ಲಂಡನ್: ಹಲವು ಆಟಗಾರರು ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ನಾನಾ ದಾಖಲೆಗಳನ್ನು ಮಾಡಿದರೂ, ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಮಾಡಿದ ದಾಖಲೆ ಈವರೆಗೆ ಯಾರೂ ಮಾಡಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಂದರ್ಭದಲ್ಲಿ 146 ವರ್ಷಗಳ ಇತಿಹಾಸ ಇರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಅಂತ ಒಂದು ದಾಖಲೆಯನ್ನು ಬ್ರಾಡ್ ಬರೆದಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್‌ನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಈ ಸಾಧನೆ ಮಾಡಿದ್ದಾರೆ.
-
His final ball faced in Test Cricket? 🤔
— England Cricket (@englandcricket) July 30, 2023 " class="align-text-top noRightClick twitterSection" data="
A MASSIVE six! ❤️@StuartBroad8 🙌 pic.twitter.com/jHg99Q2nAi
">His final ball faced in Test Cricket? 🤔
— England Cricket (@englandcricket) July 30, 2023
A MASSIVE six! ❤️@StuartBroad8 🙌 pic.twitter.com/jHg99Q2nAiHis final ball faced in Test Cricket? 🤔
— England Cricket (@englandcricket) July 30, 2023
A MASSIVE six! ❤️@StuartBroad8 🙌 pic.twitter.com/jHg99Q2nAi
ತಮ್ಮ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ, ಸ್ಟುವರ್ಟ್ ಬ್ರಾಡ್ ಕೊನೆಯ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ್ದರು ಮತ್ತು ಬೌಲಿಂಗ್ ಸಮಯದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರು. ಹಾಗೆ ನೋಡಿದರೆ, ಮೊದಲ ಬಾರಿಗೆ ಯಾವುದೇ ಒಬ್ಬ ಆಟಗಾರ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿ ಸಿಕ್ಸರ್ ಮತ್ತು ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಸಾಧನೆ ಮಾಡಿಲ್ಲ. ಮಿಚೆಲ್ ಸ್ಟಾರ್ಕ್ ಅವರ ಕೊನೆಯ ಎಸೆತವನ್ನು ಆಡುವಾಗ ಸ್ಟುವರ್ಟ್ ಬ್ರಾಡ್ ಸಿಕ್ಸರ್ ಬಾರಿಸಿದರು, ಬೌಲಿಂಗ್ನಲ್ಲಿ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
-
THANK YOU, BROAD.
— Johns. (@CricCrazyJohns) July 31, 2023 " class="align-text-top noRightClick twitterSection" data="
The legend of Test cricket - you will be remembered forever ❤️ pic.twitter.com/Um2uec2nUO
">THANK YOU, BROAD.
— Johns. (@CricCrazyJohns) July 31, 2023
The legend of Test cricket - you will be remembered forever ❤️ pic.twitter.com/Um2uec2nUOTHANK YOU, BROAD.
— Johns. (@CricCrazyJohns) July 31, 2023
The legend of Test cricket - you will be remembered forever ❤️ pic.twitter.com/Um2uec2nUO
ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ 37 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 16 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಕೇವಲ 21 ನೇ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಬ್ರಾಡ್, ಒಟ್ಟು 167 ಟೆಸ್ಟ್ ಪಂದ್ಯಗಳಲ್ಲಿ 604 ವಿಕೆಟ್ ಪಡೆಯುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅಲ್ಲದೇ ಬ್ಯಾಟಿಂಗ್ನಲ್ಲಿ ಅವರು 3,662 ರನ್ ಸಹ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಬ್ರಾಡ್ ಅವರ ಗರಿಷ್ಠ ಸ್ಕೋರ್ 169 ರನ್ ಆಗಿದೆ. ಅವರ ಬ್ಯಾಟ್‌ನಿಂದ ಒಂದು ಶತಕ ಮತ್ತು 13 ಅರ್ಧಶತಕಗಳು ಕೂಡ ಬಂದಿದೆ. ಬೌಲಿಂಗ್ನಲ್ಲಿ ಬ್ರಾಡ್ 20 ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದಾರೆ.
ಬ್ರಾಡ್ ನಿವೃತ್ತಿಯಿಂದ ಅಚ್ಚರಿ: ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ಗಾಗಿ ಹೆಚ್ಚು ಪಂದ್ಯಗಳನ್ನು ಒಟ್ಟಿಗೆ ಆಡಿರುವ ದಾಖಲೆ ಮಾಡಿದ್ದಾರೆ. ಭಾರತದ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಜೋಡಿ 146 ಟೆಸ್ಟ್ ಪಂದ್ಯಗಳನ್ನು ಒಟ್ಟಿಗೆ ಆಡಿದರೆ, ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ 138 ಇನ್ನಿಂಗ್ಸ್ಗಳನ್ನು ಒಟ್ಟಿಗೆ ಆಡಿದ್ದಾರೆ.
-
A farewell to remember ❤️ pic.twitter.com/lD8z9r9FRO
— ICC (@ICC) August 1, 2023 " class="align-text-top noRightClick twitterSection" data="
">A farewell to remember ❤️ pic.twitter.com/lD8z9r9FRO
— ICC (@ICC) August 1, 2023A farewell to remember ❤️ pic.twitter.com/lD8z9r9FRO
— ICC (@ICC) August 1, 2023
ಬ್ರಾಡ್ ಅವರ ಜೊತೆಗೆ ಸುದೀರ್ಘ ಕಾಲ ಬೌಲಿಂಗ್ ಮಾಡಿರುವ ಸಹವರ್ತಿ ಜೇಮ್ಸ್ ಆಂಡರ್ಸನ್, ಜೊತೆಗಾರನ ನಿವೃತ್ತಿಯ ಘೋಷಣೆಯ ಕುರಿತು ಮಾತನಾಡುತ್ತಾ, ಬ್ರಾಡ್ ಅವರ ನಿರ್ಧಾರವನ್ನು ಕೇಳಿ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ. "ಬ್ರಾಡ್ ನಿವೃತ್ತಿ ಹೇಳಿದಾಗ ಸ್ವಲ್ಪ ಗಾಬರಿಯಾಯಿತು. ಸಹ ಆಟಗಾರನಾಗಿ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ: Ashes 2023: 49 ರನ್ನಿಂದ ಆಸ್ಟ್ರೇಲಿಯಾ ಮಣಿಸಿದ ಆಂಗ್ಲರು.. ಆ್ಯಶಸ್ ಸರಣಿಯಲ್ಲಿ ಸಮಬಲ ಸಾಧಿಸಿದ ಇಂಗ್ಲೆಂಡ್