ದುಬೈ: ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಪಾಕಿಸ್ತಾನದ ಬ್ಯಾಟರ್‌ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಭಾರತದ ಸ್ಟಾರ್ ಟಿ20 ಪ್ಲೇಯರ್ ಸೂರ್ಯ ಕುಮಾರ್ ಯಾದವ್ ಅವರ ಸ್ಥಾನ ಕಬಳಿಸಲು ಹಣಾಹಣಿಗೆ ಬಿದ್ದಿದ್ದಾರೆ. ಇಂದು ನವೀಕರಿಸಲಾದ ಶ್ರೇಯಾಂಕ ಪಟ್ಟಿಯಲ್ಲಿ ಪಾಕ್ ಆಟಗಾರರು ಏರಿಕೆ ಕಂಡಿದ್ದಾರೆ.
ಪಾಕ್ ಆಟಗಾರರಿಗೆ ಸೂರ್ಯ ಕುಮಾರ್ ಯಾದವ್(SKY) ಸ್ಥಾನಕ್ಕೇರಲು ಅವಕಾಶವಿದೆ. ಇದಕ್ಕಾಗಿ ಇಬ್ಬರು ಆಟಗಾರರ ನಡುವೆಯೇ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಇದೇ ತಿಂಗಳ 14 ರಿಂದ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಪಾಕಿಸ್ತಾನ 5 ಟಿ20 ಪಂದ್ಯಗಳ ಸರಣಿ ಆಡುತ್ತಿದೆ. ಇದು ಪಾಕ್ ಆಟಗಾರರ ಶ್ರೇಯಾಂಕಕ್ಕೆ ಸಹಕಾರಿಯಾಗಲಿದೆ.
-
A pair of Pakistan superstars are aiming for Suryakumar Yadav's top spot in the @MRFWorldwide ICC Men's T20I Batting Rankings 👀
— ICC (@ICC) April 12, 2023 " class="align-text-top noRightClick twitterSection" data="
Details 👇 https://t.co/m6k3m1A35h
">A pair of Pakistan superstars are aiming for Suryakumar Yadav's top spot in the @MRFWorldwide ICC Men's T20I Batting Rankings 👀
— ICC (@ICC) April 12, 2023
Details 👇 https://t.co/m6k3m1A35hA pair of Pakistan superstars are aiming for Suryakumar Yadav's top spot in the @MRFWorldwide ICC Men's T20I Batting Rankings 👀
— ICC (@ICC) April 12, 2023
Details 👇 https://t.co/m6k3m1A35h
ಸೂರ್ಯ ಕುಮಾರ್ ಯಾದವ್ ಪ್ರಸ್ತುತ 906 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ರಿಜ್ವಾನ್ (811) ಮತ್ತು ಮೂರನೇ ಸ್ಥಾನದಲ್ಲಿ ಬಾಬರ್ (755) ಇದ್ದಾರೆ. ಭಾರತದಲ್ಲಿ ಐಪಿಎಲ್ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವುದರಿಂದ ರಿಜ್ವಾನ್ ಮತ್ತು ಬಾಬರ್ಗೆ ನೆರವಾಗುತ್ತಿದೆ.
ಇತ್ತೀಚೆಗೆ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಸರಣಿಯಲ್ಲಿ ಕಿವೀಸ್ನ ಡೆವೊನ್ ಕಾನ್ವೆ ಅನುಪಸ್ಥಿತಿಯಿಂದಾಗಿ ಬಾಬರ್ ನವೀಕೃತ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಕಾನ್ವೆ ಇಳಿಕೆಯಿಂದ ದಕ್ಷಿಣ ಆಫ್ರಿಕಾದ ಆ್ಯಡಂ ಮಾಕ್ರಮ್ ಕೂಡ ಒಂದು ಸ್ಥಾನದ ಏರಿಕೆ ಕಂಡಿದ್ದಾರೆ. ಕಾನ್ವೆ (745) ಮೂರರಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ: ಕೊನೆಯ ಓವರ್ ಥ್ರಿಲ್ಲರ್ ಗೆದ್ದ ಮುಂಬೈಗೆ ಮೊದಲ ಗೆಲುವಿನ ಸಿಂಚನ: ಡೆಲ್ಲಿಗೆ 4 ನೇ ಸೋಲು
ಸೂರ್ಯ ಕುಮಾರ್ ಯಾದವ್ ಹೊರತಾಗಿ ಟಾಪ್ ಹತ್ತರ ಟಿ20 ರ್ಯಾಂಕಿಂಗ್ನಲ್ಲಿ ಬೇರೆ ಯಾವುದೇ ಆಟಗಾರರಿಲ್ಲ. 15ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (612) ಇದ್ದರೆ, ಲೋಕೇಶ್ ರಾಹುಲ್ (548) 31ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (545) ಮತ್ತು ಶುಭಮನ್ ಗಿಲ್ (542) ಕ್ರಮವಾಗಿ 34 ಮತ್ತು 35ನೇ ಸ್ಥಾನದಲ್ಲಿದ್ದಾರೆ. ಸದ್ಯ ಭಾರತ ತಂಡ ಅಂತಾರಾಷ್ಟ್ರೀ ಟಿ20 ಪಂದ್ಯಗಳನ್ನು ಆಡುತ್ತಿಲ್ಲ. ಮುಂಬರುವ ಟೆಸ್ಟ್ ಚಾಂಪಿಯನ್ ಶಿಪ್ ನಂತರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಒನ್-ಡೇ ಮಾದರಿಯ ಕ್ರಿಕೆಟ್ ಮೇಲೆ ತಂಡ ಹೆಚ್ಚು ಗಮನ ಕೇಂದ್ರೀಕರಿಸಲಿದೆ.
ಬೌಲಿಂಗ್ ಶ್ರೇಯಾಂಕ: ಟಿ20 ಬೌಲಿಂಗ್ ರ್ಯಾಂಕಿಂಗ್ನ ಟಾಪ್ ಟೆನ್ ಸ್ಥಾನದಲ್ಲಿ ಯಾವುದೇ ಭಾರತೀಯ ಬೌಲರ್ಗಳಿಲ್ಲ. 14ನೇ ಸ್ಥಾನದಲ್ಲಿ ಅರ್ಷದೀಪ್ ಸಿಂಗ್ ಇದ್ದರೆ, 18ನೇ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಇದ್ದಾರೆ. ಲಂಕಾ ಬೌಲರ್ ಮಹಿಷ್ ತೀಕ್ಷ್ಣ ನ್ಯೂಜಿಲೆಂಡ್ ಸರಣಿಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಭರ್ಜರಿ ಏರಿಕೆ ಕಂಡಿದ್ದಾರೆ. 13ನೇ ಸ್ಥಾನದಲ್ಲಿದ್ದ ಅವರು 684 ಅಂಕದಿಂದ 5ನೇ ಶ್ರೇಯಾಂಕಕ್ಕೆ ಏರಿದ್ದಾರೆ. ವನಿಂದು ಹಸರಂಗ ಎರಡನೇ ಸ್ಥಾನದಿಂದ 4ಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ: ಧೋನಿ ನಾಯಕತ್ವದಲ್ಲಿ 200ನೇ IPL ಪಂದ್ಯ: ಗೆಲುವಿನ ಉಡುಗೊರೆ ನೀಡುತ್ತೇವೆ- ಜಡೇಜಾ