ETV Bharat / sports

ಕಮ್​ಬ್ಯಾಕ್​ ಸುಲಭವಲ್ಲ, ಭವಿಷ್ಯದ ದೃಷ್ಟಿಯಿಂದ ಮ್ಯಾನೇಜ್​ಮೆಂಟ್​ ಕುಲ್ದೀಪ್​ ಬೆಂಬಲಕ್ಕೆ ನಿಲ್ಬೇಕು : ಹರ್ಭಜನ್ - ಕುಲ್ದೀಪ್ ಯಾದವ್ ಭಾರತ ತಂಡ

ಕುಲ್ದೀಪ್ ಕಮ್​ಬ್ಯಾಕ್ ಕುರಿತು ಪಿಟಿಐ ಜೊತೆ ಮಾತನಾಡಿರುವ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್​, ಕುಲ್ದೀಪ್​ ಮುಂದೆ ತುಂಬಾ ಕಠಿಣ ಸವಾಲುಗಳು ಎದುರಾಗಲಿವೆ. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಸರಿಯಾದ ಡೊಮೆಸ್ಟಿಕ್​ ಪಂದ್ಯಗಳನ್ನಾಡಿಲ್ಲ.ಆದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದು ಸುಲಭವಲ್ಲ ಎಂದು ಹೇಳಿದ್ದಾರೆ.

Harbhajan on Kuldeep
ಕುಲ್ದೀಪ್ ಯಾದವ್​ ಕಮ್​ಬ್ಯಾಕ್
author img

By

Published : Jan 27, 2022, 8:09 PM IST

ನವದೆಹಲಿ: ಕಳೆದ ಸೆಪ್ಟೆಂಬರ್​ನಲ್ಲಿ ಯುಎಇನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್ ಲೀಗ್ ವೇಳೆ ಕೋಲ್ಕತ್ತಾ ನೈಟ್​ ರೈಡರ್ಸ್​ ಅಭ್ಯಾಸ ಶಿಬಿರದಲ್ಲಿ ಕುಲ್ದೀಪ್ ಯಾದವ್ ಮೊಣಕಾಲಿಗೆ​ ಗಾಯಮಾಡಿಕೊಂಡು ಲೀಗ್​ನಿಂದ ಹೊರಬಿದ್ದಿದ್ದರು.

ಗಾಯಗೊಂಡ ವಾರದ ನಂತರ ಮುಂಬೈನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಡಗೈ ಸ್ಪಿನ್ನರ್​, 3 ತಿಂಗಳ ವಿಶ್ರಾಂತಿಯಲ್ಲಿದ್ದರು. ಸುದೀರ್ಘ ಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಅವರು ಕಮ್​ಬ್ಯಾಕ್ ಮಾಡಲು ರಣಜಿಯಲ್ಲಿ ನೀಡುವ ಪ್ರದರ್ಶನದ ಮಹತ್ವವಾಗಿತ್ತು.

