ETV Bharat / sports

U19 World Cup : ಬ್ಲಾಕ್​ ಬಸ್ಟರ್​ ಸೆಮಿಫೈನಲ್​ನಲ್ಲಿ ಬಲಿಷ್ಠ ಭಾರತಕ್ಕೆ ಆಸ್ಟ್ರೇಲಿಯಾ ಸವಾಲು

author img

By

Published : Feb 1, 2022, 5:16 PM IST

ಕಿರಿಯರ ವಿಶ್ವಕಪ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡಗಳಾಗಿವೆ. ಭಾರತ ತಂಡ 4 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರೆ, ಕಾಂಗರೂ ಪಡೆ 3 ಬಾರಿ ಚಾಂಪಿಯನ್​ ಆಗಿದೆ. ಭಾರತ 2018ರಲ್ಲಿ ಮತ್ತು ಆಸ್ಟ್ರೇಲಿಯಾ​ 2010ರಲ್ಲಿ ಕೊನೆಯ ಬಾರಿ ಚಾಂಪಿಯನ್ ಆಗಿವೆ..

U19 World Cup
ಅಂಡರ್ 19 ವಿಶ್ವಕಪ್​ 2022

ಆಂಟಿಗುವಾ : ಬುಧವಾರ ನಡೆಯಲಿರುವ ಅಂಡರ್​-19 ವಿಶ್ವಕಪ್​​ನ ಬ್ಲಾಕ್​ಬಸ್ಟರ್​ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಕೋವಿಡ್​-19 ಹೊಡೆತಕ್ಕೆ ಸಿಲುಕಿದರೂ ಅಂತಿಮ 4ರ ಹಣಾಹಣಿಗೆ ಪ್ರವೇಶ ಪಡೆದಿರುವ ಭಾರತ ತಂಡ 8ನೇ ಬಾರಿ ಫೈನಲ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿದೆ.

ಕಿರಿಯರ ವಿಶ್ವಕಪ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡಗಳಾಗಿವೆ. ಭಾರತ ತಂಡ 4 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರೆ, ಕಾಂಗರೂ ಪಡೆ 3 ಬಾರಿ ಚಾಂಪಿಯನ್​ ಆಗಿದೆ. ಭಾರತ 2018ರಲ್ಲಿ ಮತ್ತು ಆಸ್ಟ್ರೇಲಿಯಾ​ 2010ರಲ್ಲಿ ಕೊನೆಯ ಬಾರಿ ಚಾಂಪಿಯನ್ ಆಗಿವೆ.

ಪ್ರಸ್ತುತ ವಿಶ್ವಕಪ್​ ತಯಾರಿಯಲ್ಲಿ ಭಾರತ ತಂಡ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿತ್ತು. ಕೋವಿಡ್ ಹೊಡೆತಕ್ಕೆ ಸಿಲುಕಿದ್ದರಿಂದ ಬಿಸಿಸಿಐ ಯಾವುದೇ ವಯೋಮಿತಿ ಟೂರ್ನಮೆಂಟ್​ ಆಯೋಜಿಸಿರಲಿಲ್ಲ. ಆದರೂ ವಿಶ್ವಕಪ್​ಗೆ ಮುನ್ನ ನಡೆದ ಏಷ್ಯಾ ಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್​ ಆಗಿದ್ದ ಯುವಪಡೆ ವಿಶ್ವಕಪ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನಾಲ್ಕು ಬಾರಿಯ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧ 45 ರನ್​ಗಳ ಜಯ ಸಾಧಿಸಿ ಅದ್ಭುತವಾಗಿ ತಮ್ಮ ಅಭಿಯಾನ ಆರಂಭಿಸಿತ್ತು. ಆದರೆ, ನಂತರದ ಐರ್ಲೆಂಡ್​ ಪಂದ್ಯದ ವೇಳೆ ನಾಯಕ ಯಶ್​ ಧುಲ್ ಸೇರಿದಂತೆ ಕೆಲವು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಉಳಿದಿದ್ದ 11 ಆಟಗಾರರ ತಂಡವನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯವಾಗಿತ್ತು. ತಂಡದ ಐವರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೇ ಕಣ್ಣಕ್ಕಿಳಿದ ತಂಡ ಐರ್ಲೆಂಡ್(307/5) ಮತ್ತು ಉಗಾಂಡ(405/5) ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ನಂತರ ಕ್ವಾರ್ಟರ್ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಬಾಂಗ್ಲಾದೇಶವನ್ನು ಕೇವಲ 111 ರನ್​ಗಳಿಗೆ ಆಲೌಟ್ ಮಾಡಿ, 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ 4ನೇ ಬಾರಿ ಸೆಮಿಫೈನಲ್​ ಪ್ರವೇಶಿಸಿತ್ತು. ಇದೀಗ ಸೆಮಿಫೈನಲ್​ನಲ್ಲಿ ಪಾಕಿಸ್ತಾನ ತಂಡವನ್ನು 119 ರನ್​ಗಳ ಅಂತರದಿಂದ ಮಣಿಸಿದ ವಿಶ್ವಾಸದಲ್ಲಿರುವ 3 ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ಮತ್ತೊಂದು ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.

ಅಭ್ಯಾಸ ಪಂದ್ಯದಲ್ಲಿ ಭಾರತದೆದುರು ಆಸ್ಟ್ರೇಲಿಯಾ 9 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಹಾಗಾಗಿ ಈ ಪಂದ್ಯದಲ್ಲಿ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಭಾರತ ತಂಡ : ಯಶ್ ಧುಲ್ (ನಾಯಕ), ಅಂಗ್‌ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ರಾಜ್ ಬಾವಾ, ಕೌಶಲ್ ತಾಂಬೆ, ದಿನೇಶ್ ಬಾನಾ, ನಿಶಾಂತ್ ಸಿಂಧು, ವಿಕ್ಕಿ ಓಸ್ತ್ವಾಲ್, ರಾಜವರ್ಧನ್ ಹಂಗರ್ಗೇಕರ್, ವಾಸು ವತ್ಸ್​ ಮತ್ತು ರವಿ ಕುಮಾರ್.

ಆಸ್ಟ್ರೇಲಿಯಾ ತಂಡ : ಕೂಪರ್ ಕನೊಲಿ (ನಾಯಕ), ಕ್ಯಾಂಪ್‌ಬೆಲ್ ಕೆಲ್ಲಾವೆ, ಟೀಗ್ ವೈಲ್ಲಿ, ಏಡನ್ ಕಾಹಿಲ್, ಕೋರಿ ಮಿಲ್ಲರ್, ಜ್ಯಾಕ್ ಸಿನ್‌ಫೀಲ್ಡ್, ಟೋಬಿಯಾಸ್ ಸ್ನೆಲ್, ವಿಲಿಯಂ ಸಾಲ್ಜ್‌ಮನ್, ಜ್ಯಾಕ್ ನಿಸ್ಬೆಟ್, ಲಾಚ್ಲಾನ್ ಶಾ ಮತ್ತು ಟಾಮ್ ವಿಟ್ನಿ.

ಇದನ್ನೂ ಓದಿ:ಬರ್ಮಿಗ್​ಹ್ಯಾಮ್​ ಕಾಮನ್​ವೆಲ್ತ್​ ಗೇಮ್ಸ್​ಗೆ ಕ್ರಿಕೆಟ್​ ತಂಡಗಳ ಕನ್ಫರ್ನ್ : ಭಾರತ ಸೇರಿದಂತೆ 8 ದೇಶಗಳಿಂದ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.