ETV Bharat / sports

ಇಂಡಿಯಾ vs​ ಪಾಕಿಸ್ತಾನ ಟಿ20 ವಿಶ್ವಕಪ್​: ಪಂದ್ಯದ ಎಲ್ಲ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್​! - ಐಸಿಸಿ ಟಿ20 ವಿಶ್ವಕಪ್​​ನಲ್ಲಿ ಭಾರತ ಪಾಕಿಸ್ತಾನ

ಐಸಿಸಿ ಟಿ20 ವಿಶ್ವಕಪ್​​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಪಂದ್ಯದ ಎಲ್ಲ ಟಿಕೆಟ್​​ಗಳು ಸೋಲ್ಡ್ ಔಟ್​ ಆಗಿವೆ.

Tickets For India vs Pakistan Clash
Tickets For India vs Pakistan Clash
author img

By

Published : Sep 15, 2022, 11:50 AM IST

Updated : Sep 15, 2022, 11:59 AM IST

ಮೆಲ್ಬೋರ್ನ್​​(ಆಸ್ಟ್ರೇಲಿಯಾ): ಅಕ್ಟೋಬರ್​​ 16 ರಿಂದ ಟಿ20 ವಿಶ್ವಕಪ್​ ಟೂರ್ನಮೆಂಟ್ ಅರಂಭಗೊಳ್ಳಲಿದೆ. ಈ ಮಹಾಟೂರ್ನಿಯಲ್ಲಿ ಅಕ್ಟೋಬರ್​​​ 23 ರಂದು ಸಾಂಪ್ರದಾಯಿಕ ಬದ್ಧ ಎದುರಾಳಿ ತಂಡಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯ ವೀಕ್ಷಣೆಗೆ ಕೋಟ್ಯಂತರ ಜನರು ಕಾತುರದಿಂದ ಕಾಯ್ತಿದ್ದು, ಎಲ್ಲ ಟಿಕೆಟ್‌ಗಳನ್ನು ಖರೀದಿಸಿದ್ದಾರೆ.

ಉಭಯ ತಂಡಗಳ ಮಧ್ಯೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​​ನಲ್ಲಿ ಪಂದ್ಯ ನಡೆಯಲಿದೆ. ಕ್ರಿಕೆಟ್​ ಆಸ್ಟ್ರೇಲಿಯಾ ನೀಡಿರುವ ಮಾಹಿತಿಯಂತೆ, ಇಲ್ಲಿಯವರೆಗೆ ಎಲ್ಲ ಪಂದ್ಯಗಳ ವೀಕ್ಷಣೆಗೋಸ್ಕರ 5 ಲಕ್ಷಕ್ಕೂ ಅಧಿಕ ಟಿಕೆಟ್​​ಗಳು ಮಾರಾಟಗೊಂಡಿವೆ. 82 ರಾಷ್ಟ್ರದ ಕ್ರಿಕೆಟ್ ಪ್ರೇಮಿಗಳು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​​ನಲ್ಲಿ 16 ತಂಡಗಳು ಸೆಣಸಾಟ ನಡೆಸಲಿವೆ. ನವೆಂಬರ್​​ 13ರಂದು ನಡೆಯಲಿರುವ ಫೈನಲ್​ ಪಂದ್ಯಕ್ಕಾಗಿ ಮುಂಗಡವಾಗಿ 86,174 ಜನರು ಟಿಕೆಟ್ ಬುಕ್​ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ನಡುವಿನ ಪಂದ್ಯದ ಟಿಕೆಟ್‌ಗಳೂ ಸಹ ಸೋಲ್ಡ್ ಔಟ್​ ಆಗಿವೆ. ಉಳಿದ ಪಂದ್ಯಗಳ ಕೆಲ ಟಿಕೆಟ್​ಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಟೆಸ್ಟ್‌, ಏಕದಿನ ಕ್ರಿಕೆಟ್‌ ಸಲುವಾಗಿ ಕೊಹ್ಲಿ ಟಿ20 ಗೆ ವಿದಾಯ ಹೇಳುವುದು ಸೂಕ್ತ: ಅಖ್ತರ್

ಅಕ್ಟೋಬರ್​​ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಎರಡು ಅರ್ಹತಾ ತಂಡಗಳು ಗ್ರೂಪ್​ ಬಿಯಲ್ಲಿ ಇವೆ. ಅಕ್ಟೋಬರ್​ 23ರಂದು ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಸೆಣಸಾಡಲಿವೆ. ನವೆಂಬರ್​​ 13ರಂದು ಫೈನಲ್ ಪಂದ್ಯ ನಡೆಯಲಿದೆ.

Last Updated : Sep 15, 2022, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.