ಉತ್ತರ ಪ್ರದೇಶ ಘೋಷಿಸಿದ್ದ ರಣಜಿ ತಂಡಕ್ಕೆ ಅವರು ನಾಯಕನಾಗಿದ್ದರು. ಆದರೆ ಕೋವಿಡ್ 19 ಕಾರಣ ರಣಜಿ ರದ್ದಾಗಿದ್ದರಿಂದ ಕುಲ್ದೀಪ್​ ರಾಷ್ಟ್ರೀಯ ತಂಡಕ್ಕೆ ಮರಳುವ ಆಸೆಗೆ ದೊಡ್ಡ ಹೊಡೆತಬಿದ್ದತ್ತು. ಆದರೆ ಅನುಭವಿ ರವಿಚಂದ್ರನ್ ಅಶ್ವಿನ್ ಗಾಯಗೊಂಡಿರುವುದಿರಿಂದ ಕುಲ್ದೀಪ್​ ಯಾದವ್​ಗೆ ಆಯ್ಕೆ ಸಮಿತಿ ಮತ್ತೊಂದು ಅವಕಾಶ ನೀಡಿದೆ. ಎರಡು ವರ್ಷಗಳ ಹಿಂದೆ ಸೀಮಿತ ಓವರ್​ಗಳಲ್ಲಿ ಭಾರತದ ಯಶಸ್ಸಿಗೆ ಕಾರಣರಾಗಿದ್ದ ಕುಲ್ಚಾ(ಕುಲ್ದೀಪ್-ಚಹಲ್) ಮತ್ತೆ ಹೊಂದಾಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕುಲ್ದೀಪ್ ಕಮ್​ಬ್ಯಾಕ್ ಕುರಿತು ಪಿಟಿಐ ಜೊತೆ ಮಾತನಾಡಿರುವ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್​, ಕುಲ್ದೀಪ್​ ಮುಂದೆ ತುಂಬಾ ಕಠಿಣ ಸವಾಲುಗಳು ಎದುರಾಗಲಿವೆ. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಸರಿಯಾದ ಡೊಮೆಸ್ಟಿಕ್​ ಪಂದ್ಯಗಳನ್ನಾಡಿಲ್ಲ.ಆದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದು ಸುಲಭವಲ್ಲ ಎಂದು ಹೇಳಿದ್ದಾರೆ.

ಆತ ಸರ್ಜರಿಗೆ ಒಳಗಾಗುವ ಮುನ್ನವೂ ಕೂಡ ನಿಯಮಿತವಾಗಿ ಆಡುತ್ತಿರಲಿಲ್ಲ ಮತ್ತು ಇಂತಹ ಸನ್ನಿವೇಶದಲ್ಲಿ ನೀವು ವೈಟ್​ಬಾಲ್​ ಕ್ರಿಕೆಟ್​ಗೆ ಹಿಂತಿರುಗುವುದು ಕಠಿಣವಾಗಬಹುದು. ಈ ಸಂದರ್ಭದಲ್ಲಿ ಮಾನಸಿಕ ಸ್ಥೈರ್ಯ ಕಾಪಾಡಿಕೊಳ್ಳುವುದು ಪ್ರಮುಖವಾಗುತ್ತದೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

ಸ್ವಲ್ಪ ಸಮಯವಾಕಾಶ ನೀಡಬೇಕು:

ಕುಲ್ದೀಪ್​ಗೆ ಬೇಗನೆ ವಿಕೆಟ್​ ಉರುಳಿಸಿ ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯವಿದೆ. ಆದರೆ ಅವರಿಗೆ ಸ್ಥಿರತೆ ಕಾಪಾಡಿಕೊಳ್ಳಲು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಬಹುದು. ಮ್ಯಾನೇಜ್​ಮೆಂಟ್​ಗೆ ನನ್ನ ಏಕೈಕ ಸಲಹೆಯೆಂದರೆ ಆತನ ಹಿಂದಿನ ಪ್ರದರ್ಶನವನ್ನು ಪರಿಗಣಿಸಿ ಹೆಚ್ಚಿನ ಅವಕಾಶ ನೀಡಬೇಕು. ಆತನಿಗೆ ಸಾಕಷ್ಟು ಸಮಯ ನೀಡಿಡುವುದರೊಂದಿಗೆ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಬೇಕು. ಆತ ಭಾರತಕ್ಕಾಗಿ ಭವಿಷ್ಯದಲ್ಲಿ ಉತ್ತಮ ಸೇವೆ ನೀಡಬಲ್ಲ ಆಟಗಾರ ಎಂದು 700ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದಿರುವ ಲೆಗ್​ ಸ್ಪಿನ್ನರ್ ಹೇಳಿದ್ದಾರೆ.

ಇದನ್ನೂ ಓದಿ:ವಿಂಡೀಸ್​ ವಿರುದ್ಧದ ಏಕದಿನ, ಟಿ-20 ಸರಣಿಗೆ ಭಾರತ ತಂಡ ಪ್ರಕಟ.. ಕೆಲವು ಹೊಸಬರಿಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.