ETV Bharat / sports

ಆಸ್ಟ್ರೇಲಿಯಾಕ್ಕೆ ಡೇವಿಡ್​ ವಾರ್ನರ್​ ಇಂಪ್ಯಾಕ್ಟ್​ ಪ್ಲೇಯರ್​​: ವಿರಾಟ್​ ಕೊಹ್ಲಿ

ಕಳೆದ ಎರಡು ವರ್ಷಗಳಿಂದ ವಾರ್ನರ್​ ಫಾರ್ಮ್​ನಲ್ಲಿರದಿದ್ದರೂ ವಿರಾಟ್​ ಕೊಹ್ಲಿ ಅವರನ್ನು ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನ ಇಂಪ್ಯಾಕ್ಟ್​ ಪ್ಲೇಯರ್​ ಎಂದು ಕರೆದಿದ್ದಾರೆ.

This is how Virat Kohli praises David Warner ahead of WTC final
ಆಸ್ಟ್ರೇಲಿಯಾಕ್ಕೆ ಡೇವಿಡ್​ ವಾರ್ನರ್​ ಇಂಪ್ಯಾಕ್ಟ್​ ಪ್ಲೇಯರ್​​: ವಿರಾಟ್​ ಕೊಹ್ಲಿ
author img

By

Published : Jun 7, 2023, 1:51 PM IST

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನ ಫೈನಲ್​ ಪಂದ್ಯ ಇಂದಿನಿಂದ ಆರಂಭವಾಗಿ ಐದು ದಿನಗಳ ಕಾಲ ನಡೆಯಲಿದೆ. ಈ ಪಂದ್ಯಕ್ಕೆ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸಂಪೂರ್ಣ ಸಿದ್ಧತೆ ನಡೆಸಿಕೊಂಡಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೂ ಮುನ್ನ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಸ್ಟ್ರೇಲಿಯಾಕ್ಕೆ "ಇಂಪ್ಯಾಕ್ಟ್ ಪ್ಲೇಯರ್" ಎಂದು ಕರೆದಿದ್ದಾರೆ.

ಐಸಿಸಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ವಾರ್ನರ್ ಕ್ರೀಸ್​ನಲ್ಲಿದ್ದಾಗ ಅವರು ಹೆಚ್ಚಿನ ತಪ್ಪುಗಳನ್ನು ಮಾಡದ ಕಾರಣ ಅವರು ರನ್​ ಗಳಿಸುವುದನ್ನು ತಡೆಯುವುದು ಕಷ್ಟ. ಟೆಸ್ಟ್​ ಮತ್ತು ಪ್ರಮುಖ ಪಂದ್ಯದಲ್ಲಿ ಡೇವಿಡ್ ವಾರ್ನರ್ ಪ್ರಭಾವ ಬೀರುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ವಿರಾಟ್​ ವ್ಯಕ್ತಪಡಿಸಿದ್ದಾರೆ.

"ಆಸ್ಟ್ರೇಲಿಯಾಕ್ಕೆ ಡೇವಿಡ್​ ವಾರ್ನರ್​ ಇಂಪ್ಯಾಕ್ಟ್​ ಪ್ಲೇಯರ್. ಡೇವಿಡ್ ಕ್ರೀಸ್​ಗೆ ಬಂದಾಗ ಅವರು ನಮ್ಮ ಕೈಯಿಂದ ಆಟವನ್ನು ಕಸಿದುಕೊಳ್ಳುತ್ತಾರೆ. ಅವರನ್ನು ಆದಷ್ಟು ಬೇಗ ಹೊರಗೆಕೂರಿಸಲು ನಾವು ಬಯಸುತ್ತೇವೆ, ಇಲ್ಲದಿದ್ದರೆ ವಾರ್ನರ್ ಭಾರತವನ್ನು ಕಾಡುವುದರಲ್ಲಿ ಅನುಮಾನವೇ ಇಲ್ಲ. ಅವರ ಬ್ಯಾಟ್​ನಿಂದ ಫೋರ್​ಗಳು ಬರಲಾರಂಭವಾದರೆ ನಿಯಂತ್ರಿಸುವುದು ಕಷ್ಟವಾಗಲಿದೆ. ಪಿಚ್​ಗೆ ಸೆಟ್​ ಆದ ನಂತರ ಅವರು ಹೆಚ್ಚಿನ ತಪ್ಪುಗಳನ್ನು ಮಾಡುವುದಿಲ್ಲ" ಎಂದು ವಿರಾಟ್​ ಹೇಳಿದ್ದಾರೆ.

