ETV Bharat / sports

T20 ವಿಶ್ವಕಪ್: ಇಂಗ್ಲೆಂಡ್‌ ವಿರುದ್ಧ ಗೆದ್ದು ಬೀಗಿದ ಐರ್ಲೆಂಡ್‌

ಮಳೆ ಪಂದ್ಯಕ್ಕೆ ಅಡ್ಡಿಯಾದ ಕಾರಣ ಡಿಎಲ್​ಎಸ್​ ನಿಯಮಕ್ಕೆ ಒಳಪಟ್ಟು ಐರ್ಲೆಂಡ್ ಇಂಗ್ಲೆಂಡ್​ ಎದುರು ಐದು ರನ್​ನಿಂದ ಗೆಲುವು ಸಾಧಿಸಿದೆ.

Ireland beat England by 5 runs in rain-curtailed match
ಐದು ರನ್​ಗಳ ಐತಿಹಾಸಿಕ ಗೆಲುವು ಸಾಧಿಸಿದ ಐರ್ಲೆಂಡ್
author img

By

Published : Oct 26, 2022, 2:56 PM IST

ಮೆಲ್ಬರ್ನ್(ಆಸ್ಟ್ರೇಲಿಯಾ): ಟಿ20 ವಿಶ್ವಕಪ್‌ನಲ್ಲಿಂದು ಇಂಗ್ಲೆಂಡ್​ ಎದುರು ಐರ್ಲೆಂಡ್ ಡಿಎಲ್​ಎಸ್ ನಿಯಮದಂತೆ 5 ರನ್​ಗಳ ಗೆಲುವು ಸಾಧಿಸಿತು. ಇಂಗ್ಲೆಂಡ್​ 14.3 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 105 ರನ್​ಗಳಿಸಿತ್ತು. ಈ ಸಂದರ್ಭದಲ್ಲಿ ಮಳೆ ಸುರಿದಿದ್ದು ಪಂದ್ಯವನ್ನು ನಿಲ್ಲಿಸಲಾಗಿದೆ. ಇಷ್ಟೇ ಓವರ್​ ಆಗಿದ್ದಾಗ ಐರ್ಲೆಂಡ್ 125ಕ್ಕೆ 3 ವಿಕೆಟ್​ ಕಳೆದುಕೊಂಡಿತ್ತು.

ಮೊದಲು ಬ್ಯಾಟ್​ ಮಾಡಲು ನಿರ್ಧರಿಸಿದ್ದ ಐರ್ಲೆಂಡ್ ತಂಡ ಆಂಡ್ರ್ಯೂ ಬಾಲ್ಬಿರ್ನಿ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ಗೆ 158 ರನ್​ಗಳ ಗುರಿ ನೀಡಿದೆ. ಈ ಗುರಿ ಬೆನ್ನತ್ತಿದ ಆಂಗ್ಲರಿಗೆ ಆರಂಭಿಕ ಆಘಾತ ಉಂಟಾಯಿತು. ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನಾಯಕ ಬಟ್ಲರ್​ ಸೊನ್ನೆ ಸುತ್ತಿದರು.

ಡೇವಿಡ್​ ಮಲಾನ್​(35) ಮತ್ತು ಹೆನ್ರಿ ಬ್ರೂಕ್ಸ್​(18) ಐರ್ಲೆಂಡ್ ಎದುರು ಕೊಂಚ ಸೆಣಸಾಟ ನಡೆಸಿದರು. ಆರಂಭಿಕ ಅಲೆಕ್ಸ್​ ಹೇಲ್ಸ್ (7)​ ಮತ್ತು ಇಂಗ್ಲೆಂಡ್​ ತಂಡಕ್ಕೆ ಆಸರೆಯಾಗಬೇಕಿದ್ದ ಬ್ಯಾಟರ್​ ಬೆನ್​ ಸ್ಟೋಕ್ಸ್ (6)​ ವೈಫಲ್ಯ ಅನುಭವಿಸಿದರು. ಸರಣಿ ವಿಕೆಟ್​ ಪತನದಿಂದಾಗಿ ಇಂಗ್ಲೆಂಡ್​ನ ರನ್​ ರೇಟ್​ ಕುಸಿತ ಕಾಣುತ್ತಾ ಸಾಗಿತು. ಆರನೇ ಬ್ಯಾಟರ್​ ಮೊಯಿನ್​ ಅಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಇವರಿಗೆ ಸಾಥ್​ ನೀಡಲು ಸ್ಫೋಟಕ ಬ್ಯಾಟರ್​ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಕ್ರೀಸ್‌ಗಿಳಿದರು. ಆದರೆ ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ಮೊಟಕುಗೊಂಡ ಕಾರಣ ಐರ್ಲೆಂಡ್ ಅನಿರೀಕ್ಷಿತ ಗೆಲುವು ಪಡೆಯಿತು.

ಜೋಶುವಾ ಲಿಟಲ್ 2 ವಿಕೆಟ್​ ಮತ್ತು ಬ್ಯಾರಿ ಮೆಕಾರ್ಥಿ, ಫಿಯಾನ್ ಹ್ಯಾಂಡ್ ಮತ್ತು ಜಾರ್ಜ್ ಡಾಕ್ರೆಲ್ ತಲಾ ಒಂದು ವಿಕೆಟ್​ ಪಡೆದರು. ಐರ್ಲೆಂಡ್ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 62ರನ್​ನ ಕೊಡುಗೆ ನೀಡಿದ್ದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: T20 World Cup: ಐರ್ಲೆಂಡ್​ ವಿರುದ್ಧ157 ರನ್​ಗಳ ಸ್ಪರ್ಧಾತ್ಮಕ ಸ್ಕೋರ್​ ಮಾಡಿದ ಇಂಗ್ಲೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.