ETV Bharat / sports

Tamim Iqbal: ಏಷ್ಯಾಕಪ್​, ವಿಶ್ವಕಪ್​ಗೂ ಮುನ್ನ ಮಹತ್ವದ ನಿರ್ಧಾರ ಪ್ರಕಟಿಸಿದ ಬಾಂಗ್ಲಾ ಕ್ರಿಕೆಟ್‌ ನಾಯಕ - ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ

Tamim Iqbal: ಬೆನ್ನು ನೋವಿನ ಕಾರಣ ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್​ ತಂಡದ ನಾಯಕತ್ವದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ.

Tamim Iqbal
ತಮೀಮ್ ಇಕ್ಬಾಲ್​
author img

By

Published : Aug 4, 2023, 8:38 PM IST

ಢಾಕಾ (ಬಾಂಗ್ಲಾದೇಶ): 2023 ರ ಪುರುಷರ ಏಕದಿನ ವಿಶ್ವಕಪ್‌ಗೆ ಕೇವಲ ಎರಡು ತಿಂಗಳು ಬಾಕಿ ಉಳಿದಿರುವಾಗ ಅನುಭವಿ ಎಡಗೈ ಓಪನರ್ ತಮೀಮ್ ಇಕ್ಬಾಲ್ ಬಾಂಗ್ಲಾದೇಶದ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಬೆನ್ನುನೋವಿನ ಕಾರಣ ಮುಂಬರುವ ಏಷ್ಯಾಕಪ್‌ನಿಂದ ಅವರು ಹೊರಗುಳಿಯಲಿದ್ದಾರೆ.

ತಮೀಮ್ ಇಕ್ಬಾಲ್ ಜುಲೈ 6ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗಿನ ಮಾತುಕತೆಯ ನಂತರ ಮತ್ತೆ ನಿರ್ಧಾರ ಹಿಂಪಡೆದಿದ್ದರು. ಭಾರತದಲ್ಲಿ 2023ರ ಅಕ್ಟೋಬರ್​​ 05ರಿಂದ ನವೆಂಬರ್​ 19ರ ವರೆಗೆ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಬಾಂಗ್ಲಾದೇಶವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ ಎಂದು ತಮೀಮ್​ ತಿಳಿಸಿದ್ದಾರೆ.

ಆಗಸ್ಟ್ 31ರಿಂದ ಸೆಪ್ಟೆಂಬರ್ 17 ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್​ ವೇಳೆ ಬೆನ್ನು ನೋವಿನ ಕಾರಣ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಏಷ್ಯಾಕಪ್​ ನಂತರ ಸೆಪ್ಟೆಂಬರ್ 21ರಿಂದ ಬಾಂಗ್ಲಾದಲ್ಲಿ ನಡೆಯಲಿರುವ ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ಗಾಯದಿಂದ ಚೇತರಿಸಿಕೊಂಡರೆ ಆಡುತ್ತಾರೆ ಎನ್ನಲಾಗಿದೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಾಂಗ್ಲಾ ನಾಯಕ ತಮೀಮ್​, "ಗಾಯದ ಸಮಸ್ಯೆಯಿಂದಾಗ ನಾನು ನಾಯಕತ್ವದಿಂದ ಹಿಂದೆ ಸರಿಯುತ್ತಿದ್ದೇನೆ. ನಾನು ಇಂಜೆಕ್ಷನ್ ತೆಗೆದುಕೊಂಡಿದ್ದೇನೆ (ಜುಲೈ 28 ರಂದು) ಆದರೆ ಸಂಪೂರ್ಣ ಚೇತರಿಕೆ ಕಂಡಿಲ್ಲ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಜೊತೆ ಸಮಸ್ಯೆಯ ಬಗ್ಗೆ ಹೇಳಿದ್ದೇನೆ. ಆದ್ದರಿಂದ ಅದನ್ನು ಗಮನದಲ್ಲಿಟ್ಟುಕೊಂಡು, ಕೆಳಗಿಳಿಯುವುದು ಅತ್ಯುತ್ತಮ ನಿರ್ಧಾರವಾಗಿದೆ. ಅವಕಾಶ ಬಂದಾಗಲೆಲ್ಲಾ ಆಟಗಾರನಾಗಿ ನನ್ನ ಅತ್ಯುತ್ತಮವಾದುದನ್ನು ನೀಡಲು ಬಯಸುತ್ತೇನೆ. ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಅರ್ಥಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

