ">

"ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿಯಾಗಿದೆ. ಆಯೋಜಕರು ಇಂತಹದ್ದೊಂದು ನಿರ್ಧಾರದವನ್ನು ತೆಗೆದುಕೊಳ್ಳುವ ಮೂಲಕ ಅಪಹಾಸ್ಯ ಮಾಡಿದ್ದಾರೆ. ಇತರ ಎರಡು ತಂಡಗಳಿಗೆ ವಿಭಿನ್ನ ನಿಯಮಗಳೊಂದಿಗೆ ಪಂದ್ಯಾವಳಿಯನ್ನು ನಡೆಸುವುದು ಅನೈತಿಕಕ್ಕೆ ಸಮ. ನ್ಯಾಯದ ಹೆಸರಿನಲ್ಲಿ ಪಂದ್ಯವನ್ನು ಮೊದಲ ದಿನಕ್ಕೆ ಸೀಮಿತಗೊಳಿಸಿದರೆ ಮಾತ್ರ ನ್ಯಾಯಸಮ್ಮತವಾಗುತ್ತದೆ. ಎರಡನೇ ದಿನದಲ್ಲಿ ಹೆಚ್ಚು ಮಳೆಯಾದರೆ ಈ ದುರುದ್ದೇಶಪೂರಿತ ಯೋಜನೆಗಳು ಯಶಸ್ವಿಯಾಗದು" ಎಂದು ಅವರು ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಬಾಂಗ್ಲಾದೇಶದ ಮುಖ್ಯ ತರಬೇತುದಾರ ಚಂಡಿಕಾ ಹತುರುಸಿಂಘ ಅವರು, "ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ಹೊಂದಿರುವುದು ಸಮಂಜಸವಲ್ಲ. ಕೊಲಂಬೊಗೆ ಮಳೆ ಮುನ್ಸೂಚನೆ ಇರುವುದರಿಂದ ತಮ್ಮ ತಂಡವು ಮೀಸಲು ದಿನದ ಪ್ರಯೋಜನವನ್ನು ಪಡೆಯಲು ಇಷ್ಟಪಡುತ್ತದೆ" ಎಂದು ಹೇಳಿದ್ದರು.

ಮೊದಲ ವೇಳಾಪಟ್ಟಿಯಲ್ಲಿ ಏಷ್ಯಾ ಕಪ್ ಫೈನಲ್‌ಗೆ ಮಾತ್ರ ಮೀಸಲು ದಿನದ ಅವಕಾಶ ನೀಡಲಾಗಿತ್ತು. ಆದರೆ, ನಾಳೆ ನಡೆಯುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಿನಾಯಿತಿ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆಯೋಜಕರು, ಪ್ರಸಾರಕರು ಜಾಹೀರಾತು ದೃಷ್ಟಿಕೋನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಈ ಮೂಲಕ ಉಳಿದ (ಬಾಂಗ್ಲಾದೇಶ ಮತ್ತು ಶ್ರೀಲಂಕಾ) ತಂಡಕ್ಕೆ ಅವಮಾನ ಮಾಡಲಾಗಿದೆ ಎಂದು ಸೈಫ್ ಅಹ್ಮದ್ ಎಂಬವರು ಕಾಮೆಂಟ್​ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ, ಸೂಪರ್ ಫೋರ್ ಹಂತದಲ್ಲಿ ಭಾರತದ ಮುಂದಿನ ನಿಗದಿತ ಪಂದ್ಯ ಸೆಪ್ಟೆಂಬರ್ 12 ರಂದು ಶ್ರೀಲಂಕಾ ವಿರುದ್ಧ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಪು ಹಂತದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳು ಈಗಾಗಲೇ ತಲಾ ಒಂದು ಅಂಕ ಹಂಚಿಕೊಂಡಿವೆ.

ಅಂದು ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (87) ಮತ್ತು ಇಶಾನ್ ಕಿಶನ್ (82) ಅವರ ನೆರವಿನಿಂದ ಭಾರತ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ, ಎರಡನೇ ಇನ್ನಿಂಗ್ಸ್​ಗೆ ವರುಣ ಅವಕಾಶವನ್ನೇ ನೀಡಲಿಲ್ಲ. ಹಾಗಾಗಿ ಪಾಕಿಸ್ತಾನ ತಂಡ ಒಂದು ಚೆಂಡನ್ನು ಎದುರಿಸದೆ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇದನ್ನೂ ಓದಿ: ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿ.. ಆದರೂ ಆತಂಕವಿಲ್ಲ.. ಮೀಸಲು ದಿನದಂದು ನಡೆಯಲಿದೆ ಮ್ಯಾಚ್​

Last Updated : Sep 9, 2023, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.