ದುಬೈ: ಟಿ20 ವಿಶ್ವಕಪ್ ಮೊದಲ ಹೈ ವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿವೆ.
ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಕಳೆದ ಏಕದಿನ ವಿಶ್ವಕಪ್ನಲ್ಲಿ ಅಂದರೆ 2019ರಲ್ಲಿ ಮುಖಾಮುಖಿಯಾಗಿದ್ದ ಇಂಡಿಯಾ ಮತ್ತು ಪಾಕ್ ತಂಡಗಳು ಸುಮಾರು 2 ವರ್ಷಗಳ ನಂತರ ಈಗ ಟಿ-20 ವಿಶ್ವಕಪ್ನಲ್ಲಿ ಮುಖಾಮುಖಿಯಾಗುತ್ತಿವೆ.
ಈವರೆಗೆ ಟಿ-20 ವಿಶ್ವಕಪ್ಗಳಲ್ಲಿ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿದ್ದು, ಐದು ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. 2007ರ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ 2 ಸಲ ಹಾಗೂ 2012, 2014, 2016ರ ಪಂದ್ಯಾವಳಿಯಲ್ಲಿಯೂ ಭಾರತ ಮೇಲುಗೈ ಸಾಧಿಸಿದೆ. ಇಂದಿನ ಪಂದ್ಯಕ್ಕೆ ಈಗಾಗಲೇ ಪಾಕ್ ತಂಡ ಪ್ಲೇಯಿಂಗ್ 12 ಸ್ಕ್ವಾಡ್ ಅನ್ನು ಘೋಷಿಸಿಕೊಂಡಿದೆ.
-
Pakistan's 12 for their #T20WorldCup opener against India.#WeHaveWeWill pic.twitter.com/vC0czmlGNO
— Pakistan Cricket (@TheRealPCB) October 23, 2021 " class="align-text-top noRightClick twitterSection" data="
">Pakistan's 12 for their #T20WorldCup opener against India.#WeHaveWeWill pic.twitter.com/vC0czmlGNO
— Pakistan Cricket (@TheRealPCB) October 23, 2021Pakistan's 12 for their #T20WorldCup opener against India.#WeHaveWeWill pic.twitter.com/vC0czmlGNO
— Pakistan Cricket (@TheRealPCB) October 23, 2021
ಪಾಕಿಸ್ತಾನ ಸ್ಕ್ವಾಡ್: ಬಾಬರ್ ಅಜಮ್ (ನಾಯಕ), ಶಾದಬ್ ಖಾನ್ (ಉಪ ನಾಯಕ) ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಇಮದ್ ವಾಸಿಂ, , ಹಸನ್ ಅಲಿ, ಹೈದರ್ ಅಲಿ, ಹ್ಯಾರಿಸ್ ರೌಫ್, ಮತ್ತು ಶಾಹೀನ್ ಶಾ ಆಫ್ರಿದಿ.