ಚೆನ್ನೈ: ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಿಧಾನಗತಿ ಆಟ ಪ್ರದರ್ಶನ ತೋರಿದ ಹೈದರಾಬಾದ್ ತಂಡದ ಮನೀಶ್ ಪಾಂಡೆಯನ್ನು ಭಾರತದ ಮಾಜಿ ವೇಗದ ಬೌಲರ್ ಅಶಿಶ್ ನೆಹ್ರಾ ಕಟುವಾಗಿ ಟೀಕಿಸಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಕೊರತೆಯಿಂದಲೇ ಅವರು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆಂದು ತಿಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದರೂ ಕೆಕೆಆರ್ ವಿರುದ್ಧ ಗೆಲ್ಲಿಸಲು ವಿಫಲವಾಗಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದ ಮನೀಶ್ ಪಾಂಡೆ, ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ 39 ಎಸೆತಗಳಲ್ಲಿ 38 ರನ್ಗಳಿಸಿದ್ದರು. ಅವರು ನಾಯಕ ವಾರ್ನರ್ ಜೊತೆ ಅದ್ಭುತ ಜೊತೆಯಾಟ ನಡೆಸಿದರೂ ನಂತರ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿ 6 ರನ್ಗಳ ರೋಚಕ ಸೋಲಿಗೆ ಪ್ರಮುಖ ಕಾರಣರಾಗಿದ್ದರು.
ಈ ಕುರಿತು ಕಿಡಿಕಾರಿರುವ ಆಶಿಷ್ ನೆಹ್ರಾ, ಮನೀಶ್ ಪಾಂಡೆ ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ಮೈಗೂಡಿಸಿಕೊಂಡಿಲ್ಲ. ಈ ಕಾರಣದಿಂದಲೇ ಅವರು ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳಲಿಲ್ಲ, ಇದೀಗ ರಾಷ್ಟ್ರೀಯ ತಂಡದಿಂದಲೂ ಹೊರಬಿದ್ದಿದ್ದಾರೆ ಎಂದು ಕ್ರಿಕ್ಬಜ್ ಸಂವಾದದ ವೇಳೆ ತಿಳಿಸಿದ್ದಾರೆ.
ಇದನ್ನು ಓದಿ:ಇಂತಹ ಆಟಗಾರರಿಂದ ತಂಡಕ್ಕೆ ಹಿನ್ನಡೆ: ಪಾಂಡೆ ಆಟ ಪರೋಕ್ಷವಾಗಿ ಟೀಕಿಸಿದ ಸೆಹ್ವಾಗ್
" ಮನೀಶ್ ಪಾಂಡೆ ಭಾರತ ತಂಡದಲ್ಲಿ ಒಳಗೆ ಮತ್ತು ಹೊರಗೆ ಉಳಿದುಕೊಳ್ಳಲು ಇದೇ ಪ್ರಮುಖ ಕಾರಣ. ತುಂಬಾ ಹಿಂದೆಯೇ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ, ಇವರ ನಂತರ ಬಂದಂತಹ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಎಲ್ಲರಿಗೂ ಮನೀಶ್‌ರನ್ನು ಮೀರಿ ಮುಂದಕ್ಕೆ ಸಾಗುತ್ತಿದ್ದಾರೆ"
ಅವರ ಆಟದಲ್ಲಿನ ಭಿನ್ನತೆ. ಇವರೆಲ್ಲಾ ಒತ್ತಡವನ್ನು ಮನೀಶ್ ಗಿಂತ ಚೆನ್ನಾಗಿ ನಿಭಾಯಿಸುತ್ತಾರೆ ಮತ್ತು ಅಂತಾ ಸಂದರ್ಭಣದಲ್ಲಿ ಮನೀಶ್‌ಗಿಂತ ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ. ಇದೇ ಕಾರಣಕ್ಕೆ ಮನೀಶ್ ಪಾಂಡೆ ಹಿಂದಕ್ಕೆ ಉಳಿದಿದ್ದಾರೆ" ಎಂದಿದ್ದಾರೆ ಆಶಿಶ್ ನೆಹ್ರಾ.
ಏಕೆಂದರೆ ಅವರೆಲ್ಲರ ಆಟ ಪಾಂಡೆಗಿಂತ ವಿಭಿನ್ನವಾಗಿದೆ ಮತ್ತು ಅವರೆಲ್ಲರೂ ಒತ್ತಡದ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ಪಾಂಡೆಗಿಂತ ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ. ಇದೇ ಕಾರಣ ಪಾಂಡೆ ಆ ಆಟಗಾರರಿಗಿಂತ ಹಿಂದೆ ಬಿದ್ದಿದ್ದಾರೆ" ಎಂದು ನೆಹ್ರಾ ಪಾಂಡೆ ವೈಫಲ್ಯಕ್ಕೆ ಕಾರಣ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೊಬ್ಬ ಮಾಜಿ ಆಟಗಾರ ಅಜಯ್ ಜಡೇಜಾ, ನನ್ನ ಪ್ರಕಾರ ಮನೀಶ್ ಪಾಂಡೆ ಮುಂದಿನ ಪಂದ್ಯಗಳಲ್ಲಿ ಹೈದರಾಬಾದ್ ತಂಡದ 11ರ ಬಳಗದಲ್ಲಿ ಆಡುವುದಿಲ್ಲ ಎಂದು ಭಾವಿಸಿದ್ದೇನೆ. ತಂಡದಲ್ಲಿ ಕೆಲವು ಬದಲಾವಣೆ ಅಗತ್ಯವಿದೆ. ವಿಲಿಯಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಐಪಿಎಲ್ 2021: ಕೊನೆಯ ಘಳಿಗೆಯಲ್ಲಿ ಶಹ್ಬಾಜ್ ಕಮಾಲ್... ಹೈದರಾಬಾದ್ ವಿರುದ್ಧ ಆರ್ಸಿಬಿಗೆ 6 ರನ್ಗಳ ರೋಚಕ ಜಯ!