ಜುಲೈ 28 ರಂದು, ತಮೀಮ್ ಇಕ್ಬಾಲ್ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬೆನ್ನುಮೂಳೆಯ ತಜ್ಞರನ್ನು ಭೇಟಿ ಮಾಡಿದ್ದಾರೆ. ಇಕ್ಬಾಲ್​ ಹಿರಿಯ ವೈದ್ಯ ಡಾ.ದೇಬಾಶಿಸ್ ಚೌಧರಿ ಅವರೊಂದಿಗೆ ಚಿಕಿತ್ಸೆಗಾಗಿ ಪ್ರಯಾಣಿಸಿದ್ದರ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೆ (ಬಿಸಿಬಿ) ತಿಳಿಸಿದೆ. "ತಮೀಮ್ ತನ್ನ ನಡೆಯುತ್ತಿರುವ ಬೆನ್ನುನೋವಿಗೆ ಬೆನ್ನುಮೂಳೆಯ ತಜ್ಞರನ್ನು ಸಂಪರ್ಕಿಸಿದರು. ಅವರು ಮುಂದಿನ ದಿನಗಳಲ್ಲಿ ವೀಕ್ಷಣೆಯಲ್ಲಿರುತ್ತಾರೆ ಮತ್ತು ವೈದ್ಯಕೀಯ ಕಾರ್ಯವಿಧಾನದ ಫಲಿತಾಂಶ ಮೌಲ್ಯಮಾಪನ ಮಾಡಲಾಗುತ್ತದೆ" ಎಂದು ಚೌಧರಿ ತಿಳಿಸಿದ್ದಾರೆ.

ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ಅಧ್ಯಕ್ಷ ಜಲಾಲ್ ಯೂನಸ್ ಸುದ್ದಿಗಾರರೊಂದಿಗೆ ಮಾತನಾಡಿ, "ತಮೀಮ್​ ಅವರ ಬೆನ್ನಿನ L4 ಮತ್ತು L5 ಡಿಸ್ಕ್‌ಗಳಿಂದ ನೋವು ಉಂಟಾಗುತ್ತಿದೆ. ಅವರಿಗೆ ಜುಲೈ 28 ರಂದು ಎರಡು ಚುಚ್ಚುಮದ್ದು ನೀಡಲಾಗಿದ್ದು, ಇದರಿಂದ ಅವರು ನೋವಿನಿಂದ ಗುಣಮುಖರಾಗುತ್ತಿದ್ದಾರೆ. ಆಗಸ್ಟ್ 11 ರವರೆಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಅವರಿಗೆ ಸಲಹೆ ನೀಡಲಾಗಿದೆ, ನಂತರ ಅವರು ತಮ್ಮ ಪುನರ್ವಸತಿಯನ್ನು ಪುನರಾರಂಭಿಸುತ್ತಾರೆ. ತಂಡ ಅಗಸ್ಟ್​ 26 ರಂದು ಏಷ್ಯಾಕಪ್​ಗೆ ತೆರಳುವುದರಿಂದ ತಂಡದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗುತ್ತದೆ" ಎಂದಿದ್ದಾರೆ.

ಬಾಂಗ್ಲಾದೇಶವು ತನ್ನ 2023 ರ ಪುರುಷರ ಏಕದಿನ ವಿಶ್ವಕಪ್​ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಅಕ್ಟೋಬರ್ 7 ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಡಲಿದೆ, ನಂತರ ಅಕ್ಟೋಬರ್ 10 ರಂದು ಅದೇ ಸ್ಥಳದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: IND vs WI T20I: ನಿಧಾನಗತಿ ಬೌಲಿಂಗ್​: ಭಾರತ-ವೆಸ್ಟ್ ಇಂಡೀಸ್‌ಗೆ ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.