ಮುಂಬೈ: ವಿಶ್ವದ ಪ್ರಸಿದ್ಧ ಕ್ರೀಡಾಪಟುಗಳ ಸಾಲಿನಲ್ಲಿ ಟಾಪ್ 10ರಲ್ಲಿ ಕಾಣಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅವರ ಎಂದೂ ನೋಡಿರದಂತಹ ಬಾಲ್ಯ ದಿನಗಳಲ್ಲಿ ಕ್ರಿಕೆಟ್ ಆಡುವ ಪೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ರಾರಾಜಿಸುತ್ತಿವೆ.
2008ರಲ್ಲಿ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟ ಕೊಹ್ಲಿ, ಆ ನಂತರ ಭಾರತ ಕ್ರಿಕೆಟ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದರು. ಮೂರು ಮಾದರಿಯಲ್ಲಿ ಸುಮಾರು 22 ಸಾವಿರಕ್ಕೂ ಹೆಚ್ಚು ರನ್ಗಳಿಸಿರುವ ವಿರಾಟ್ ಭಾರತ ಯಶಸ್ವಿ ನಾಯಕ ಕೂಡ ಆಗಿದ್ದಾರೆ. 70 ಶತಕ 115 ಅರ್ಧಶತಕ ಸಿಡಿಸಿರುವ ಕೊಹ್ಲಿ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಇದನ್ನು ಓದಿ:ಪಾಸ್ ಇಲ್ಲದೇ ಪ್ರಯಾಣಿಸುತ್ತಿದ್ದ ಪೃಥ್ವಿ ಶಾಗೆ ತಡೆ ಹಾಕಿದ ಪೊಲೀಸರು
ಕೊಹ್ಲಿ ಇಂದು ಸಾಮಾಜಿಕ ಜಾಲಾತಾಣದಲ್ಲಿ ಸದಾ ಚಟುವಟಿಕೆಯಿಂದ ಇರುವ ಹಾಗೂ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತದ ಗಣ್ಯವ್ಯಕ್ತಿಯಾಗಿದ್ದಾರೆ. ಮೈದಾನದಲ್ಲಿ ಮತ್ತು ಮೈದಾನದವರೆಗಾದರೂ ಸಾಮಾಜಿಕ ಜಾಲಾತಾಣದಲ್ಲಿ ಸದಾ ಮಿನುಗುತ್ತಿರುತ್ತಾರೆ. ಇದೀಗ ಅವರ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುವ ಫೋಟೋಗಳು ಇಂಟರ್ನೆಟ್ ಬ್ರೇಕ್ ಮಾಡುತ್ತಿವೆ.
ಈ ಫೋಟೋಗಳನ್ನು ಕೊಹ್ಲಿ ಶಾಲಾ ದಿನಗಳ ಸಹ ಆಟಗಾರ ಶಲಾಜ್ ಸೋಂಧಿ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ.