ETV Bharat / sports

ಮಹಾರಾಜ​ ಟ್ರೋಫಿ ಕ್ರಿಕೆಟ್​ 2022.. ಅಂದು ಬಾಲ್ ಬಾಯ್.. ಇಂದು ಹೊಸ ಬ್ಯಾಟಿಂಗ್ ಬಾಯ್​.. ಎಲ್​ಆರ್​ ಚೇತನ್​ ಯಾರು

ಮಹಾರಾಜ​ ಟ್ರೋಫಿ ಕ್ರಿಕೆಟ್​ 2022 ಪಂದ್ಯಾವಳಿಯಲ್ಲಿ ಕರ್ನಾಟಕದ ಹೊಸ ಹೊಸ ಪ್ರತಿಭೆಗಳು ಹೊರ ಬರುತ್ತಿವೆ. ಅಂದು ಬಾಲ್ ಬಾಯ್ ಆಗಿದ್ದ ಆಟಗಾರರ ಇಂದು ಹೊಸ ಬ್ಯಾಟಿಂಗ್ ಬಾಯ್​ ಆಗಿ ಹೊರ ಹೊಮ್ಮಿದ್ದಾರೆ. ಕ್ರಿಕೆಟಿಗ ಎಲ್​ಆರ್​ ಚೇತನ್​ ಯಾರು ಎಂಬುದು ನೋಡೊಣಾ ಬನ್ನಿ.

super performance by cricketer LR Chetan  maharaja trophy cricket 2022  Cricketer LR chetan century in maharaja trophy cricket  LR Chetan plyer of Bengaluru Blasters team  Who is Cricketer LR Chetan  ಮಹಾರಾಜ್​ ಟ್ರೋಫಿ ಕ್ರಿಕೆಟ್​ 2022  ಎಲ್​ಆರ್​ ಚೇತನ್​ ಯಾರು  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ಬೆಂಗಳೂರು ಬ್ಲಾಸ್ಟರ್ಸ್ ಪರ ಎಲ್​ಆರ್​ ಚೇತನ್​ ಶತಕ  ಕರ್ನಾಟಕ ಪರ ಆಡುವುದೇ ನನ್ನ ಮೊದಲ ಗುರಿ ಎಂದ ಎಲ್​ಆರ್​ ಚೇತನ್​
ಎಲ್​ಆರ್​ ಚೇತನ್​ ಯಾರು
author img

By

Published : Aug 20, 2022, 8:10 AM IST

Updated : Aug 20, 2022, 8:50 AM IST

ಬೆಂಗಳೂರು: ಕ್ರಿಕೆಟ್ ಅನ್ನೋದೇ ಹಾಗೆ.. ಮೈದಾನದಲ್ಲಿ ಒಂದು ಪಂದ್ಯ ಒಂದೊಳ್ಳೆ ಪ್ರದರ್ಶನ ನೀಡೋ ಆಟಗಾರನಿಗೆ ಖ್ಯಾತಿ ತಂದುಕೊಡಬಲ್ಲದು. ಇಂದಿನ ಚುಟುಕು ಕ್ರಿಕೆಟ್ ಯುಗದಲ್ಲಿ ಪ್ರತಿಭೆಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಇದಕ್ಕೆ ನಮ್ಮಲ್ಲೇ ಸ್ಪಷ್ಟ ಉದಾಹರಣೆಯೆಂದರೆ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಪ್ರಸಿಧ್ ಕೃಷ್ಣ ಸೇರಿದಂತೆ ಅನೇಕ ಆಟಗಾರರ ಪ್ರದರ್ಶನ. ಇವರೆಲ್ಲರೂ ಕರ್ನಾಟಕದಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಖ್ಯಾತಿಗಳಿಸಿರುವ ಆಟಗಾರರು. ಸದ್ಯ ಈ ಸರತಿ ಸಾಲಿನಲ್ಲಿ ಎಲ್​ಆರ್ ಚೇತನ್ ಎಂಬ ಆಟಗಾರನೂ ಒಬ್ಬ..

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿ ಕ್ರಿಕೆಟ್​ 2022 ಪಂದ್ಯಾವಳಿಯಲ್ಲಿ ತಮ್ಮ ಅದ್ಬುತ ಪ್ರದರ್ಶನದ ಮೂಲಕ ಎಲ್​ಆರ್​ ಚೇತನ್ ಮನೆ ಮಾತಾಗಿದ್ದಾರೆ. ತಮ್ಮ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮೂಲಕ ಎಲ್​ಆರ್​ ಚೇತನ್​ ಮುಂಬರುವ ಐಪಿಎಲ್ ಟೂರ್ನಿಯಲ್ಲಿಯೂ ಭಾರಿ ಮೊತ್ತಕ್ಕೆ ಬಿಕರಿಯಾಗುವ ಮುನ್ಸೂಚನೆ ನೀಡಿದ್ದಾರೆ.