"ವಾರ್ನರ್​ ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಅದ್ಭುತ ಫಾರ್ಮ್​ ಪ್ರದರ್ಶಿಸಿದ್ದಾರೆ. ಅವರು ತಂಡದ ಕೀ ಆಟಗಾರ ಅವರ ಇತಿಹಾಸದಲ್ಲಿ ಆಸಿಸ್​ಗೆ ಆಡಿರುವ ಉತ್ತಮ ಇನ್ನಿಂಗ್ಸ್​ಗಳ ಪಟ್ಟಿಯೇ ಇದೆ. ಭಾರತಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಪ್ರಬಲ ಎದುರಾಳಿ ಬ್ಯಾಟರ್​ ವಾರ್ನರ್​ ಆಗುವುದರಲ್ಲಿ ಅನುಮಾನವೇ ಇಲ್ಲ. ಆತನನ್ನು ಬೇಗನೆ ಔಟ್​ ಮಾಡಲು ನಮ್ಮ ಬೌಲರ್​​ಗಳು ಶ್ರಮಿಸಬೇಕಾಗುತ್ತದೆ" ಎಂದಿದ್ದಾರೆ.

36 ವರ್ಷದ ವಾರ್ನರ್​ 2019 ರ ಆಶಸ್ ಪ್ರವಾಸದ ಐದು ಟೆಸ್ಟ್​ ಪಂದ್ಯದಲ್ಲಿ 9.5 ಸರಾಸರಿಯಲ್ಲಿ ಕೇವಲ 95 ರನ್​ ಗಳಿಸಿದ್ದಾರೆ. ಕಳೆದ ಎರಡು ವರ್ಷದಲ್ಲಿ ಅವರ ಬ್ಯಾಟ್​ನಿಂದ ಕೇವಲ 1 ದ್ವಿಶತಕ ಮತ್ತು ಶತಕ ದಾಖಲಾಗಿದೆ. ಬಾಕ್ಸಿಂಗ್ ​ಡೇ ಟೆಸ್ಟ್​ನಲ್ಲಿ ಅವರು ಗಳಿಸಿದ ದ್ವಿಶತಕ ಹೇಳಿಕೊಳ್ಳುವಂತಹ ಒಂದು ಇನ್ನಿಂಗ್ಸ್​ ಆಗಿದೆ. ಅದು ಬಿಟ್ಟರೆ 32 ಇನ್ನಿಂಗ್ಸ್​ನಲ್ಲಿ 15 ರಿಂದ 18 ರ ಒಳಗೆ ವಿಕೆಟ್ ಕೊಟ್ಟಿದ್ದಾರೆ. ಇದರಿಂದ ಅವರ ಫಾರ್ಮ್​ ಬಗ್ಗೆ ಆಸಿಸ್​ನಲ್ಲಿ ಟೀಕೆಗೂ ಒಳಗಾಗಿದ್ದಾರೆ.

ವಾರ್ನರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ 14 ಪಂದ್ಯಗಳಲ್ಲಿ 516 ರನ್ ಗಳಿಸಿದರು. ಅವರು ಈ ಋತುವಿನಲ್ಲಿ 36.86 ರ ಸರಾಸರಿ ಮತ್ತು 131.63 ರ ಸ್ಟ್ರೈಕ್ ರೇಟ್ ಹೊಂದಿದ್ದರು. ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಆಗಿದ್ದಾರೆ. ಐಪಿಎಲ್​ ಪ್ರದರ್ಶನವನ್ನು ಬೆಸ್ಟ್​ ಎಂದು ಪರಿಗಣಿಸುವಂತಿಲ್ಲದಿದ್ದರೂ, ಅವರಿಗೆ ಐಪಿಎಲ್​ ಭರವಸೆಯನ್ನಂತೂ ನೀಡಲಿದೆ.

ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್.

ಸ್ಟ್ಯಾಂಡ್-ಬೈ ಆಟಗಾರರು: ಸೂರ್ಯಕುಮಾರ್ ಯಾದವ್, ಮುಖೇಶ್ ಕುಮಾರ್ ಮತ್ತು ಯಶಸ್ವಿ ಜೈಸ್ವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.