ಶಾರ್ಜಾ: ಚುಟುಕು ಕ್ರಿಕೆಟ್ನಲ್ಲಿ ಆಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ. ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಸೇರಿದಂತೆ ಒಂದೇ ಓವರ್ನಲ್ಲಿ ಮೂರು ವಿಕೆಟ್ ಪಡೆದ ಮುಜೀಬ್ ತಂಡಕ್ಕೆ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟಿದ್ದಾರೆ.
ಸ್ಕಾಟ್ಲಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡದ ಸ್ಪಿನ್ನರ್ ಮುಜೀಬ್ ರೆಹಮಾನ್ ಐದು ವಿಕೆಟ್ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಐಸಿಸಿ ಟಿ-20 ವಿಶ್ವಕಪ್ನ ಡೆಬ್ಯು ಪಂದ್ಯದಲ್ಲೇ ಐದು ವಿಕೆಟ್ ಪಡೆದುಕೊಂಡಿರುವ ಸಾಧನೆಗೆ ಪಾತ್ರರಾಗಿರುವ ಮುಜೀಬ್ ರೆಹಮಾನ್, ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿರುವ ಮೂರನೇ ಸ್ಪಿನ್ನರ್ ಆಗಿದ್ದಾರೆ.
-
Mujeeb Ur Rahman, you beauty 👌 #T20WorldCup #AFGvSCO pic.twitter.com/sUSo7dbrY2
— T20 World Cup (@T20WorldCup) October 25, 2021 " class="align-text-top noRightClick twitterSection" data="
">Mujeeb Ur Rahman, you beauty 👌 #T20WorldCup #AFGvSCO pic.twitter.com/sUSo7dbrY2
— T20 World Cup (@T20WorldCup) October 25, 2021Mujeeb Ur Rahman, you beauty 👌 #T20WorldCup #AFGvSCO pic.twitter.com/sUSo7dbrY2
— T20 World Cup (@T20WorldCup) October 25, 2021
ವಿಶ್ವಕಪ್ ಇತಿಹಾಸದಲ್ಲೇ ಈಗಾಗಲೇ ಶ್ರೀಲಂಕಾದ ಅಜಂತಾ ಮೆಂಡಿಸ್ 2012ರಲ್ಲಿ ಜಿಂಬಾಬ್ವೆ ವಿರುದ್ಧ 6ವಿಕೆಟ್, ತದನಂತರ 2014ರಲ್ಲಿ ಲಂಕಾದ ರಂಗನ್ ಹೆರಾತ್ ನ್ಯೂಜಿಲ್ಯಾಂಡ್ ವಿರುದ್ಧ 5 ವಿಕೆಟ್ ಪಡೆದುಕೊಂಡಿದ್ದು, ಇದೀಗ ರೆಹಮಾನ್ ಸ್ಕಾಟ್ಲೆಂಡ್ ವಿರುದ್ಧ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಪವರ್ ಫ್ಲೇನಲ್ಲಿ ರೆಹಮಾನ್ ನಾಲ್ಕು ವಿಕೆಟ್ ಪಡೆದುಕೊಂಡಿದ್ದು, ಟಿ-20 ವಿಶ್ವಕಪ್ನಲ್ಲಿ ಆರ್.ಅಶ್ವಿನ್ ನಂತರ ಈ ದಾಖಲೆ ಬರೆದಿರುವ ಎರಡನೇ ಪ್ಲೇಯರ್ ಆಗಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ ಪಂದ್ಯದಲ್ಲಿ ಮುಜ್ಬಿರ್ ಹಾಗೂ ರಾಶೀದ್ ಖಾನ್ ಸೇರಿ ಒಟ್ಟು 9 ವಿಕೆಟ್ ಪಡೆದುಕೊಂಡಿರುವ ಸಾಧನೆ ಮಾಡಿದ್ದಾರೆ.