ಎಲ್​ಆರ್ ಚೇತನ್ ಯಾರು?: 22 ವರ್ಷದ ಚೇತನ್ ಮೈಸೂರಿನ ಕೆ.ಆರ್ ನಗರದವರು. ತಂದೆ ರೇವಣ್ಣ ಕೆಎಸ್ಆರ್​ಪಿ ಹೆಡ್ ಕಾನ್ಸ್‌ಟೇಬಲ್. ಮಹಾರಾಜ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ಚೇತನ್ 2017 - 18ರ ಕೆಪಿಎಲ್ ಟೂರ್ನಿ ಸಂದರ್ಭದಲ್ಲಿ ಬೌಂಡರಿ ಸಮೀಪ ನಿಲ್ಲುತ್ತಿದ್ದ ಬಾಲ್ ಬಾಯ್ ಎಂದರೆ ನೀವು ನಂಬಲೇಬೇಕು. ಅಂದಿನಿಂದಲೂ ಕ್ರಿಕೆಟ್​​​ ಮೈಗೂಡಿಸಿಕೊಂಡು ಅಭ್ಯಸಿಸುತ್ತಾ ಬಂದ ಚೇತನ್​ಗೆ ಪೋಷಕರಿಂದ ಸಿಕ್ಕ ಬೆಂಬಲದ ಫಲವಾಗಿ 2019ರಲ್ಲಿ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆಯಾದರು.

ಮೈಸೂರು ತಂಡದಲ್ಲಿ ಸ್ಥಾನ ಸಿಕ್ಕರೂ ಎಲ್​ಆರ್​ ಚೇತನ್​ಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿಯ ಮಹಾರಾಜ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ ಕಣಕ್ಕಿಳಿದಿರುವ ಚೇತನ್ ಅನುಭವಿ ಮಯಾಂಕ್ ಅಗರ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸುವ ಅವಕಾಶವನ್ನ ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡಿದ್ದಾರೆ.

ಇದುವರೆಗೆ 8 ಪಂದ್ಯಗಳಿಂದ 1 ಶತಕ ಹಾಗೂ 1 ಅರ್ಧಶತಕ ಸಿಡಿಸಿರುವ ಎಲ್​ಆರ್​ ಚೇತನ್​ ಒಟ್ಟು 247 ರನ್ ಕಲೆ ಹಾಕಿದ್ದಾರೆ. ಚೇತನ್ ಬ್ಯಾಟಿಂಗ್ ವೈಖರಿ ಕೆರಿಬಿಯನ್ ದೈತ್ಯ ಲೆಂಡಲ್ ಸಿಮೋನ್ಸ್ ಆಟವನ್ನ ನೆನಪಿಸುತ್ತಿರುವುದು ಸುಳ್ಳಲ್ಲ. ಚೇತನ್ ಅದ್ಬುತ ಪ್ರದರ್ಶನದ ಮೂಲಕ ಮುಂಬರುವ ಐಪಿಎಲ್ ಮೇಲೆ ಕಣ್ಣಿಟ್ಟಿದ್ದು, ಕರ್ನಾಟಕದ ಮತ್ತೊಂದು ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಹಾರೈಸೋಣ..

ಬೆಂಗಳೂರು ಬ್ಲಾಸ್ಟರ್ಸ್ ಪರ ಎಲ್​ಆರ್​ ಚೇತನ್​ ಶತಕ: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕ್ರಿಕೆಟ್​ 2022 ಟೂರ್ನಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಪರ 55 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದ ಎಲ್​ಆರ್ ಚೇತನ್ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಬಳಿಕ ಪಂದ್ಯದ ಬಗ್ಗೆ ಮಾಧ್ಯಮದ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.

ಕರ್ನಾಟಕ ಪರ ಆಡುವುದೇ ನನ್ನ ಮೊದಲ ಗುರಿ ಎಂದ ಎಲ್​ಆರ್​ ಚೇತನ್​: ನಾನು ನಿಜವಾಗಿಯೂ ಕರ್ನಾಟಕದ ಪರ ಆಡಲು ಬಯಸುತ್ತೇನೆ. ಅದು ನನ್ನ ಮೊದಲ ಗುರಿಯಾಗಿದೆ. ನನ್ನಂತಹ ಆಟಗಾರನಿಗೆ ಮಹಾರಾಜ ಟ್ರೋಫಿ ಒಂದು ದೊಡ್ಡ ವೇದಿಕೆಯಾಗಿದೆ. ಈ ವೇದಿಕೆಯನ್ನು ನಾನು ಬಳಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.

ಓದಿ: ಮಹಾರಾಜ ಟ್ರೋಫಿ ಕ್ರಿಕೆಟ್ 2022... ಮಂಗಳೂರು ವಿರುದ್ಧ ಮನೀಶ್‌ ಪಾಂಡೆ ಬಳಗಕ್ಕೆ ರೋಚಕ ಜಯ

Last Updated : Aug 20, 2022, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.