ಹೈದರಾಬಾದ್: ಅಂಡರ್-19 ವಿಶ್ವಕಪ್ ಮೂಲಕ ಬೇಬಿ ಎಬಿ ಎಂದೇ ಫೇಮಸ್ ಆಗಿರುವ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ಟೀಂ ಇಂಡಿಯಾದ ಶಿಖರ್ ಧವನ್ ನಿರ್ಮಿಸಿದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿಡಿ ಶೈಲಿಯಲ್ಲೇ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವ ಬ್ರೆವಿಸ್, ಪ್ರಸ್ತುತ ಅಂಡರ್-19 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಅಂಡರ್-19 ವಿಶ್ವಕಪ್ನಲ್ಲಿ 7 & 8ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ದಕ್ಷಿಣ ಆಫ್ರಿಕಾದ ಬ್ರವಿಸ್ 130 ಎಸೆತಗಳಲ್ಲಿ 138ರನ್ಗಳಿಕೆ ಮಾಡಿದ್ದು, ಇದರಲ್ಲಿ ಏಳು ಆಕರ್ಷಕ ಸಿಕ್ಸರ್ ಮತ್ತು 11 ಬೌಂಡರಿ ಸೇರಿಕೊಂಡಿವೆ.
-
RECORD BREAKER 💯
— Cricket South Africa (@OfficialCSA) February 4, 2022 " class="align-text-top noRightClick twitterSection" data="
Dewald Brevis has scored more #U19CWC runs in a single edition than any other batter in the history of the game#BePartOfIt pic.twitter.com/pzA16FjaWb
">RECORD BREAKER 💯
— Cricket South Africa (@OfficialCSA) February 4, 2022
Dewald Brevis has scored more #U19CWC runs in a single edition than any other batter in the history of the game#BePartOfIt pic.twitter.com/pzA16FjaWbRECORD BREAKER 💯
— Cricket South Africa (@OfficialCSA) February 4, 2022
Dewald Brevis has scored more #U19CWC runs in a single edition than any other batter in the history of the game#BePartOfIt pic.twitter.com/pzA16FjaWb
ಇದನ್ನೂ ಓದಿರಿ: PAK vs AUS : 24 ವರ್ಷದ ನಂತರ ಪಾಕ್ ಪ್ರವಾಸ ಕೈಗೊಳ್ಳಲಿದೆ ಆಸೀಸ್.. ಮಾರ್ಚ್ 4ರಿಂದ ಸರಣಿ ಶುರು
ಶಿಖರ್ ಧವನ್ ದಾಖಲೆ ಬ್ರೇಕ್ ಮಾಡಿದ ಬೇಬಿ ಎಬಿ: 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿದ್ದ ಶಿಖರ್ ಧವನ್ 505ರನ್ಗಳಿಕೆ ಮಾಡಿದ್ದರು. ಇದೀಗ ಬ್ರೆವಿಸ್ ಈ ರೆಕಾರ್ಡ್ ಬ್ರೇಕ್ ಮಾಡಿದ್ದು, 6 ಪಂದ್ಯಗಳಿಂದ 506ರನ್ಗಳಿಕೆ ಮಾಡಿದ್ದಾರೆ.
ಅಂಡರ್-19 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್
- ಡೆವಾಲ್ಡ್ ಬ್ರೆವಿಸ್(ದಕ್ಷಿಣ ಆಫ್ರಿಕಾ) 506 ರನ್, 2022(2 ಶತಕ)
- ಶಿಖರ್ ಧವನ್(ಭಾರತ) 505ರನ್, 2008(3 ಶತಕ)
- ವಿಲಿಯಮ್ಸ್ (ಆಸ್ಟ್ರೇಲಿಯಾ) 471ರನ್, 1988 (2 ಶತಕ)
- ಕ್ಯಾಮರೂನ್ ವೈಟ್ (ಆಸ್ಟ್ರೇಲಿಯಾ) 423ರನ್, 2002 (1 ಶತಕ)
- ಡಿಜೆ ಪ್ಯಾಗನ್ (ವೆಸ್ಟ್ ಇಂಡೀಸ್) 421ರನ್, 2002 (1 ಶತಕ)
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಅಂಡರ್19 ವಿಶ್ವಕಪ್ನಲ್ಲಿ ಡೆವಾಲ್ಡ್ ಬ್ರೆವಿಸ್ ಭಾರತದ ವಿರುದ್ಧ 65ರನ್ಗಳಿಕೆ ಮಾಡಿ ತಮ್ಮ ಅಭಿಯಾನ ಆರಂಭಿಸಿದ್ದು, ತದನಂತರ ಉಗಾಂಡಾ ವಿರುದ್ಧ 104ರನ್, ಕ್ವಾರ್ಟರ್ಫೈನಲ್ನಲ್ಲಿ ಐರ್ಲೆಂಡ್ ವಿರುದ್ಧ 96 ಮತ್ತು ಇಂಗ್ಲೆಂಡ್ ವಿರುದ್ಧ 97ರನ್ಗಳಿಕೆ ಮಾಡಿದ್ದರು.
U19 ವಿಶ್ವಕಪ್ ಡೆವಾಲ್ಡ್ ಬ್ರೆವಿಸ್ ಸ್ಕೋರ್
- ಭಾರತದ ವಿರುದ್ಧ 65 ರನ್
- ಉಗಾಂಡಾ ವಿರುದ್ಧ 104 ರನ್
- ಐರ್ಲೆಂಡ್ ವಿರುದ್ಧ 96 ರನ್
- ಇಂಗ್ಲೆಂಡ್ ವಿರುದ್ಧ 97 ರನ್
- ಶ್ರೀಲಂಕಾ ವಿರುದ್ಧ 6 ರನ್
- ಬಾಂಗ್ಲಾದೇಶ ವಿರುದ್ಧ 138ರನ್
ಇದೇ ತಿಂಗಳು ನಡೆಯಲಿರುವ ಐಪಿಎಲ್ನಲ್ಲಿ ತಮ್ಮ ಹೆಸರು ದಾಖಲು ಮಾಡಿರುವ ಬ್ರೆವಿಸ್ ಮೂಲ ಬೆಲೆ 20 ಲಕ್ಷ ರೂ. ಘೋಷಣೆ ಮಾಡಿಕೊಂಡಿದ್ದು, ಆಯ್ಕೆಯಾಗುವ ಸಾಧ್ಯತೆ ಇದೆ.